FACT CHECK | ಉತ್ತರ ಪ್ರದೇಶದಲ್ಲಿ ಗೋಡೆ ಕುಸಿತಕ್ಕೆ ಕಾರಣ ಡಿಜೆ ಸೌಂಡ್‌ ಅಲ್ಲ! ಹಾಗಿದ್ದರೆ ಮತ್ತೇನು?

” ಮಹಾರಾಷ್ಟ್ರದ ನಾಗ್ಪುರದಲ್ಲಿ ಡಿಜೆ ಸೌಂಡ್‌ಗಳ ಕಂಪನದಿಂದಾಗಿ ಗೋಡೆ ಕುಸಿದಿದೆ ಮತ್ತು ಸಮಾರಂಭದ ವೇಳೆ ಅನೇಕ ಜನರು ಗಾಯಗೊಂಡಿದ್ದಾರೆ. ಈಗಲಾದರೂ ಅರ್ಥ ಮಾಡಿಕೊಳ್ಳಿ ಡಿಜೆ ಹಬ್ಬ ಅಥವಾ ಇನ್ನಿತರೆ ಸಂಭ್ರಮದ ಸಡಗರದ ಸಂದರ್ಭದಲ್ಲಿ ಡಿಜೆ ಎಷ್ಟೊಂದು ಅಪಾಯಕಾರಿ ಎಂದು. ಈ ಘಟನೆಯ ನಂತರವಾದರೂ ಡಿಜೆಯನ್ನು ಬ್ಯಾನ್ ಮಾಡಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ” ಎಂಬ ಬರಹದೊಂದಿಗೆ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟ್‌ಗಿಂದ ಪ್ರಭಾವಿತರಾದ ಹಲವರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿಜೆ ಬಳಕೆಯನ್ನು ನಿಷೇಧಿಸಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕುತ್ತಿದೆ. ಹೀಗೆ ವಿವಿಧ ಅಭಿಪ್ರಾಯಗಳಿಂದ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ ‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಗ್ಪುರದಲ್ಲ, ಬದಲಿಗೆ ಉತ್ತರಪ್ರದೇಶದಲ್ಲಿ ನಡೆದಿದೆ ಎಂಬ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡ ಎಕ್ಸ್ ಪೋಸ್ಟ್ ನಲ್ಲಿ ಲಭ್ಯವಾಗಿದೆ.

ಈ ಮಾಹಿತಿ ಅಧಾರದ ಮೇಲೆ ಇನ್ನಷ್ಟು ಸರ್ಚ್ ಮಾಡಿದಾಗ,  8 ಡಿಸೆಂಬರ್ 2023 ರಂದು NDTV ಟಿವಿಯ youtube ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ ವರದಿಯೊಂದು ಲಭ್ಯವಾಗಿದೆ. ಆ ವರದಿಯಲ್ಲಿ ವೈರಲ್ ವಿಡಿಯೋದ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯ ಘೋಜಿ಼ ಪ್ರದೇಶದಲ್ಲಿ ನಡೆದಿದೆ ಎಂಬುದು ತಿಳಿದು ಬಂದಿದೆ. ಈ ವರದಿಯ ಪ್ರಕಾರ ಮಸಬ್ಬೂರು ಹಸನ್ ಒಡೆತನದ ಖಾಲಿ ನಿವೇಶನದಲ್ಲಿದ್ದ 10 ಅಡಿ ಎತ್ತರ, 15 ಅಡಿ ಉದ್ದದ ಗೋಡೆಯು ಘೋಸಿಯ ಗಯಾಸುದ್ದೀನ್ ಎಂಬುವವರು ಹಾಕಿದ್ದ ಮರಳಿನ ಅಸ್ಥಿರತೆಯಿಂದ ಕುಸಿದು ಬಿದ್ದಿದೆ.

ಇನ್ನು ಈ ಘಟನೆ ಮದುವೆಯೊಂದರ ಮೆರವಣಿಗೆಯ ವೇಳೆಯಲ್ಲಿ ನಡೆದಿದೆ ಎಂಬುದು ತಿಳಿದು ಬಂದಿದ್ದು‌, ಈ ವೇಳೆ ಯಾವುದಾದರೂ ಸದ್ದಿಗೆ ಗೋಡೆ ಕುಸಿದಿದೆ ಎಂದು ಪರಿಶೀಲನೆಯನ್ನು ನಡೆಸಿದಾಗ, ಮೌ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ದಾಖಲೆಗಳು ಮತ್ತು ಪೊಲೀಸರ ಅಧಿಕೃತ ಹೇಳಿಕೆಗಳು ಗೋಡೆ ಕುಸಿತಕ್ಕೆ ಶಬ್ದಗಳೇ ಕಾರಣ ಎಂಬ ಯಾವುದೇ ಉಲ್ಲೇಖವು ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಡಿಜೆ ಸದ್ದಿಗೆ ಗೋಡೆ ಕುಸಿದು ಬಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ ಉತ್ತರಪ್ರದೇಶದ ಮೌ ಜಿಲ್ಲೆಗೆ ಸಂಬಂಧಿಸಿದಾಗಿದೆ. ಗೋಡೆ ಶಿಥಿಲಗೊಂಡ ಕಾರಣದಿಂದಾಗಿ ಕುಸಿದು ಬಿದ್ದಿದೆ ಎಂಬುದು ಹಲವು ವರದಿಗಳಿಂದ ದೃಢಪಟ್ಟಿದೆ. ಹಾಗಾಗಿ ಪೋಸ್ಡ್‌ನ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CJECK | ಅಕ್ರಮ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಪೊಲೀಸ್ ಅಧಿಕಾರಿಯ ಬಂಧನ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights