ಪತ್ರಿಕಾ ಪ್ರಕಟಣೆಯಲ್ಲಿ , Alstom ಅವರು 22  ರೈಲು ಸೆಟ್‌ಗಳನ್ನು CBTC ಸಿಗ್ನಲಿಂಗ್ ವ್ಯವಸ್ಥೆಯೊಂದಿಗೆ ನಾರ್ತ್‌ವೆಸ್ಟ್ ರೈಲ್ ಲಿಂಕ್-ಆಸ್ಟ್ರೇಲಿಯದ ಅತಿದೊಡ್ಡ ಸಾರ್ವಜನಿಕ ಸಾರಿಗೆ ಯೋಜನೆ ಮತ್ತು ಮೊದಲ ಸಂಪೂರ್ಣ ಸ್ವಯಂಚಾಲಿತ ಮೆಟ್ರೋ ನೆಟ್‌ವರ್ಕ್‌ಗಾಗಿ ವಿತರಿಸುವ ಒಪ್ಪಂದವನ್ನು ಪಡೆಯಲು ಯಶ್ವಿಯಾಗಿದ್ದಾರೆ ಎಂದು ವರದಿಆಗಿದೆ. ಆಂಧ್ರಪ್ರದೇಶದ ಶ್ರೀಸಿಟಿ ಸೌಲಭ್ಯದಿಂದ ನಿಗದಿತ ವೇಳಾಪಟ್ಟಿಯಲ್ಲಿ ಸಿಡ್ನಿ ಮೆಟ್ರೋಗಾಗಿ ಈ 22 ಮೆಟ್ರೋಪೊಲಿಸ್ ರೈಲುಗಳ ವಿತರಣೆಯನ್ನು ಅಲ್‌ಸ್ಟೋಮ್ ಪೂರ್ಣಗೊಳಿಸಿದೆ ಇದು ಫ್ರೆಂಚ್‌ ಮೂಲದ ಕಂಪನೆಯಾಗಿದೆ.

ಈ ರೈಲುಗಳನ್ನು ಭಾರತದಲ್ಲಿ ಜೋಡಿಸಲಾಗಿದೆ ಎಂದು ಖಚಿತಪಡಿಸುವ ಇನ್ನೂ ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು . 2018 ರಲ್ಲಿ ಈ ಒಪ್ಪಂದವನ್ನು ಮಾಡಲಾಗಿತ್ತು ಎಂಬುದನ್ನು ಮೇಲಿನ ವರದಿಗಳು ಮತ್ತು ಲೇಖನಗಳು ಖಚಿತಪಡಿಸುತ್ತವೆ.

ಫ್ರೆಂಚ್ ರೈಲು ಉತ್ಪಾದನಾ ಕಂಪನಿ Alstom ಗೆ 2014 ರಲ್ಲಿ ಸಿಡ್ನಿ ಮೆಟ್ರೋಗೆ 22 ರೈಲುಗಳನ್ನು ತಯಾರಿಸಲು ಗುತ್ತಿಗೆ ನೀಡಲಾಯಿತು. ಕಂಪನಿಯು ಈ ರೈಲುಗಳನ್ನು ಭಾರತದಲ್ಲಿ ತಯಾರಿಸಿತು ಮತ್ತು 2018 ರಲ್ಲಿ ಆಂಧ್ರಪ್ರದೇಶದ ಶ್ರೀಸಿಟಿ ಸೌಲಭ್ಯದಿಂದ ಅವುಗಳನ್ನು ತಲುಪಿಸಿತು. ರೈಲುಗಳನ್ನು ಮೇ 2019 ರಲ್ಲಿ ವಾಯುವ್ಯ ಮೆಟ್ರೋಗಾಗಿ ಕಾರ್ಯಾಚರಣೆ ಮಾಡಲಾಯಿತು.