ದೇಶದ 50% ಜನರು ಮಾಸ್ಕ್‌ ಧರಿಸುವುದೇ ಇಲ್ಲ; 14% ಜನರು ಮಾತ್ರ ಸರಿಯಾಗಿ ಮಾಸ್ಕ್ ಧರಿಸುತ್ತಾರೆ!

ಕೊರೊನಾ ಎರಡನೇ ಅಲೆ ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿರುವ ಜನರಲ್ಲಿ ಶೇ. 50 ರಷ್ಟು ಜನರು ಮಾಸ್ಕ್‌ ಧರಿಸುತ್ತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಆರೋಗ್ಯ ಇಲಾಖೆಯ ದೇಶದ ಪ್ರಮುಖ 25 ನಗರಗಳಲ್ಲಿ ಸಮೀಕ್ಷೆ ನಡೆಸಿದ್ದು, ಇದರಿಂದ ದೇಶದ ಅರ್ಧದಷ್ಟು ಜನರು ಮಾಸ್ಕ್‌ ಧರಿಸುವುದಿಲ್ಲ ಎಂಬುದು ತಿಳಿದು ಬಂದಿದೆ. ಅಲ್ಲದೆ, 64% ಜನರು ಮೂಗಿನಿಂದ ಕೆಳಕ್ಕೆ ಬಾಯಿಗೆ ಮಾತ್ರ ಮಾಸ್ಕ್‌ ಧರಿಸುತ್ತಾರೆ. ಇನ್ನು 20% ಜನರು ಕೆನ್ನೆ(ಗಲ್ಲ)ಗೆ ಮಾಸ್ಕ್‌ ಧರಿಸುತ್ತಾರೆ. ಉಳಿದಂತೆ 2% ಜನರು ಕುತ್ತಿಗೆಗೆ ಮಾಸ್ಕ್‌ ಧರಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ದೇಶದಲ್ಲಿರುವ ಜನರಲ್ಲಿ ಕೇವಲ 14% ಜನರು ಮಾತ್ರ ಸರಿಯಾದ ರೀತಿಯಲ್ಲಿ ಮಾಸ್ಕ್‌ಅನ್ನು ಧರಿಸುತ್ತಾರೆ. ಮೂಗು, ಬಾಯಿ, ಕೆನ್ನೆಗಳ ಮೇಲೆ ಕ್ಲಿಪ್‌ ಹೊಂದಿರುವ ಮಾಸ್ಕ್‌ ಅನ್ನು ಹಾಕಿಕೊಳ್ಳುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

ದೇಶದ ಎಂಟು ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಒಂಬತ್ತು ರಾಜ್ಯಗಳಲ್ಲಿ 50,000 ದಿಂದ 1 ಲಕ್ಷದವರೆಗೆ ಸಕ್ರಿಯ ಪ್ರಕರಣಗಳಿದ್ದು, 19 ರಾಜ್ಯಗಳಲ್ಲಿ 50,000ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ.

Read Also: ಭದ್ರತಾ ಪಡೆಗಳ ದಾಳಿ: 13 ಮಾವೋವಾದಿಗಳ ಹತ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights