FACT CHECK | Viral Video: ಗೇಮ್ ಆಡಲು ಮೊಬೈಲ್ ನೀಡದ ತಾಯಿಯ ತಲೆಗೆ ಬ್ಯಾಟ್‌ನಲ್ಲಿ ಹೊಡೆದ ಮಗ! ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಅಂದು ಮಕ್ಕಳು ಬಯಲಿನಲ್ಲಿ ಆಟವಾಡುತ್ತಿದ್ದರೆ, ಇಂದು ಮೊಬೈಲ್‌ನಲ್ಲಿ ಆಟವಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆಯು ಅತಿಯಾಗುತ್ತಿದ್ದು, ನಿಯಂತ್ರಣವಿಲ್ಲದಂತೆ ಮಕ್ಕಳು ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ತಂದೆ-ತಾಯಿಗಳು ಅಷ್ಟೆ, ಮಕ್ಕಳ ಈ ವರ್ತನೆಯ ಮೇಲೆ ಗಮನ ಹರಿಸದೆ ಮಕ್ಕಳಿಗೆ ಮೊಬೈಲ್ ನೀಡುತ್ತಿರುತ್ತಾರೆ.

ಸಧ್ಯ ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಬಾಲಕನೊಬ್ಬ ಶಾಲೆಯಿಂದ ಮನೆಗೆ ಬಂದು ಹೋಮ್‌ವರ್ಕ್‌ ಮಾಡದೇ ಮೊಬೈಲ್‌ ನೋಡುತ್ತಾ ಕುಳಿತಿರುತ್ತಾನೆ, ಇದನ್ನು ಗಮನಿಸಿದ ತಾಯಿ ಆತನ ಕೈಯಿಂದ ಮೊಬೈಲ್‌ ಕಸಿದುಕೊಳ್ಳುತ್ತಾರೆ. ಇದರಿಂದ ಕೋಪಕೊಂಡ ಆ ಬಾಲಕ ತಾಯಿಯ ತಲೆಗೆ ಬ್ಯಾಟ್‌ನಿಂದ ಹೊಡೆದು ಆಕೆ ಪ್ರಜ್ಞೆ ತಪ್ಪಿದ ಬಳಿಕ ಮೊಬೈಲ್‌ ತೆಗೆದುಕೊಳ್ಳುತ್ತಾನೆ.

ಈ ವೀಡಿಯೋವನ್ನು ನೋಡಿ ಮಕ್ಕಳ ಕೈಗೆ ಗೇಮ್ ಆಡಲು ಮೊಬೈಲ್ ಕೊಡುವುದರಿಂದ ಆಗುವ ದುಷ್ಪರಿಣಾಮ ಎಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

 

ಇದೇ ರೀತಿಯ ಪ್ರತಿಪಾದನೆಯೊಂದಿಗೆ ವಾಟ್ಸಾಪ್‌ನಲ್ಲಿಯೂ  ವಿಡಿಯೋವನ್ನು ವೈರಲ್ ಆಗಿದ್ದು. ಅನೇಕರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶಿಲಿಸಲು ಗೂಗಲ್ ಸರ್ಚ್ ಮಾಡಿದಾಗ, ವೈರಲ್‌ ವಿಡಿಯೋ ನಿಜವಾಗಿ ನಡೆದ ಘಟನೆಯಲ್ಲ, ಬದಲಿಗೆ ಮಕ್ಕಳು ಮೊಬೈಲ್‌ ಬಳಸದಂತೆ ಜಾಗೃತಿ ಮೂಡಿಸಲು ಮಾಡಿದ ಸ್ಕ್ರಿಪ್ಟ್ ಮಾಡಿದ ವಿಡಿಯೋ ಆಗಿದೆ.

ವಿಡಿಯೋವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಗಮನಿಸಿದಾಗ ಹಲವರ ಪ್ರತಿಕ್ರಿಯೆ ಲಭ್ಯವಾಗಿದ್ದು, ಇದು ಸ್ಕ್ಟಿಪ್ಟೆಡ್‌ ವಿಡಿಯೋ ಎಂದು ಕಮೆಂಟ್‌ ಮಾಡಿದ್ದಾರೆ.  ಇದರ ಸುಳಿವು ಪಡೆದು ನಾವು ಗೂಗಲ್ ರಿವರ್ಸ್‌ ಇಮೇಜಸ್‌ ಮೂಲಕ ಸರ್ಚ್ ಮಾಡಿದಾಗ, ಈ ವೀಡಿಯೋ ಕುರಿತು ಹತ್ತಾರು ಮಾಧ್ಯಮಗಳು ವರದಿ ಮಾಡಿರುವುದು ಲಭ್ಯವಾಗಿದ್ದು, ಈ ವರದಿಗಳಲ್ಲಿ ಈ ವೀಡಿಯೋ ಜಾಗೃತಿಗಾಗಿ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

 

 

 

 

 

 

 

 

 

 

 

 

 

 

 

 

ನಾವು ಫೇಸ್‌ಬುಕ್‌ನಲ್ಲಿ ಸಂಪೂರ್ಣ ವೀಡಿಯೊವನ್ನು ಕಂಡುಕೊಂಡಿದ್ದೇವೆ, ವೀಡಿಯೊವನ್ನು ಶೈಕ್ಷಣಿಕ ಮತ್ತು ಮನರಂಜನೆಯ ಉದ್ದೇಶಗಳಿಗಾಗಿ ಮಾತ್ರ ರಚಿಸಲಾಗಿದೆ ಎಂದು  (Disclaimer) ತಿಳಿಸಲಾಗಿದೆ.

 

 

 

 

 

 

 

 

 

 

 

 

 

 

 

 

 

ಮೊಬೈಲ್ ಚಟದಿಂದ ಮಕ್ಕಳು ಪೋಷಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳು ದೇಶದಲ್ಲಿ ನಡೆದಿವೆ. ಆದ್ದರಿಂದ ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವ ಬದಲು ಅಥವಾ ಮಕ್ಕಳ ಜೊತೆಯಿದ್ದಾಗ ತಾವು ಸಹ ಮೊಬೈಲ್ ಬಳಸದೇ ಇರುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳಿಗೆ ಕಥೆ ಪುಸ್ತಕಗಳು ನೀಡುವುದರ ಮೂಲಕ ಮತ್ತು ಅವರ ಜೊತೆಗೆ ಪೋಷಕರು ಹೆಚ್ಚು ಸಮಯ ಕಳೆಯಬೇಕು, ಅವರೊಂದಿಗೆ ಸೇರಿ ಆಟವಾಡುವುದರ ಮೂಲಕ ಮಕ್ಕಳು ಗುಣಾತ್ಮಕವಾಗಿ ಬೆಳೆಯಲು ಪೋಷಕರು ಹೆಚ್ಚು ಪ್ರೋತ್ಸಾಯಿಸಬೇಕು.

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋವನ್ನು ಮಕ್ಕಳು ಮೊಬೈಲ್‌ ಬಳಸದಂತೆ ಜಾಗೃತಿ ಮೂಡಿಸಲು  ಮಾಡಲಾಗಿದೆಯೇ ಹೊರತು ನೈಜ ಘಟನೆಯಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದೋಣಿ ದುರಂತದ ವೈರಲ್ ವಿಡಿಯೋ ಗೋವಾಗೆ ಸಂಬಂಧಿಸಿದ್ದಲ್ಲ! ಮತ್ತೆಲ್ಲಿಯದ್ದು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights