ಚಿಪ್ಕೊ ಚಳುವಳಿ ನೇತಾರ, ಪರಿಸರವಾದಿ ಸುಂದರ್‌ಲಾಲ್‌ ಬಹುಗುಣ ಕೊರೊನಾದಿಂದ ಸಾವು!

ಚಿಪ್ಕೊ ಚಳುವಳಿಯ ನೇತಾರ, ಪರಿಸರವಾದಿ ಸುಂದರ್ ಲಾಲ್ ಬಹುಗುಣ ಅವರು ಕೊರೊನಾದಿಂದ ದೆಹಲಿಯಲ್ಲಿ ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕು ದೃಢಪಟ್ಟ ಕಾರಣದಿಂದಾಗಿ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

ಉತ್ತರಖಂಡದ ಗರ್ವಾಲ ಹಿಮಾಲಯ ಹಾಗೂ ಉತ್ತರಪ್ರದೇಶದಲ್ಲಿ ಅತಿಯಾಗಿ ನಡೆಯುತ್ತಿದ್ದ ಅರಣ್ಯನಾಶದ ವಿರುದ್ದ ಜನರನ್ನು ಸಂಘಟಿಸಿ, ಮರಗಳ ಉಳಿವಿಗಾಗಿ 1973ರಲ್ಲಿ ಆರಂಭವಾದ ಚಿಪ್ಕೋ ಚಳುವಳಿ ದೇಶಾದ್ಯಂತ ಹರಡಿತ್ತು. ಈ ಚಳುವಳಿಯ ನೇತೃತ್ವವನ್ನು ಸುಂದರ್‌ ಲಾಲ್‌ ಬಹುಗುಣ ವಹಿಸಿದ್ದರು.

ಬಹುಗುಣ ಅವರ ಪ್ರಯತ್ನದಿಂದಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮರಗಳನ್ನು ಕತ್ತರಿಸುವುದಕ್ಕೆ ನಿಷೇಧ ಹೇರಿದರು. “ಪರಿಸರ ವಿಜ್ಞಾನ ಶಾಶ್ವತ ಆರ್ಥಿಕತೆ” ಎಂಬುದೇ ಬಹುಹುಣ ಅವರ ಘೋಷಣೆಯಾಗಿತ್ತು.

ಪರಿಸರ ಕಾರ್ಯಕರ್ತರಾಗಿದ್ದ ಸುಂದರ್ ಲಾಲ್ ಬಹುಗುಣ, ಕಾಡುಗಳು ಮತ್ತು ಹಿಮಾಲಯ ಪರ್ವತಗಳ ನಾಶವನ್ನು ತಪ್ಪಿಸಲು ಹಳ್ಳಿಗಳಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಂದೋಲನವನ್ನು ಆರಂಭಿಸಿದ್ದರು.

ಇದನ್ನೂ ಓದಿ: ದೇಶದ 50% ಜನರು ಮಾಸ್ಕ್‌ ಧರಿಸುವುದೇ ಇಲ್ಲ; 14% ಜನರು ಮಾತ್ರ ಸರಿಯಾಗಿ ಮಾಸ್ಕ್ ಧರಿಸುತ್ತಾರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights