FACT CHECK | ಬಾಂಗ್ಲಾದೇಶಕ್ಕೆ ಭಾರತದಿಂದ ಪೂರೈಕೆಯಾಗುತ್ತಿದ್ದ ವಿದ್ಯುತ್ ಸ್ಥಗಿತ ಮಾಡಲಾಗಿದೆಯೇ?

ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್‌ ಪೂರೈಕೆಯನ್ನು ನಿಲ್ಲಿಸಿದೆ ಮತ್ತು ಬಾಂಗ್ಲಾದೇಶವು ಭಾರತಕ್ಕೆ ಹಿಲ್ಸಾ ಮೀನುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ ಎಂಬ ಪೋಸ್ಟ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ‌

 

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬುದು ನಿಜವೇ ಎಂಬುದನ್ನು ಪರಿಶೀಲಿಸಲು, ಸಂಬಂಧಿತ ಕೀವರ್ಡ್ ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಯಾವುದೇ ವಿಶ್ವಾಸಾರ್ಹ ವರದಿಗಳು ಲಭ್ಯವಾಗಿಲ್ಲ.

ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್ (BPDB) ಅದಾನಿ ಪವರ್ ಮತ್ತು NTPC ಯಂತಹ ಇತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸೇರಿದಂತೆ ಭಾರತೀಯ ವಿದ್ಯುತ್ ಉತ್ಪಾದಕರಿಗೆ ಪಾವತಿಸದ ಬಿಲ್‌ಗಳಲ್ಲಿ ,ಸುಮಾರು $1 ಶತಕೋಟಿ ಪಾವತಿಸಬೇಕಾಗುತ್ತದೆ ಎಂಬ ಹಲವಾರು ಸುದ್ದಿ ವರದಿಗಳು ಲಭಿಸಿವೆ.

 

 

 

 

 

 

 

 

 

 

‘ಬಿಸಿನೆಸ್ ಸ್ಟ್ಯಾಂಡರ್ಡ್’ ವರದಿಯ ಪ್ರಕಾರ, ಬಾಂಗ್ಲಾದೇಶ ಬ್ಯಾಂಕ್‌ನ ಹೊಸದಾಗಿ ನೇಮಕಗೊಂಡ ಗವರ್ನರ್ ಅಹ್ಸಾನ್ ಎಚ್. ಮನ್ಸೂರ್ ಅವರು ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಅದಾನಿ ಪವರ್‌ಗೆ ನೀಡಬೇಕಾದ ಗಣನೀಯ ಸಾಲವನ್ನು ದೃಢಪಡಿಸಿದ್ದಾರೆ. ಅದಾನಿ ಪವರ್ ಜಾರ್ಖಂಡ್‌ನ ಗೊಡ್ಡಾದಲ್ಲಿ ಕಲ್ಲಿದ್ದಲು ಆಧಾರಿತ ಸ್ಥಾವರವನ್ನು ನಿರ್ವಹಿಸುತ್ತದೆ, ಇದನ್ನು ಬಾಂಗ್ಲಾದೇಶಕ್ಕೆ ಪ್ರತ್ಯೇಕವಾಗಿ ವಿದ್ಯುತ್ ಸರಬರಾಜು ಮಾಡಲು ಸ್ಥಾಪಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ ‘ ವರದಿಯು ಅದಾನಿ ಪವರ್ ಕಮಿಟಿಯವರು  ಬಾಂಗ್ಲಾದೇಶ ಸರ್ಕಾರಕ್ಕೆ ಪತ್ರವನ್ನು ಕಳುಹಿಸಿದ್ದು, BPDB ಯ ವಿದ್ಯುಚ್ಛಕ್ತಿಗಾಗಿ ನೀಡಬೇಕಿರುವ $800 ಮಿಲಿಯನ್ ಪಾವತಿಸಲು ವಿನಂತಿಸಿದೆ ಎಂದು ಉಲ್ಲೇಖವಾಗಿದೆ. ಹೆಚ್ಚುತ್ತಿರುವ ಸಾಲದ ಹೊರತಾಗಿಯೂ, ಅದಾನಿ ಪವರ್ ಬಾಂಗ್ಲಾದೇಶ ಸರ್ಕಾರಕ್ಕೆ ವಿಶ್ವಾಸಾರ್ಹ, ಸೂಕ್ತವಾದ ಬೆಲೆಯ ವಿದ್ಯುತ್‌ನ್ನು ಒದಗಿಸುವುದನ್ನು ಮುಂದುವರಿಸುವುದಾಗಿ ಭರವಸೆ ನೀಡಿದೆ ಎಂದು ವರದಿಯಲ್ಲಿ ಪ್ರಕಟವಾಗಿದೆ.

2024ರ ಸೆಪ್ಟೆಂಬರ್ 11ರಂದು ಪ್ರಕಟವಾದ, ‘ ಢಾಕಾ ಟ್ರಿಬ್ಯೂನ್ ‘ ವರದಿಯು “ಭಾರತದ ಸಾರ್ವಜನಿಕ ಮತ್ತು ಖಾಸಗಿ ವಲಯದ ವಿದ್ಯುತ್ ಉತ್ಪಾದಕರಿಂದ ಭೆರಾಮರ ಸಂಪರ್ಕದ ಮೂಲಕ 1,000 MW ಅನ್ನು ನಿರೀಕ್ಷಿಸಲಾಗಿದ್ದರೂ, ಪ್ರಸ್ತುತ  880 MW ಮಾತ್ರ ಪಡೆಯಲಾಗುತ್ತಿದೆ” ಎಂದು ಉಲ್ಲೇಖಿಸಿದೆ. Tk 9,500 ಕೋಟಿ ($800 ಮಿಲಿಯನ್) ಪಾವತಿಸದ ಬಿಲ್ ಕಲ್ಲಿದ್ದಲಿನ ಕೊರತೆಯನ್ನು ಉಂಟುಮಾಡಿದೆ. ಬಾಂಗ್ಲಾದೇಶಕ್ಕೆ ಅದಾನಿ ಸಮೂಹದ ವಿದ್ಯುತ್ ಪೂರೈಕೆಯನ್ನು 1,000 MW ಗೆ ಸೀಮಿತಗೊಳಿಸಿದೆ ಎಂದು ಉಲ್ಲೇಖಿಸಿದೆ.  ಭಾರತದ ತ್ರಿಪುರಾದಿಂದ ಪೂರೈಕೆಯು ಕುಸಿದಿದೆ, ನಿರೀಕ್ಷಿತ 160 MW ಬದಲಿಗೆ ಕೇವಲ 60-90 MW ಪ್ರತಿ ಗಂಟೆಗೆ ತಲುಪಿಸಲಾಗುತ್ತಿದೆ.

ಭಾರತೀಯ ರಾಷ್ಟ್ರೀಯ ಲೋಡ್ ಡಿಸ್ಪ್ಯಾಚ್ ಸೆಂಟರ್ (GRID-INDIA) ವೆಬ್‌ಸೈಟ್  ಪರಿಶೀಲಿಸಿದಾಗ, ಈ  ವರದಿಯಲ್ಲಿ 2024ರ ಸೆಪ್ಟೆಂಬರ್ 18 ರಂದು ಸುಮಾರು 47.7 ಮಿಲಿಯನ್ ಯೂನಿಟ್ ವಿದ್ಯುತ್ , 2024ರ ಸೆಪ್ಟೆಂಬರ್ 11 ರಂದು ಸುಮಾರು 47.5 ಮಿಲಿಯನ್ ಯೂನಿಟ್,  2024ರ ಆಗಸ್ಟ್ 30 ರಂದು ಸುಮಾರು 46.23 ಮಿಲಿಯನ್ ಯೂನಿಟ್ ವಿದ್ಯುತ್, 2024ರ ಸೆಪ್ಟೆಂಬರ್ 11 ರಂದು ಸುಮಾರು 47.5 ಮಿಲಿಯನ್ ಯೂನಿಟ್, 2024ರ ಆಗಸ್ಟ್ 10 ರಂದು ಸುಮಾರು 47.7 ಮಿಲಿಯನ್ ಯೂನಿಟ್‌ಗಳನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಸರಬರಾಜು ಮಾಡಲಾಗಿದೆ. ಭಾರತವು ಬಾಂಗ್ಲಾದೇಶಕ್ಕೆ ತನ್ನ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿಲ್ಲ, ಮತ್ತು ಇತ್ತೀಚೆಗೆ ವಿದ್ಯುತ್‌ನ್ನು ತೀವ್ರವಾಗಿ ಕಡಿಮೆ ಮಾಡಿಲ್ಲ ಎಂದು ಈ ಕೆಳಗಿನ ಪಟ್ಟಿಯಲ್ಲಿ ನಿಖರವಾಗಿದೆ.

 

 

 

 

 

 

 

 

ಪವರ್ ಗ್ರಿಡ್ ಎಂಬ ಬಾಂಗ್ಲಾದೇಶದ ವೆಬ್‌ಸೈಟ್ ಪರಿಶೀಲಿಸಿದಾಗ, ಇದು ಬಾಂಗ್ಲಾದೇಶದಲ್ಲಿ ವಿದ್ಯುತ್ ಪೂರೈಕೆಯ ಕಾರ್ಯವನ್ನು ನಿರ್ವಹಿಸುತ್ತದೆ.  ಭಾರತದಿಂದ ಬಾಂಗ್ಲಾದೇಶಕ್ಕೆ ಸರಬರಾಜು ಮಾಡಲಾದ ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಡಾಟಾ ಈ ವರದಿಯಲ್ಲಿ ದಾಖಲಾಗಿದೆ.

 

 

 

 

 

 

 

 

ಬಾಂಗ್ಲಾದೇಶ ಸರ್ಕಾರವು ಭಾರತಕ್ಕೆ ಹಿಲ್ಸಾ ಮೀನುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ ಎಂದು ಹೇಳುವ ಹಲವಾರು ವರದಿಗಳು ಲಭಿಸಿವೆ. ಈ ಮೀನನ್ನು, ವಿಶೇಷವಾಗಿ ಪದ್ಮಾನದಿಯಿಂದ ಸಾಂಪ್ರದಾಯಿಕವಾಗಿ ಭಾರತಕ್ಕೆ ದುರ್ಗಾ ಪೂಜೆಯ ಸಮಯದಲ್ಲಿ ಕಳುಹಿಸಲಾಗುತ್ತದೆ ಮತ್ತು ಹಬ್ಬದ ಋತುವಿನಲ್ಲಿ ಬೆಂಗಾಲಿ ಪಾಕಪದ್ಧತಿಗೆ ಇದು ಅವಶ್ಯಕವಾಗಿದೆ.

 

 

 

 

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶ ಭಾರತಕ್ಕೆ ಹಿಲ್ಸಾ ಮೀನಿನ ರಫ್ತನ್ನು ನಿಷೇಧಿಸಿದೆ, ಆದರೆ ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸೋಪು ತಯಾರಿಕಾ ಘಟಕದ ವಿಡಿಯೋವನ್ನು ನ್ಯೂಡೆಲ್ಸ್‌ನದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights