ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ 289 ಅಂಬುಲೆನ್ಸ್ ಸೇವೆ ಲಭ್ಯ…
ತುರ್ತು ಸಂದರ್ಭದಲ್ಲಿ ಸಂಜೀವಿನಿಯಾದ ಆರೋಗ್ಯ ಕವಚ 108 ಅಂಬುಲೆನ್ಸ್ ಗಳ ಕೊರತೆ ತಲೆದೊರಿದೆ…! ಅಪಘಾತ, ಹೆರಿಗೆ ಹಾಗೂ ವಿವಿಧ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಗಳು ಜೀವ ಉಳಿಸುವ ಕಾರ್ಯ ಮಾಡುತ್ತಿವೆ..! ಯಾದಗಿರಿಯಲ್ಲಿ ಕೂಡ ಅಂಬುಲೆನ್ಸ್ ಗಳ ಸಮಸ್ಯೆ ತಲೆದೊರಿದ್ದು,ತುರ್ತು ಪರಿಸ್ಥಿತಿಯಲ್ಲಿ ಪರದಾಡುವಂತಾಗಿದೆ.ಯಾದಗಿರಿ ಸೇರಿದಂತೆ ರಾಜ್ಯಾದ್ಯಂತ ಹೆಚ್ಚಿನ ಅಂಬುಲೆನ್ಸ್ ಗಳು ಅವಶ್ಯಕತೆ ಇದ್ದು ಈ ಕೊರತೆ ನಿಗಿಸಲು ಅಧುನಿಕ ಸೌಲಭ್ಯವುಳ್ಳ ಅಂಬುಲೆನ್ಸ್ ಶೀಘ್ರವೇ ರಸ್ತೆಗಿಳಿಯಲಿವೆ.

ತುರ್ತು ಸಂದರ್ಭದಲ್ಲಿ ಜನರಿಗೆ ಉಚೀತ ಸೇವೆ ಸಲ್ಲಿಸಲು ಈ ಹಿಂದೆ 2008 ರ ಸಾಲಿನಲ್ಲಿ ಬಿಎಸ್ ವೈ ಸಿಎಂ ಆಗಿದ್ದಾಗ ಅಂದು ಆರೋಗ್ಯ ಸಚಿವರಾಗಿದ್ದ ಬಿ.ಶ್ರೀರಾಮುಲು ಜನರ ಕಾಳಜಿ ವಹಿಸಿ ತುರ್ತು ಅಂಬುಲೆನ್ಸ್ ಸೇವೆ ನೀಡಲು ಖಾಸಗಿ ಸಹಭಾಗಿತ್ವದಲ್ಲಿ 108 ಆರೋಗ್ಯ ಕವಚ ವಿನೂತನದ ತುರ್ತು ನಿರ್ವಹಣಾ ಸೇವೆಯನ್ನು ಕಲ್ಪಿಸಿದರು.ಈ ಯೋಜನೆ ರೋಗಿ,ಗಾಯಗೊಂಡವರಿಗೆ ಹಾಗೂ ಇನ್ನಿತರ ತುರ್ತು ಚಿಕಿತ್ಸೆ ಪಡೆದು ಬದುಕುಳಿದಿದ್ದಾರೆ.ಅದೆ ರೀತಿ ಹಲವಾರು ಸರಕಾರ ಅಧಿಕಾರಕ್ಕೆ ಬಂದ ನಂತರವು ವಿವಿಧ ಮಾದರಿಯ ಅಂಬುಲೆನ್ಸ್ ಸೌಲಭ್ಯ ನೀಡಿವೆ.

ರಾಜ್ಯದಲ್ಲಿ 108 ಆರೋಗ್ಯ ಕವಚದ 711 ಅಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿವೆ.ಪ್ರಸ್ತುತ ಯಾದಗಿರಿ ಸೇರಿದಂತೆ ರಾಜ್ಯದಲ್ಲಿ 352 ಅಂಬುಲೆನ್ಸ್ ಗಳು ಹಾಳು ಬಿದ್ದಿವೆ ಹಾಳು ಬಿದ್ದ ಅಂಬುಲೆನ್ಸ್ ಗಳು ಹರಾಜು ಮಾಡಿ ಹೊಸ ಅಂಬುಲೆನ್ಸ್ ಖರೀದಿಗೆ ಸರಕಾರ ಮುಂದಾಗಿದೆ.ಯಾದಗಿರಿ ಜಿಲ್ಲೆಯಲ್ಲಿ ಆರೋಗ್ಯ ಕವಚದ 12 ಅಂಬುಲೆನ್ಸ್ ಗಳಿದ್ದು ಇನ್ನೂ ನಾಲ್ಕು ಆಸ್ಪತ್ರೆಗಳಿಗೆ ಅವಶ್ಯ ಇವೆ. ಅದೆ ರೀತಿ ರಾಜ್ಯದ ವಲಯದ 800 ಅಂಬುಲೆನ್ಸ್ ಗಳಿವೆ,ನಗು ಮಗು ಅಂಬುಲೆನ್ಸ್ ಗಳು ಸಹಿತ ಇವೆ.

ಪ್ರಸ್ತುತ 90 ಸಾವಿರ ಜನಸಂಖ್ಯೆಗೆ ಒಂದು 108 ಆರೋಗ್ಯ ಕವಚದ ಅಂಬುಲೆನ್ಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ.ಇದರಿಂದ ಕೊರತೆ ತಲೆದೊರಿವೆ. ಆದ್ರೆ,ಈಗ ಆರೋಗ್ಯ ಇಲಾಖೆ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಸುಲಭದ ತುರ್ತು ಸೇವೆ ಕಲ್ಪಿಸಲು 60 ಸಾವಿರ ಜನಸಂಖ್ಯೆಗೆ ಒಂದು 108 ಆರೋಗ್ಯ ಕವಚದ ಅಂಬುಲೆನ್ಸ್ ಸೌಲಭ್ಯ ಕಲ್ಪಿಸಲು ಹೆಜ್ಜೆ ಇಟ್ಟಿದೆ,,ಅಧುನಿಕ ಸೌಲಭ್ಯವುಳ್ಳ ಜನರಿಗೆ ಅಗತ್ಯ ಮಾಹಿತಿ ಕಲ್ಪಿಸುವ ಸೌಲಭ್ಯ,ಜಿಲ್ಲಾ ಕೇಂದ್ರಗಳಲ್ಲಿ ಮಾನಿಟರಿಂಗ್ ಸಿಸ್ಟಮ್ ಸೌಲಭ್ಯ ಜೊತೆ ಹೊಸದಾಗಿ 289 ಹೊಸ ಅಂಬುಲೆನ್ಸ್ ಸರಕಾರ ನೀಡುತ್ತಿದೆ.

ಈ ಬಗ್ಗೆ 108 ಅಂಬುಲೆನ್ಸ್ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 108 ವಿಭಾಗದ ಉಪನಿರ್ದೇಶಕ ಡಾ.ಸ್ವತಂತ್ರಕುಮಾರ ಬಣಕರ್ ಮಾತನಾಡಿ ,
ಸಚಿವ ಸಂಪುಟದಲ್ಲಿ ಅನುಮೋದನೆ ನಂತರ ಎಪ್ರೀಲ್ ತಿಂಗಳ ಒಳಗೆ ದೇಶದಲ್ಲಿಯೇ ಮೊದಲ ಬಾರಿ ಅಧುನಿಕ ಸೌಲಭ್ಯ ಜೊತೆ 60 ಸಾವಿರ ಜನಸಂಖ್ಯೆಗೆ ಒಂದು ಅಂಬುಲೆನ್ಸ್ ರಾಜ್ಯದ ಎಲ್ಲಾ ಕಡೆ ಸುಲಭವಾಗಿ ಸಿಗಲಿವೆ.ಇದರಿಂದ ಮತ್ತಷ್ಟು ಜನರಿಗೆ ಅನಕೂಲವಾಗಲಿದೆ ಇದರಿಂದ 108 ಅಂಬುಲೆನ್ಸ್ 1 ಸಾವಿರ ಸಂಖ್ಯೆ ಹೆಚ್ಚಾಗಲಿವೆ ಅಂದುಕೊಂಡಂತೆ ಆದ್ರೆ ಎಪ್ರೀಲ್ ತಿಂಗಳಲ್ಲಿ ದೇಶದಲ್ಲಿಯೇ ಮೊದಲು ನಮ್ಮ ರಾಜ್ಯದಲ್ಲಿ ಅಧುನಿಕ ಸೌಲಭ್ಯದೊಂದಿಗೆ ಅಂಬುಲೆನ್ಸ್ ಸೇವೆ ಸಿಗಲಿವೆ ಎಂದು ತಿಳಿಸಿದ್ದಾರೆ.

