FACT CHECK | ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನ ಉಂಗುರ ಎಂದು ಸಂಬಂಧವಿಲ್ಲ ಫೋಟೊ ಹಂಚಿಕೆ

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನ ಮೃತದೇಹ ಪತ್ತೆಯಾಗಿದೆ ಬರಹದೊಂದಿಗೆ ಮುರಿದಿರುವ ಉಂಗುರ ಮತ್ತು ಕೆಲವು ವಸ್ತುಗಳನ್ನು ಪ್ರದರ್ಶಿಸುತ್ತಿರುವ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟ್‌ ಹಂಚಿಕೊಂಡ ಹಲವರು ಹಿಜ್ಬುಲ್ಲಾ ಮುಖ್ಯಸ್ಥ ಹಾಗೂ ಉಗ್ರಗಾಮಿ ಹಸನ್ ನಸ್ರಲ್ಲಾನ ಉಂಗುರ ಪತ್ತೆಯಾಗಿದೆ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದು ವಿವಿಧ ರೀತಿಯಲ್ಲಿ ಪ್ರಚಾರವನ್ನು ಕೂಡ ಪಡೆಯುತ್ತಿದೆ. ಇನ್ನು ಹಲವರು ಈತನ ಸಾವನ್ನು ದೃಢ ಪಡಿಸಿಕೊಳ್ಳುವ ಸಂಕೇತ ಇದು ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೆಲವರು ಈ ಉಂಗುರ ನಸ್ರಲ್ಲಾನದಲ್ಲ ಎಂದು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಗೊಂದಲ ಮೂಡಿಸಿರುವ ವೈರಲ್‌ ಫೋಟೋನಿಜವೇ ಎಂದು  ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲಿಸಲು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  5 ಜನವರಿ 2024 ರಂದು ಇರಾಕಿನ ಪತ್ರಕರ್ತ ಮುಂತಜಿರ್ ಅಲ್ ಶರಾಯ್ ಎಕ್ಸ್‌ ಹ್ಯಾಂಡಲ್‌ನಲ್ಲಿ ವೈರಲ್‌ ಫೋಟೋ ಲಭ್ಯವಾಗಿದ್ದು, ಇಲ್ಲಿನ ಚಿತ್ರ ಸಹಿತ ನೀಡಿರುವ ಮಾಹಿತಿ ಪ್ರಕಾರ ಈ ಉಂಗುರ ಅಬು ಅಲ್ ತಕ್ವಾನದ್ದು ಎಂಬುದು ತಿಳಿದು ಬಂದಿದೆ.

ಈ ಮಾಹಿತಿ ಆಧಾರಿಸಿ ಇನ್ನಷ್ಟು ಸರ್ಚ್ ಮಾಡಿದಾಗ, ಈ ಫೋಟೋವನ್ನು ಜನವರಿ 2024 ರಲ್ಲಿ ಬಾಗ್ದಾದ್ ಪೋಸ್ಟ್ ಮುಖ್ಯಸ್ಥ ‘ಸುಫ್ಯಾನ್ ಅಲ್-ಸಮರಾಯ್‘ ಎಕ್ಸ್-ಹ್ಯಾಂಡಲ್‌ನಲ್ಲಿ ಇದೇ ಮಾಹಿತಿಯೊಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿರುವುದು ಕೂಡ ಕಂಡು ಬಂದಿದೆ.

ಈ ಬಗೆಗಿನ ಸುದ್ದಿಯನ್ನು ಹುಡುಕುತ್ತಿರುವಾಗ, Fararu.com ಹೆಸರಿನ ಸುದ್ದಿ ವೆಬ್‌ಸೈಟ್‌ನಲ್ಲಿ ಅನೇಕ ಇತರ ಚಿತ್ರಗಳೊಂದಿಗೆ ಲೇಖನದಲ್ಲಿ ಅಪ್‌ಲೋಡ್ ಮಾಡಿದ ವೈರಲ್ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ . ಈ ಉಂಗುರಕ್ಕೆ ಸಂಬಂಧಿಸಿದಂತೆ, ಈ ಉಂಗುರವು ಗುರುವಾರ ಬಾಗ್ದಾದ್ ಬಳಿ ಯುಎಸ್ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾಕಿ ಮಿಲಿಟರಿ ಮುಖ್ಯಸ್ಥ “ಅಬು ತಕ್ವಾ” ಅವರಿಗೆ ಸೇರಿದೆ ಎಂದು ಸುದ್ದಿಯಲ್ಲಿ ವರದಿಯಾಗಿದೆ.

 

 

 

 

 

 

 

 

 

 

 

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಫೋಟೋ ಜನವರಿ 2024 ರಲ್ಲಿ ನಡೆದ ಮತ್ತೊಂದು ದಾಳಿಗೆ ಸಂಬಂಧಿಸಿದೆ . ಇತ್ತೀಚಿನ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸಾವಿನೊಂದಿಗೆ ಹಳೆಯ ಫೋಟೋವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕರ್ನಾಟಕದಲ್ಲಿ ಪೊಲೀಸ್‌ಗೆ ಚಪ್ಪಲಿಯಿಂದ ಹೊಡೆದ ಮುಸ್ಲಿಂ ಮಹಿಳೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights