FACT CHECK | ತಿರುಪತಿಯ ಪ್ರಸಾದ ಲಾಡು ತಯಾರಿಸಲು ಪ್ರಾಣಿಗಳ ಕೊಬ್ಬಿನ ತುಪ್ಪ ಪೂರೈಕೆ ಮಾಡಿದ್ದು ಅಮುಲ್ ಡೈರಿಯಲ್ಲ! ಮತ್ತ್ಯಾವುದು?

ತಿರುಪತಿಯ ಪ್ರಸಾದ ಲಾಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎಂಬ ವಿವಾದ ದೇಶದಾದ್ಯಂತ ಸದ್ದು ಮಾಡಿದೆ. “ತಿರುಪತಿ ದೇವಸ್ಥಾನಕ್ಕೆ ಮೊದಲು ನಂದಿನಿ ಸಂಸ್ಥೆಯು ತುಪ್ಪ ಪೂರೈಸುತ್ತಿತ್ತು ಆದರೆ ಅದನ್ನು ಸ್ಥಗಿತಗೊಳಿಸಿ ಅಮುಲ್ (Amul) ಸಂಸ್ಥೆಯಯೊಂದಿಗೆ ತುಪ್ಪ ಪೂರೈಸಲು ಒಪ್ಪಂದ ಮಾಡಿಕೊಳ್ಳಲಾಯ್ತು. ಎಂಬ ಬರಗದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬ ವರದಿಗಳ ನಂತರ, ಅಮುಲ್ ತಿರುಮಲ ತಿರುಪತಿ ದೇವಸ್ಥಾನಕ್ಕೆ ತುಪ್ಪವನ್ನು ಸರಬರಾಜು ಮಾಡುತ್ತಿತ್ತು ಎಂದು ಪ್ರತಿಪಾದಿಸಿ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಪ್ರಧಾನಿ ಮೋದಿ ಅಮುಲ್ ಗೆ ಪ್ರಚಾರ ನೀಡಿದ ಒಂದೇ ಕಾರಣಕ್ಕೆ ನಂದಿನಿ ಬ್ರಾಂಡ್‌ ಬದಲಿಗೆ ತಿರುಪತಿ ಲಾಡು ತಯಾರಿಸಲು ಅಮುಲ್ ತುಪ್ಪ ಪೂರೈಕೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು ಎಂದು ಆರೋಪಿಸಲಾಗಿದೆ. ಆಂಧ್ರದ ತಿರುಮಲ ತಿರುಪತಿ ದೇವಸ್ಥಾನದಲ್ಲಿ(ಟಿಟಿಡಿ ) ನೀಡುವ ಲಾಡ್ಡು ಪ್ರಸಾದ ತಯಾರಿಸಲು ನಂದಿನಿ ತುಪ್ಪವನ್ನು ನಿಲ್ಲಿಸಿದ ನಂತರ ಅಮುಲ್‌ಗೆ ನೀಡಲಾಗಿತ್ತು ಎಂಬ ಹೇಳಿಕೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್‌ :

ಈ ಸುದ್ದಿಯ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅಮುಲ್‌ ಸಂಸ್ಥೆಯು, ತಿರುಮಲ ತಿರುಪತಿ ದೇವಸ್ಥಾನಕ್ಕೆ(ಟಿಟಿಡಿ) ಎಂದಿಗೂ ತುಪ್ಪವನ್ನು ಸರಬರಾಜು ಮಾಡಿಲ್ಲ” ಎಂದು ದೃಢೀಕರಿಸಿ ಸ್ಪಷ್ಟನೆಯನ್ನು ಹೊರಡಿಸಿದೆ. ಹೆಚ್ಚುವರಿಯಾಗಿ, “ಅಮುಲ್ ತುಪ್ಪವನ್ನು ಹಾಲಿನಿಂದ ತಯಾರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ, ಇದು ISO ಪ್ರಮಾಣೀಕೃತವಾಗಿವೆ. ಅಮುಲ್ ತುಪ್ಪವನ್ನು ಉತ್ತಮ ಗುಣಮಟ್ಟದ ಶುದ್ಧ ಹಾಲಿನ ಕೊಬ್ಬಿನಿಂದ ತಯಾರಿಸಲಾಗುತ್ತದೆ. ಎಫ್‌ಎಸ್‌ಎಸ್‌ಎಐ ಕಲಬೆರಕೆ ಪತ್ತೆ ಸೇರಿದಂತೆ ಗುಣಮಟ್ಟದ ತಪಾಸಣೆಯನ್ನು ಕೂಡ ನಡೆಸಲಾಗಿದೆ. ಎಂದು ಪ್ರಕಟನೆಯನ್ನು ಹೊರಡಿಸಿದೆ.

 

 

 

 

 

 

 

 

“ದೇವಸ್ಥಾನಕ್ಕೆ ತುಪ್ಪ ಪೂರೈಸುತ್ತಿದ್ದ ಪ್ರಮುಖ ಪೂರೈಕೆದಾರ ತಮಿಳುನಾಡು ಮೂಲದ AR ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್, ಹೆಚ್ಚು ಕಲಬೆರಕೆ ತುಪ್ಪವನ್ನು ಪೂರೈಸಿದ್ದು, ಸಧ್ಯಕ್ಕೆ AR ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ. ತುಪ್ಪವನ್ನು ಒದಗಿಸಲು ಒಪ್ಪಂದ ಮಾಡಿಕೊಂಡ ಐದು ಪೂರೈಕೆದಾರರಲ್ಲಿ, ಕೇವಲ AR ಡೈರಿಯು ವಂಚನೆ ನಡೆಸಿದೆ, ಅವರ ಉತ್ಪನ್ನವು ಅಪಾಯಕಾರಿಯಾದ ಹೆಚ್ಚಿನ ಮಟ್ಟದ ವಿದೇಶಿ ಕೊಬ್ಬನ್ನು ಒಳಗೊಂಡಿರುವುದು ಕಂಡುಬಂದಿದೆ” ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿರುವುದನ್ನು ಇಲ್ಲಿ ನೋಡಬಹುದು.

ಅಮುಲ್‌ನಿಂದ ಸ್ಪಷ್ಟನೆ :

ತಿರುಪತಿಯ ಪ್ರಸಾದ ಲಾಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎಂಬ ವಿವಾದ ದೇಶದಾದ್ಯಂತ ಸದ್ದು ಮಾಡಿದೆ. ಈ ನಡುವೆ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ತುಪ್ಪವನ್ನು ಪೂರೈಸಿದೆ ಎಂಬ ಹೇಳಿಕೆಯನ್ನು ಗುಜರಾತಿನ ಹಾಲು ಉತ್ಪಾದಕರ ಸಹಕಾರ ಸಂಘದ ಬ್ರ್ಯಾಂಡ್‌ ಅಮೂಲ್‌ ತಳ್ಳಿಹಾಕಿದೆ.

ತಿರುಮಲ ತಿರುಪತಿ ದೇವಸ್ಥಾನಕ್ಕೆ ಅಮೂಲ್ ತುಪ್ಪವನ್ನು ಪೂರೈಕೆ ಮಾಡಲಾಗುತ್ತಿದೆ ಎಂಬ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅಮೂಲ್‌, ‘ತಾನು ಎಂದಿಗೂ ಟಿಟಿಡಿಗೆ ತುಪ್ಪವನ್ನು ಪೂರೈಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ತನ್ನ ವಿರುದ್ಧದ ಈ ಅಪಪ್ರಚಾರವನ್ನು ನಿಲ್ಲಿಸುವಂತೆ’ ತಿಳಿಸಿದೆ.

‘ಅಮೂಲ್‌ ತುಪ್ಪವನ್ನು ಐಎಸ್ಒ ಪ್ರಮಾಣೀಕರಿಸಿದ ನಮ್ಮ ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳಲ್ಲಿ ಉತ್ತಮ ಗುಣಮಟ್ಟದ ಶುದ್ಧ ಹಾಲಿನ ಕೊಬ್ಬಿನಿಂದ ತಯಾರಿಸಲಾಗುತ್ತದೆ. ತಮ್ಮ ಉತ್ಪನ್ನಗಳಿಗೆ ಬಳಸುವ ಹಾಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮಾರ್ಗಸೂಚಿಗಳ ಪ್ರಕಾರ ಕಲಬೆರಕೆ ಪತ್ತೆ ಸೇರಿದಂತೆ ಕಠಿಣ ಗುಣಮಟ್ಟದ ತಪಾಸಣೆಗೆ ಒಳಗಾಗುತ್ತದೆ’ ಎಂದು ಹೇಳಿದೆ.

50 ವರ್ಷಗಳಿಂದ ಭಾರತದಲ್ಲಿ ಮನೆಮಾತಾಗಿರುವ ಅಮೂಲ್‌ ತುಪ್ಪವನ್ನ ತಯಾರಿಸುವಲ್ಲಿ ಅನುಸರಿಸುವ ಕಠಿಣ ಉತ್ಪಾದನಾ ಮಾನದಂಡಗಳ ಬಗ್ಗೆಯೂ ಸ್ಪಷ್ಟಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮುಲ್‌ ತಿರುಮಲ ತಿರುಪತಿ ದೇವಸ್ಥಾನಕ್ಕೆ(ಟಿಟಿಡಿ) ತುಪ್ಪ ಪೂರೈಸುತ್ತಿರಲಿಲ್ಲ ಹಾಗಾಗಿ ನಂದಿನಿ ಬದಲು ಅಮುಲ್‌ಗೆ ತುಪ್ಪ ಪೂರೈಕೆಗೆ ಒಪ್ಪಂದ ನೀಡಲಾಗಿತ್ತು ಎಂಬುದು ಸುಳ್ಳು. ವಾಸ್ತವವಾಗಿ ಪ್ರಾಣಿ ಕೊಬ್ಬಿನ ಕಲಬೆರೆಕೆ ತುಪ್ಪವನ್ನು ಪೂರೈಕೆ ಮಾಡಿದ್ದು AR ಡೈರಿ ಎಂಬ ಸಂಸ್ಥೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಉತ್ತರ ಪ್ರದೇಶದಲ್ಲಿ ಗೋಡೆ ಕುಸಿತಕ್ಕೆ ಕಾರಣ ಡಿಜೆ ಸೌಂಡ್‌ ಅಲ್ಲ! ಹಾಗಿದ್ದರೆ ಮತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights