ಬೆಂಗಳೂರಿನಲ್ಲಿ ಒಂದೇ ಕುಟುಂಬದ 13 ಜನರಿಗೆ ಕೊರೊನಾ : ಐಸಿಯು ಸಿಗದೆ ದಂಪತಿ ಸಾವು!
ಬೆಂಗಳೂರಿನಲ್ಲಿ ಒಂದೇ ಕುಟುಂಬದ 13 ಜನರಿಗೆ ಕೊರೊನಾ ಸೋಂಕು ತಗುಲಿದ್ದು 10 ಲಕ್ಷ ಖರ್ಚಾದರೂ ಐಸಿಯು ಸಿಗದೆ ದಂಪತಿ ಸಾವನ್ನಪ್ಪಿದ್ದಾರೆ.
ನಗರದ ಯಲಹಂಕದ ಒಂದೇ ಕುಟುಂಬದ 13 ಜನರಿಗೆ ಕೊರೊನಾ ಸೋಂಕು ತಗುಲಿದ್ದು ಈ ಪೈಕಿ ದಂಪತಿಗಳು ಐಸಿಯು ಸಿಗದೇ ಸಾವನ್ನಪ್ಪಿದ್ದಾರೆ. ಮೃತ ಕವಿತಾ, ಸುರೇಶ್ ಕುಟುಂಬಸ್ಥರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಹೋಂ ಕ್ವಾರಂಟೈನ್ ಆಗಿದ್ದರು. ಆದರೆ ಕವಿತಾ ಹಾಗೂ ಸುರೇಶ್ ಸ್ಥಿತಿ ಗಂಭೀರವಾಗದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲು ಕುಟುಂಬಸ್ಥರು ಹರಸಾಹಸವೇ ಪಟ್ಟಿದ್ದಾರೆ. ಸಾಲಾ ಮಾಡಿ, ಬಡ್ಡಿಗೆ ಹಣ ತಂದು 10 ಲಕ್ಷ ಖರ್ಚು ಮಾಡಿದರೂ ದಂಪತಿಗಳನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ ಎಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಂಸದ ತೇಜಸ್ವಿ ಸೂರ್ಯ ಬೆಡ್ ದಂಧೆಯ ಬಗ್ಗೆ ಬಹಿರಂಗಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಬೆಡ್ ಗಾಗಿ ಸಂಪರ್ಕಿಸಲು ದೂರವಾಣಿ ಸಂಖ್ಯೆಯನ್ನು ನೀಡಿದ್ದರು. ಆದರೆ ಈ ನಂಬರ್ ಗೆ ಕರೆ ಮಾಡಿದರೆ ಕುಟುಂಬಸ್ಥರಿಗೆ ಪ್ರಯೋಜನವಾಗಿಲ್ಲ. ಮಾತ್ರವಲ್ಲ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಗೆ 20 ಸಾವಿರ ಕೊಟ್ಟಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಐಸಿಯು ಬೆಡ್ ಸಿಕ್ಕಿಲ್ಲ. ಜನರಲ್ ಬೆಡ್ ನಲ್ಲೇ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಆದರೆ ತೀವ್ರ ಉಸಿರಾಟದ ತೊಂದರೆಯಿಂದ ದಂಪತಿ ಸಾವನ್ನಪ್ಪಿದ್ದಾರೆ.
ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆ ಇಲ್ಲ ಎಂದು ಸಮರ್ಥಿಸಿಕೊಳ್ಳುವ ಸರ್ಕಾರದ ವಿರುದ್ಧ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಆಸ್ಪತ್ರೆಗಳು ಎಷ್ಟು ಹಣ ಕೇಳಿದ್ರು ಕೊಡಲು ನಾವು ಸಿದ್ದರಿದ್ವಿ. ಆದರೆ ನಾವು ನಮ್ಮವರನ್ನ ುಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ.