ನಿರಂತರವಾಗಿ ರೂಪಾಂತರಗೊಳ್ಳುವ ಡೆಲ್ಟಾ ಪ್ಲಸ್‌ ವಿಶ್ವಕ್ಕೆ ಅಪಾಯಕಾರಿ: WHO ಎಚ್ಚರಿಕೆ

ನಿರಂತರವಾಗಿ ರೂಪಾಂತರಗೊಳ್ಳುತ್ತಿರುವ ಡೆಲ್ಟಾ ಪ್ಲಸ್‌ ವೈರಸ್‌ ಭಾರೀ ಅಪಾಯಕಾರಿಯಾಗಿದ್ದು, ಇಡೀ ವಿಶ್ವಕ್ಕೆ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಈ ಬಗ್ಗೆ ಎಲ್ಲಾ ದೇಶಗಳಿಗೂ ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕ ಟೆಟ್ರೋಸ್ ಅದಾನೋಂ ಗೇಬ್ರಿಯಾಸಸ್ ಅವರು, ಡೆಲ್ಟಾ ಮಾದರಿ ಭಯಾನಕ ರೂಪ ತಾಳುವ ಸಾಧ್ಯತೆ ಇದ್ದು, ಕಡಿಮೆ ಲಸಿಕೆ ಹಾಕಿಸಿರುವ ದೇಶಗಳ ಪರಿಸ್ಥಿತಿ ಊಹಿಸಲು ಅಸಾಧ್ಯವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಡೆಲ್ಟಾ ರೂಪಾಂತರಿ ಕ್ಷಣ ಮಾತ್ರದಲ್ಲಿ ಹರಡುವ ಸಾಮರ್ಥ್ಯ ಹೊಂದಿರುವುದರಿಂದ ಈಗಾಗಲೇ ಹಲವಾರು ದೇಶಗಳು ಡೆಲ್ಟಾ ಸೋಂಕಿಗೆ ಸಿಲುಕಿಕೊಂಡಿವೆ ಎಂದು ಅವರು ಹೇಳಿದರು. ಡೆಲ್ಟಾ ಸೋಂಕು ಎಲ್ಲಾ ದೇಶಗಳಿಗೂ ಹಬ್ಬುತ್ತಿದೆ. ಇದುವರೆಗೂ ಯಾವುದೇ ದೇಶ ಡೆಲ್ಟಾದಿಂದ ಹೊರ ಬರಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಈಗಾಗಲೇ ವಿಶ್ವದ 98 ರಾಷ್ಟ್ರಗಳಲ್ಲಿ ತನ್ನ ಕಬಂಧ ಬಾಹು ಚಾಚಿರುವ ಡೆಲ್ಟಾ ಮಾದರಿ ಇನ್ನಿತರ ಹಲವಾರು ರಾಷ್ಟ್ರಗಳಿಗೆ ಅತಿ ವೇಗವಾಗಿ ಹರಡುತ್ತಿದ್ದು , ಕೆಲವೇ ದಿನಗಳಲ್ಲಿ ಅದರ ಭೀಕರತೆ ಕಂಡು ಬರಲಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕ ಆರೋಗ್ಯ ಹಾಗೂ ಅತಿ ಶೀಘ್ರ ಕೊರೊನಾ ಪರೀಕ್ಷೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕರೇ ಸಾಮಾಜಿಕ ಅಂತರ ಕಾಪಾಡಿಕೊಂಡು ಜನಸಂದಣಿ ಪ್ರದೇಶಗಳಿಗೆ ತೆರಳದಂತೆ ಮನೆಯಲ್ಲೇ ಇದ್ದು ಡೆಲ್ಟಾ ಸೋಂಕಿನಿಂದ ಬಚಾವಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸುವೇಂದು ಭೇಟಿ ಮಾಡಿದ ‘ತುಷಾರ್‌ ಮೆಹ್ತಾ’ರನ್ನು ಸಾಲಿಟರ್ ಜನರಲ್‌ ಹುದ್ದೆಯಿಂದ ವಜಾಗೊಳಿಸಿ: ಮೋದಿಗೆ ಟಿಎಂಸಿ ಪತ್ರ

Spread the love

Leave a Reply

Your email address will not be published. Required fields are marked *