ಬಾಗಲಕೋಟೆ ಜಿಲ್ಲೆಗೆ ಕಾಂಗ್ರೆಸ್‌ಗೆ ಸಿಕ್ತು ಡಬಲ್ ಧಮಾಕಾ : ಸಿದ್ದು & ಪಾಟೀಲ್‌ಗೆ ವಿಪಕ್ಷ ಸ್ಥಾನ

ಕಾಂಗ್ರೆಸ್‌ನ ರಾಜ್ಯ ರಾಜಕಾರಣದ ಆಟ ಮೇಲಾಟಗಳ ಮಧ್ಯೆ ಕೊನೆಗೂ ಹೈಕಮಾಂಡ್‌ ಅಳೆದು ತೂಗಿ, ವಿಧಾನಸಭೆ ಮತ್ತು ವಿಧಾನಪರಿಷತ್‌ನ ವಿರೋಧಪಕ್ಷದ ನಾಯಕ ಘೋಷಣೆ ಮಾಡಿದೆ. ರಾಜ್ಯದ ಉಭಯ ಸದನಗಳಿಗೂ ಬಾಗಲಕೋಟೆ ಜಿಲ್ಲೆಯಿಂದ ಆಯ್ಕೆಯಾಗಿರೋ ನಾಯಕರನ್ನೇ ಆಯ್ಕೆ ಮಾಡಿದ್ದು, ಇದೀಗ ಕಾಂಗ್ರೆಸ್ ಹೈಕಮಾಂಡ್ ಮುಳುಗಡೆ ನಗರಿ ಬಾಗಲಕೋಟೆಗೆ ಕಾಂಗ್ರೆಸ್ ಪಕ್ಷಕ್ಕೆ ಡಬಲ್ ಧಮಾಕಾದ ಕೊಡುಗೆ ನೀಡಿದೆ.ಎರಡು ಸ್ಥಾನಗಳು ಬಾಗಲಕೋಟೆ ಸಿಕ್ಕಿರೋದಕ್ಕೆ ಕೈ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಗೊಂಡಿದೆ.

ಹೌದು. ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನಿಂದ ಹಿಡಿದು ರಾಜ್ಯ ರಾಜಕಾರಣದಲ್ಲಿ ಏನೇ ನಡೆಯಲಿ ಅದೀಗ ಬಾಗಲಕೋಟೆ ಜಿಲ್ಲೆಯ ಮಟ್ಟಿಗೆ ಇನ್ನಿಲ್ಲದ ಸಂತಸಕ್ಕೆ ಕಾರಣವಾಗಿದೆ. ಯಾಕಂದ್ರೆ ಕಾಂಗ್ರೆಸ್ ಪಕ್ಷದಿಂದ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಗಳ ವಿರೋಧ ಪಕ್ಷದ ನಾಯಕರು ಎರಡು ಸ್ಥಾನ ಬಾಗಲಕೋಟೆಗೆ ಒಲಿದು ಬಂದಿದೆ. ಒಂದೆಡೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಮತಕ್ಷೇತ್ರದಿಂದ ಅಯ್ಕೆಯಾಗಿರೋ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ವಿಪಕ್ಷ ನಾಯಕರಾಗಿದ್ದರೆ, ಮತ್ತೊಂದೆಡೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಅವರನ್ನ ಮೇಲ್ಮನೆ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಬಾಗಲಕೋಟೆ ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದಂತಾಗಿದೆ. ನಿರೀಕ್ಷೆಯಂತೆ ಈ ಮೊದಲೇ ಎರಡು ವಿಪಕ್ಷ ಸ್ಥಾನಗಳು ಬಾಗಲಕೋಟೆಗೆ ಒಲಿಯಬಹುದು ಅನ್ನೋ ನಿರೀಕ್ಷೆಯಲ್ಲಿ ಕಾಂಗ್ರೆಸ್ ನಾಯಕರುಗಳು, ಮುಖಂಡರು, ಕಾರ್ಯಕರ್ತರಿಗಿತ್ತು‌. ಇದೀಗ ಎರಡು ಪ್ರಮುಖ ಸ್ಥಾನ ಜಿಲ್ಲೆಗೆ ಸಿಕ್ಕಿದ್ದಕ್ಕೆ ಇನ್ನಿಲ್ಲದ ಹರುಷ ಉಂಟಾಗಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ ಬಳಿಕ ಹಿನ್ನೆಡೆ ಅನುಭವಿಸಿ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಉಭಯ ಸದನಗಳಿಗೆ ವಿಪಕ್ಷ ನಾಯಕರ ನೇಮಕ ವಿಚಾರ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಗೊಂಡು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಅನ್ನೋ ವಿಶ್ವಾಸದಲ್ಲಿದೆ ಕೈ ಕಾರ್ಯಕರ್ತರಿದ್ದಾರೆ..

ಇನ್ನು ರಾಜ್ಯದಲ್ಲಿ ಅನರ್ಹರಿಂದ ತೆರವಾಗಿರೋ ಕ್ಷೇತ್ರಗಳಲ್ಲಿ ಮುಂಬರುವ ಬೈ ಎಲೆಕ್ಷನ್ ಸೇರಿದಂತೆ ವಿವಿಧ ರಾಜಕೀಯ ಲೆಕ್ಕಾಚಾರಗಳನ್ನ ಇಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಎಸ್.ಆರ್.ಪಾಟೀಲ್ ಅವರನ್ನ ನೇಮಕ ಮಾಡಿದೆ. ಕುರುಬ,ಹಾಗೂ ಲಿಂಗಾಯತರನ್ನು ಓಲೈಸೋ ನಿಟ್ಟಿನಲ್ಲಿ ಎರಡು ಪ್ರಮುಖ ಹುದ್ದೆಗಳು ಹಂಚಿಕೆ ಯಾಗಿದ್ದು.ಇದೀಗ ಹಿರಿಯ ನಾಯಕರಿಗೆ ಸೆಡ್ಡು ಹೊಡೆದು ಸಿದ್ದರಾಮಯ್ಯ ಮತ್ತೇ ಪಕ್ಷದಲ್ಲಿ ಸಿದ್ದರಾಮಯ್ಯನವರದ್ದೇ ಮೇಲುಗೈ ಆಗಿದೆ. ಈ ಮಧ್ಯೆ ಉಭಯ ನಾಯಕರ ಪ್ರಭಾವದಿಂದ ಅಖಂಡ ರಾಜ್ಯದಲ್ಲೂ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಲವರ್ಧನಗೆ ಅನುಕೂಲವಾಗಲಿದೆ ಅನ್ನೋ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ. ಆದ್ರೆ ಇತ್ತ ಬಿಜೆಪಿಗರ ಲೆಕ್ಕಾಚಾರವೇ ಬೇರೆ. ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸಿದ್ದರಾಮಯ್ಯನವರೇ ಬಾದಾಮಿ ಶಾಸಕರಾಗಿ ಸಾಕಷ್ಟು ಪ್ರಚಾರ ಮಾಡಿದ್ರೂ ಯಾವುದೇ ಪ್ರಭಾವ ಬೀರಲಿಲ್ಲ, ಹೀಗಾಗಿ ಬಾಗಲಕೋಟೆ ಜಿಲ್ಲೆ ಅಷ್ಟೇ ಅಲ್ಲ ಉತ್ತರ ಕರ್ನಾಟಕದಲ್ಲೂ ವಿಪಕ್ಷ ನಾಯಕರ ನೇಮಕ ವಿಚಾರ ಬಿಜೆಪಿಗೆ ಯಾವುದೇ ಹಿನ್ನೆಡೆ ಮಾಡಲು ಸಾಧ್ಯವಾಗೋದಿಲ್ಲ. ಬದಲಾಗಿ ಬಿಜೆಪಿ ಮತ್ತಷ್ಟು ಬಲಿಷ್ಟವಾಗಿ ಸಿದ್ದರಾಮಯ್ಯನವರ ಆಟ ನಡೆಯೋದಿಲ್ಲ ಅಂತಾರೆ ಬಿಜೆಪಿಗರು‌‌.

ಒಟ್ಟಿನಲ್ಲಿ ರಾಜ್ಯದ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ವಿರೋಧ ಪಕ್ಷ ಸ್ಥಾನಗಳು ಬಾಗಲಕೋಟೆ ಜಿಲ್ಲೆಗೆ ದಕ್ಕಿದ್ದು, ಕಾಂಗ್ರೆಸ್ ಪಾಳೆಯದಲ್ಲಿ ಬಾಗಲಕೋಟೆ ಇದೀಗ ಪವರ್ ಫುಲ್ ಆಗಿದ್ರೆ. ಅತ್ತ ಬಿಜೆಪಿಗರು ಮಾತ್ರ ಯಾರೇ ಬಂದ್ರೂ ಅಷ್ಟೇ ಸಿದ್ದು ಆಟ ನಡೆಯಲ್ಲ ಅನ್ನುವ ಮೂಲಕ ಸಿದ್ದರಾಮಯ್ಯ ತಂತ್ರಕ್ಕೆ ಶೆಡ್ಡು ಹೊಡೆಯಲು ಮುಂದಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights