FACT CHECK | ಕೇಸರಿ ಬಟ್ಟೆ ಹೊದ್ದು ಮಲಗಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆದಿದ್ದು ನಿಜವೇ ?

ರಸ್ತೆ ಬದಿಯ ಫುಟ್‌ಪಾತ್ ಮೇಲೆ ವ್ಯಕ್ತಿಯೊಬ್ಬ ಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಮಲಗಿದ್ದಕ್ಕೆ ಆತನಿಗೆ ಮುಸ್ಲಿಮರು ದೊಣ್ಣೆಯಿಂದ ಹೊಡೆದಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಅಕ್ಟೋಬರ್ 7 ರಂದು ಹಂಚಿಕೊಂಡ ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿದೆಹಲಿಯ ಮಾಡೆಲ್ ಟೌನ್‌ನ ಕಾನೂನು ಮತ್ತು ಸುವ್ಯವಸ್ಥೆ ಇದು.. ವ್ಯಕ್ತಿಯೊಬ್ಬಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಆರಾಮವಾಗಿ ಮಲಗಿದ್ದಾನೆ… ಶಾಂತಿದೂತರು ಬೈಕ್‌ನಲ್ಲಿ ಬಂದು ವಿನಾಕಾರಣ ದೊಣ್ಣೆಯಿಂದ ಹೊಡೆಯಲಾರಂಭಿಸಿದ್ದಾರೆ ಎಂದಿದೆ. ಹಾಗಿದ್ದರೆ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ  ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕೆಲವು ವರದಿಗಳು ಲಭ್ಯವಾಗಿದ್ದು ಸಾರ್ವಜನಿಕ ಜಾಗದಲ್ಲಿ ಮೂತ್ರ ಮಾಡದಂತೆ ವ್ಯಕ್ತಿಯೊಬ್ಬ ಸಾರ್ವಜನಿಕರಲ್ಲಿ ವಿನಂತಿಸಿದ್ದ, ಮರುದಿನ ಬೈಕ್‌ನಲ್ಲಿ ಬಂದ ಮತ್ತೊಬ್ಬ ವ್ಯಕ್ತಿ ಮನವಿ ಮಾಡಿದ್ದ ವ್ಯಕ್ತಿಯ ಮೇಲೆ  ಹಲ್ಲೆ ನಡೆಸಿದ್ದಾನೆ ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.

ಅಕ್ಟೋಬರ್ 6, 2024ರಂದು ರಿಪಬ್ಲಿಕ್ ವರ್ಲ್ಡ್ ಪ್ರಕಟಿಸಿದ  ವರದಿಯಲ್ಲಿ, ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಕೇಳಿದ ಮತ್ತೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಉತ್ತರ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಶುಕ್ರವಾರ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದಿದೆ.

Fact Check: ಕೇಸರಿ ಬಟ್ಟೆ ಹೊದ್ದುಕೊಂಡು ವ್ಯಕ್ತಿಯೊಬ್ಬ ಮಲಗಿದ್ದಕ್ಕೆ ಮುಸ್ಲಿಮರು ದೊಣ್ಣೆಯಿಂದ ಹೊಡೆದರೇ, ವೈರಲ್ ವೀಡಿಯೋ ಹಿಂದಿನ ಸತ್ಯವೇನು?

ಅಕ್ಟೋಬರ್ 6, 2024ರಂದು ಇಂಡಿಯಾ ಟಿವಿ ಮಾಡಿದ ವರದಿಯಲ್ಲಿ, ಅಚ್ಚರಿಯ ಘಟನೆಯೊಂದರಲ್ಲಿ, ಪಾರ್ಕ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪಿಯನ್ನು ತಡೆದ ವ್ಯಕ್ತಿಯೊಬ್ಬನಿಗೆ ಮಾರನೇ ದಿನ ದೊಣ್ಣೆಯಿಂದ ಥಳಿಸಲಾಗಿದೆ. ಆರ್ಯನ್ ಎಂದು ಗುರುತಿಸಲಾದ ಆರೋಪಿ ಮರುದಿನ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ತನ್ನನ್ನು ಮೂತ್ರ ಮಾಡದಂತೆ ತಡೆದ ವ್ಯಕ್ತಿಯನ್ನು ಥಳಿಸಿದ್ದಾನೆ. ಇದಾದ ಬಳಿಕ ಅವರು ಬೈಕ್ ನಲ್ಲಿ ತೆರಳಿದ್ದರು. ಈ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ವಾಯವ್ಯ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ಫುಟ್‌ಪಾತ್‌ನಲ್ಲಿ ಕೇಸರಿ ಬಣ್ಣದ ಬೆಡ್ ಶೀಟ್ ಹಾಕಿ ಮಲಗಿದ್ದ ರಾಮ್‌ಪಾಲ್‌ಗೆ ಆರ್ಯನ್ ಥಳಿಸಲು ಆರಂಭಿಸಿದ್ದ. ಸಂತ್ರಸ್ತ ಎದ್ದು ಕುಳಿತ ನಂತರವೂ ದಾಳಿಕೋರರು ದೊಣ್ಣೆಗಳಿಂದ ಹಲ್ಲೆ ಮುಂದುವರಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಎಂದಿದೆ.

Fact Check: ಕೇಸರಿ ಬಟ್ಟೆ ಹೊದ್ದುಕೊಂಡು ವ್ಯಕ್ತಿಯೊಬ್ಬ ಮಲಗಿದ್ದಕ್ಕೆ ಮುಸ್ಲಿಮರು ದೊಣ್ಣೆಯಿಂದ ಹೊಡೆದರೇ, ವೈರಲ್ ವೀಡಿಯೋ ಹಿಂದಿನ ಸತ್ಯವೇನು?

ಅಕ್ಟೋಬರ್ 7, 2024 ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ, ವಾಯವ್ಯ ದೆಹಲಿಯ ಮಾಡೆಲ್ ಟೌನ್ನಲ್ಲಿ ಶುಕ್ರವಾರ ಇಬ್ಬರು ಪುರುಷರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಆಕ್ಷೇಪಿಸಿದ್ದಕ್ಕಾಗಿ 28 ವರ್ಷದ ವ್ಯಕ್ತಿಯನ್ನು ದೊಣ್ಣೆಯಿಂದ ಥಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತನನ್ನು ಮಾಡೆಲ್ ಟೌನ್ ನಿವಾಸಿ ರಾಮ್ ಪಾಲ್ ಎಂದು ಗುರುತಿಸಲಾಗಿದ್ದು, ಟೆಂಟ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಳಿಗ್ಗೆ ೭ ಗಂಟೆ ಸುಮಾರಿಗೆ ಅವರು ಅಂಗಡಿಯ ಮುಂದೆ ಮಲಗಿದ್ದಾಗ ಈ ಘಟನೆ ನಡೆದಿದೆ. ಹಲ್ಲೆಯನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಹಿಡಿಯಲಾಗಿದ್ದು, ಮೂವರು ವ್ಯಕ್ತಿಗಳು ಮೋಟಾರ್ ಸೈಕಲ್ ನಲ್ಲಿ ಬರುತ್ತಿರುವುದನ್ನು ತೋರಿಸುತ್ತದೆ. ಅವರಲ್ಲಿ ಒಬ್ಬನು ಕೋಲಿನಂತಹ ವಸ್ತುವನ್ನು ಹಿಡಿದುಕೊಂಡು ಕೆಳಗಿಳಿದು ಮಂಚದ ಮೇಲೆ ಮಲಗಿದ್ದ ವ್ಯಕ್ತಿಯ ಬಳಿಗೆ ಬಂದು ಮಲಗಿದ್ದ ವ್ಯಕ್ತಿಯ ಮುಖದಿಂದ ಹೊದಿಕೆ ಎಳೆದು ಅವನನ್ನು ಹೊಡೆಯಲು ಪ್ರಾರಂಭಿಸಿದನು. ಸಂತ್ರಸ್ತನಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿರಲಿಲ್ಲ ಮತ್ತು ಪದೇ ಪದೇ ಹೊಡೆಯಲಾಯಿತು ಎಂದಿದೆ.

Fact Check: ಕೇಸರಿ ಬಟ್ಟೆ ಹೊದ್ದುಕೊಂಡು ವ್ಯಕ್ತಿಯೊಬ್ಬ ಮಲಗಿದ್ದಕ್ಕೆ ಮುಸ್ಲಿಮರು ದೊಣ್ಣೆಯಿಂದ ಹೊಡೆದರೇ, ವೈರಲ್ ವೀಡಿಯೋ ಹಿಂದಿನ ಸತ್ಯವೇನು?

ಇದೇ ರೀತಿಯ ವರದಿಗಳನ್ನು ಇಲ್ಲಿಇಲ್ಲಿ ನೋಡಬಹುದು. ಈ ವರದಿಗಳಲ್ಲಿ ಕೇಸರಿ ಹೊದಿಕೆ ಹೊದ್ದು ಮಲಗಿದ್ದಕ್ಕೆ ಹೊಡೆದಿರುವ ವಿಚಾರವನ್ನು ಪ್ರಸ್ತಾವಿಸಿರುವುದು ಯಾವುದೇ ವರದಿಗಳಲ್ಲಿ ಕಂಡುಬಂದಿಲ್ಲ. ಪ್ರಕರಣದಲ್ಲಿ ಹಲ್ಲೆ ನಡೆಸಿದ ಆರೋಪಿಯನ್ನು ಆರ್ಯನ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತನನ್ನು ರಾಂಪಾಲ್‌ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಿದನ್ನು ಪ್ರಶ್ನಿಸಿದಕ್ಕೆ ಹಲ್ಲೆ ಮಾಡಿದ ಪ್ರಕರಣವನ್ನು,ಕೇಸರಿ ಬಟ್ಟೆ ಹೊದ್ದುಕೊಂಡು ಮಲಗಿದ್ದಕ್ಕೆ ಮುಸ್ಲಿಂ ವ್ಯಕ್ತಿಯಿಂದ ಹಲ್ಲೆ ನಡೆಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕುನಾಲ್ ಕಾಮ್ರನನ್ನು ಬೆಂಬಲಿಸಿ ಓಲಾ ಶೋರೂಂಗೆ ಬೆಂಕಿ ಹಚ್ಚಲಾಗಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights