FACT CHECK | ತಿರುಪತಿ ಪ್ರಸಾದಕ್ಕೆ ತುಪ್ಪ ಪೂರೈಕೆ ಮಾಡಿದ A.R.ಡೈರಿಯಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರು ಮುಸಲ್ಮಾನರಂತೆ ಹೌದೇ?

“ತಿರುಪತಿ ದೇಗುಲಕ್ಕೆ ಪ್ರಸಾದ ತಯಾರಿಸುವ ಗುತ್ತಿಗೆ ಪಡೆದಿರುವ ಎ.ಆರ್‌. ಡೈರಿ ಫುಡ್‌ ಪ್ರೈವೆಟ್‌ ಲಿಮಿಟೆಡ್‌ನ ಉದ್ಯೋಗಿಗಳ ಹೆಸರುಗಳನ್ನು ಗಮನಿಸಿ ಇವರೆಲ್ಲ ಮುಸಲ್ಮಾನರು. ಇದು ನಾಚಿಕೆಗೇಡಿನ ಸಂಗತಿ. ಈ ಹೆಸರುಗಳನ್ನು ನೋಡಿದರೆ ಪ್ರಸಾದದಲ್ಲಿ ದನದ ಕೊಬ್ಬು ಹಾಗೂ ಮಾಂಸಾಹಾರಿ ಪದಾರ್ಥಗಳನ್ನು ಬೆರೆಸಿ ತಿರುಪತಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ಪ್ರಸಾದವನ್ನು ತಿನ್ನಿಸಿದರಲ್ಲಿ ಆಶ್ಚರ್ಯವಿಲ್ಲ. ಭಾರತದಲ್ಲಿ ಒಬ್ಬ ಹಿಂದೂ ವಕ್ಫ್ ಬೋರ್ಡ್ ಅಥವಾ ಯಾವುದೇ ಮುಸ್ಲಿಂ ಸಂಘಟನೆಯನ್ನು ನಡೆಸಬಹುದೇ? ಅದು ಸಾಧ್ಯವಿಲ್ಲ ಹಾಗಿದ್ದ ಮೇಲೆ ಹಿಂದೂಗಳ ದೇವಸ್ಥಾನಕ್ಕೆ ಮುಸಲ್ಮಾನರು ಏಕೆ?” ಎಂದು ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊಳ್ಳಲಾಗುತ್ತಿದೆ. 

ಈ ಫೋಟೊದಲ್ಲಿ ಕೇವಲ ಮುಸಲ್ಮಾನರ ಹೆಸರುಗಳು ಮಾತ್ರ ಇದ್ದು, ಇದನ್ನು ಗಮನಿಸಿದ ಹಲವರು ಎ.ಆರ್‌. ಡೈರಿ ಫುಡ್‌ ಪ್ರೈವೆಟ್‌ ಲಿಮಿಟೆಡ್‌ನಲ್ಲಿ ಕೇವಲ ಮುಸಲ್ಮಾನರಿದ್ದಾರೆ. ಹಿಂದೂಗಳು ಒಬ್ಬರು ಇಲ್ಲ ಎಂದು ಹಲವರು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್  ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಯಾವುದೇ ಅಧಿಕೃತ  ವರದಿಗಳು ಲಭ್ಯವಾಗಿಲ್ಲ. ಒಂದು ವೇಳೆ ಈ ಸಂಸ್ಥೆಯಲ್ಲಿ ಎಲ್ಲರೂ ಮುಸ್ಲಿಂ ಸಿಬ್ಬಂಧಿಗಳೇ ಇದ್ದಿದ್ದರೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿತ್ತು. ಆದರೆ ಆ ರೀತಿಯ ಯಾವುದೇ ಬೆಳವಣಿಗೆ ಈ ಪ್ರಕರಣದಲ್ಲಿ ಕಂಡು ಬಂದಿಲ್ಲ.

 

 

 

 

 

 

 

 

 

 

 

 

 

 

 

ಈ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಎ.ಆರ್‌. ಡೈರಿ ಫುಡ್‌ ಪ್ರೈವೆಟ್‌ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಅನ್ನುಪರಿಶೀಲಿಸಿದಾಗ, ಇದರಲ್ಲಿ ಸಂಸ್ಥೆಯ ಸಿಬ್ಬಂಧಿಗಳ ಅಧಿಕೃತ ಮಾಹಿತಿ ಲಭ್ಯವಾಗದೇ ಇದ್ದರೂ ಸಂಸ್ಥೆಯ ಮಾಲೀಕರು ಯಾರು ಎಂಬುದು ಪತ್ತೆಯಾಗಿದೆ. ಈ ಕಂಪನಿಯನ್ನು 5 ಮೇ 1995ರಲ್ಲಿ ಸ್ಥಾಪಿಸಲಾಗಿದ್ದು, ಇದರ ನಿರ್ದೇಶಕರಾಗಿ ರಾಜಶೇಖರನ್ ಸೂರ್ಯಪ್ರಭ , ರಾಜು ರಾಜಶೇಖರನ್ ಮತ್ತು ಶ್ರೀನಿವಾಸಲುನಾಯ್ಡು ಶ್ರೀನಿವಾಸನ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

 

 

 

 

 

 

 

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ನಾವು ಹುಡುಕಾಟವನ್ನು ನಡೆಸಿದಾಗ 21 ಸೆಪ್ಟೆಂಬರ್‌ 2024ರಂದು ಹಿಂದೂಸ್ತಾನ್‌ ಟೈಮ್ಸ್‌ ಪ್ರಕಟಿಸಿದ ವರದಿಯೊಂದು ಕಂಡು ಬಂದಿದ್ದು, ಅದರಲ್ಲಿ ಕೂಡ ಎ.ಆರ್‌. ಡೈರಿ ಫುಡ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯ ನಿರ್ದೇಶಕರು ಹಿಂದೂಗಳು ಅವರ ಹೆಸರು ರಾಜಶೇಖರನ್ ಸೂರ್ಯಪ್ರಭ , ರಾಜು ರಾಜಶೇಖರನ್ ಮತ್ತು ಶ್ರೀನಿವಾಸಲುನಾಯ್ಡು ಶ್ರೀನಿವಾಸನ್ ಎಂದು ಗುರುತಿಸಿದೆ. ಇದೇ ಮಾಹಿತಿಯನ್ನು ಬೇರೆ ಬೇರೆ ಮಾಧ್ಯಮಗಳು ಕೂಡ ನೀಡಿವೆ.

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ತಿರುಪತಿ ದೇಗುಲಕ್ಕೆ ಪ್ರಸಾದ ತಯಾರಿಸುವ ಗುತ್ತಿಗೆ ಪಡೆದಿರುವ ಎ.ಆರ್‌. ಡೈರಿ ಫುಡ್‌ ಪ್ರೈವೆಟ್‌ ಲಿಮಿಟೆಡ್‌ನ ಉದ್ಯೋಗಿಗಳೆಲ್ಲರು ಮುಸ್ಲಿಮರು ಎಂದು ಹಂಚಿಕೊಳ್ಳಲಾದ ಪೋಸ್ಟ್‌ ಸುಳ್ಳಿನಿಂದ ಕೂಡಿದೆ. ಎ.ಆರ್‌ ಡೈರಿ ಫುಡ್‌ ಪ್ರೈವೆಟ್‌ ಲಿಮಿಟೆಡ್‌ ನಿರ್ದೇಶಕರು ಹಾಗೂ ಮಾಲೀಕರು ಹಿಂದೂಗಳಾಗಿದ್ದಾರೆ ಎಂಬುದು ಕೂಡ ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಂಧನ ಭೀತಿಯಿಂದಾಗಿ ಯುವಕ ಮೃತಪಟ್ಟಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights