“ಕೆಆರ್ಎಸ್ ಬಾಗಿಲಿಗೆ ಸುಮಲತಾ ಅವರನ್ನು ಮಲಗಿಸಿ ” ಹೆಚ್ಡಿಕೆ ಹೇಳಿಕೆ ವಿರುದ್ಧ ಸುಮಲತಾ ಗರಂ!

ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಇಬ್ಬರ ಮಧ್ಯೆ ಜಟಾಪಟಿ ನಡೆದಿದೆ.

ಕೆಆರ್ಎಸ್ ಸುತ್ತಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಕೆಆರ್ಎಸ್ ಆಣೆಕಟ್ಟೆಗೆ ಹಾನಿಯಾಗುತ್ತಿದೆ. ಇದರ ಬಗ್ಗೆ ಸರ್ಕಾರಕ್ಕೆ ಗಮನ ತಂದಿದ್ದೇನೆ. ಇದರ ಬಗ್ಗೆ ಜಿಲ್ಲಾಡಳಿತಕ್ಕೆ ಗಮನ ಹರಿಸುತ್ತದೆ ಎಂದು ಸುಮಲತಾ ಮಂಡ್ಯ ಸಭೆಯಲ್ಲಿ ಮಾತನಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಸುಮಲತಾಗೆ ಟಾಂಗ್ ಕೊಟ್ಟಿದ್ದಾರೆ. ಕೆಆರ್ಎಸ್ ನಿಂದ ನೀರು ಸೋರುತ್ತಿದೆ ಅಂದರೆ ಸುಮಲತಾ ಅವರನ್ನು ಕೆಆರ್ಎಸ್ ಬಾಗಿಲಿಗೆ ಮಲಗಿಸಿ. ಅವರ ಅಧಿಕಾರವನ್ನು ಜನತೆ ಋಣ ತೀರಿಸುವ ನಿಟ್ಟಿನಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲಾ ಮುಂದಿನ ದಿನಗಳಲ್ಲಿ ಜನ ಪಾಠ ಕಲಿಸುತ್ತಾರೆ ಎಂದಿದ್ದಾರೆ.

ಹೆಚ್ಡಿಕೆ ಹೇಳಿಕೆ ವಿರುದ್ಧ ಸುಮಲತಾ ಗರಂ ಆಗಿದ್ದಾರೆ. ಡ್ಯಾಂ ಸೀಳಿರುವ ಬಗ್ಗೆ ನಾನು ಕಾಳಜಿಯಿಂದ ಹೇಳಿರೋದು. ಸಂಸದೆಯಾಗಿ ಬಿಡಿ ಒಬ್ಬ ಮಹಿಳೆ ಬಗ್ಗೆ ಇಂಥಹ ಹೇಳಿಕೆ ನೀಡುವುದು ಯಾವ ಸಂಸ್ಕಾರ? ಮಾಜಿ ಮುಖ್ಯಮಂತ್ರಿಗೆ ಕನಿಷ್ಠ ಜ್ಞಾನ ಇಲ್ವಾ..? ಪದಗಳ ಬಗ್ಗೆ ಹಿಡಿತ ಇಲ್ವಾ..? ಜನ ಚುನಾವಣೆಯಲ್ಲಿ ಯಾಕೆ? ಯಾರಿಗೆ? ಬುದ್ಧಿ ಕಲಿಸಿದ್ದಾರೆ ಅನ್ನೋದು ಇನ್ನೂ ಕಣ್ಣ ಮುಂದಿದೆ. ಈ ರೀತಿ ಮಾತಿನಿಂದ ಜನ ಬೇಸರವಾಗಿದ್ದಾರೆ. ಇಂಥಹ ಮಟ್ಟಕ್ಕೆ ಇಳಿದು ಬಾಯಿತಪ್ಪಿ ನಾನು ಮಾತನಾಡಿಲ್ಲ. ಅವರ ಮಾತು ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights