FACT CHECK | ಮಣಿಪುರದಲ್ಲಿ ಯುವತಿಯನ್ನು ಗುಂಡಿಕ್ಕಿ ಹತ್ಯ ಮಾಡಲಾಗಿದೆ ಎಂದು ಮ್ಯಾನ್ಮಾರ್‌ನ 2 ವರ್ಷದ ಹಳೆಯ ವಿಡಿಯೋ ಹಂಚಿಕೆ

ಭಾರತದ ಮಣಿಪುರದಲ್ಲಿ ಹಿಂದೂ ಹುಡುಗಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಂದುಹಾಕಲಾಗಿದೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ದೃಶ್ಯಗಳನ್ನು ಮಣಿಪುರದ ಆಂತರಿಕ ಬಿಕ್ಕಟಿಗೆ ಸಮೀಕರಿಸಿ “‘ಸುಪ್ರೀಂ ಕೋರ್ಟ್‌ಗೆ ಮಣಿಪುರ ಸಂಘರ್ಷದ ಪುರಾವೆ ಬೇಕಾಗಿದೆ, ಆದ್ದರಿಂದ ಈ ವೀಡಿಯೊವನ್ನು 48 ಗಂಟೆಗಳ ಒಳಗೆ ವೈರಲ್ ಮಾಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ, ದಯವಿಟ್ಟು ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ.” ಎಂಬ ಸಂದೇಶದೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. 

 

 

 

 

 

 

 

 

 

 

 

ಇದೇ ವೀಡಿಯೋವನ್ನು ಮಣಿಪುರದ ಕ್ರಿಶ್ಚಿಯನ್ ಹುಡುಗಿಯನ್ನು ಅಲ್ಲಿನ ಮತಾಂಧ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಕೊಂದುಹಾಕಿದ್ದಾರೆ ಎಂದು ಸಹ ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ನಲ್ಲಿ ಈ ವಿಡಿಯೋವನ್ನು ಹಲವರು ಹಂಚಿಕೊಳ್ಳುತ್ತಿದ್ದು, ಹಿಂದೂ ಮತ್ತು ಕ್ರಿಶ್ಚಿಯನ್ ಎಂಬ ಕೋಮು ಹಿನ್ನಲೆಯನ್ನು ನೀಡಲಾಗುತ್ತಿದೆ. ಹಾಗಿದ್ದರೆ ಪೊಸ್ಟ್‌ನ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್ :

ವೈರಲ್ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಘಟನೆ ಡಿಸೆಂಬರ್ 2022 ರಲ್ಲಿ ನಡೆದಿರುವ ಕುರಿತು ಹಲವು ಬರ್ಮೀಸ್ ವರದಿಗಳು ಮತ್ತು ವಿಡಿಯೋಗಳು ಲಭ್ಯವಾಗಿವೆ. ಸುದ್ದಿವಾಹಿನಿ ಇಲೆವೆನ್ ಮ್ಯಾನ್ಮಾರ್ ಡಿಸೆಂಬರ್ 3, 2022 ರಂದು ಈ ಘಟನೆಯ ಕುರಿತು ವರದಿಯನ್ನು ಪ್ರಕಟಿಸಿದೆ. ‘ಯುವತಿಯೊಬ್ಬಳನ್ನು ಹೊಡೆದು, ಗುಂಡಿಕ್ಕಿ ಕೊಲ್ಲಲಾಗಿದೆ  “ಮಿಲಿಟರಿ ಮಾಹಿತಿದಾರೆ” ಎಂದು ತಪ್ಪೊಪ್ಪಿಗೆಯನ್ನು ಮಾಡಲು ಒತ್ತಾಯಿಸಲಾಯಿತು’, ಎಂದು ಮ್ಯಾನ್ಮಾರ್‌ನಲ್ಲಿ ಘಟನೆ ನಡೆದಿದೆ ಎಂದು ಸುದ್ದಿ ಪೋರ್ಟಲ್ ವರದಿ ಮಾಡಿದೆ.

 

 

 

 

 

 

 

 

 

 

“ವೀಡಿಯೊ ಕ್ಲಿಪ್ ಕೇವಲ 3 ನಿಮಿಷಗಳಿಗಿಂತ ಹೆಚ್ಚು ಉದ್ದವಾಗಿದೆ ಮತ್ತು ಘಟನೆಯ ನಿಖರವಾದ ಸ್ಥಳವನ್ನು ಒಳಗೊಂಡಿಲ್ಲ ಆದರೆ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡವರು ಈ ಘಟನೆಯು ತಮುದಲ್ಲಿ ನಡೆದಿದೆ ಮತ್ತು ತಮು PDF (People Defense Force (ಜನರ ರಕ್ಷಣಾ ಪಡೆಗಳು)) ನಂ.4 ಬೆಟಾಲಿಯನ್‌ನಿಂದ ಮಾಡಲಾಗಿದೆ ಎಂದು ಬರೆದಿದ್ದಾರೆ. ಪ್ರಾಥಮಿಕ ವೀಡಿಯೊದ ಪ್ರಕಾರ, ಯುವತಿಯು ನಾನ್-CDM (ನಾಗರಿಕ ಅಸಹಕಾರ ಚಳುವಳಿ) ಶಿಕ್ಷಕಿಯಾಗಿದ್ದು, ಆಕೆಯ ಹೆಸರು ಮತ್ತು ಈ ಘಟನೆಯ ಸ್ಥಳವು ಇನ್ನೂ ತಿಳಿದುಬಂದಿಲ್ಲ. ಆಡಳಿತಾರೂಢ ಸೇನೆಗೆ ಮಾಹಿತಿ ನೀಡುವವರು (sic),” ಎಂದು ವರದಿ ಹೇಳಿದೆ.

 

 

 

 

 

 

 

 

ಇದರಿಂದ ಸೂಚನೆಯನ್ನು ತೆಗೆದುಕೊಂಡು, ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಕೆಲವು ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ ಮತ್ತು ಮ್ಯಾನ್ಮಾರ್‌ನ ಸಾರ್ವಜನಿಕವಾಗಿ ಕಡ್ಡಾಯಗೊಳಿಸಲಾದ ರಾಷ್ಟ್ರೀಯ ಏಕತೆ ಸರ್ಕಾರ (ಎನ್‌ಯುಜಿ) ಸಾಗಯಿಂಗ್ ಪ್ರದೇಶದ ತಮುವಿನ ಬೀದಿಯಲ್ಲಿ ಮಹಿಳೆಯ ಹತ್ಯೆಯನ್ನು ತನಿಖೆ ಮಾಡಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.

ಹೇಳಿಕೆಯನ್ನು ಬಿಡುಗಡೆ ಮಾಡಿದ ಎನ್‌ಯುಜಿ, “ಈ ಘಟನೆಯು ಮಿಲಿಟರಿ ನೀತಿ ಮತ್ತು ನಿಯಮಗಳ ಅಡಿಯಲ್ಲಿ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ಕಾರಣ, ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗುವುದು ಮತ್ತು ಅದರಲ್ಲಿ ಭಾಗಿಯಾಗಿರುವವರ ವಿರುದ್ಧ ಪರಿಣಾಮಕಾರಿಯಾಗಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.

ಮ್ಯಾನ್ಮಾರ್ ನೌ ವರದಿಯ ಪ್ರಕಾರ, ಎನ್‌ಯುಜಿಯ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ನೈಂಗ್ ಹ್ಟೂ ಆಂಗ್ ಅವರು ಜೂನ್‌ನಲ್ಲಿ ತಮು ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ ಮತ್ತು ಕೆಲವು ಆರೋಪಿಗಳು ಆಂಟಿ-ಜುಂಟಾ ಪೀಪಲ್ಸ್ ಡಿಫೆನ್ಸ್ ಫೋರ್ಸ್ (PDF) ಜಿಲ್ಲಾ ಘಟಕ ತಮುವಿನ 4 ನೇ ಬೆಟಾಲಿಯನ್‌ಗೆ ಸೇರಿದವರು ಎಂದು ಹೇಳಿದರು.

 

 

 

 

 

 

 

 

 

 

 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕಳೆದ ಎರಡು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಹೇಳಿಕೆಯೊಂದಿಗೆ ಪ್ರಸಾರವಾಗುತ್ತಿದೆ. ಅವುಗಳನ್ನು ಏನ್‌ಸುದ್ದಿ.ಕಾಂ ಫ್ಯಾಕ್ಟ್‌ಚೆಕ್ ಮಾಡಿರುವುದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್ : ಉಗ್ರರ ಗುಂಪೊಂದು ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡುತ್ತಿರುವ ವೈರಲ್ ವಿಡಿಯೋ ಮಣಿಪುರದ್ದಲ್ಲ

ಈ ಘಟನೆ 2022ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದಿದ್ದು, ಈ ವಿಡಿಯೋಗೂ ಮಣಿಪುರ ಅಥವಾ ಭಾರತದ ಕ್ರಿಶ್ಚಿಯನ್/ಹಿಂದೂ ಯುವತಿಗೆ ಯಾವುದೇ ಸಂಬಂಧವಿಲ್ಲ. ವಿಡಿಯೋದಲ್ಲಿ ಕಂಡುಬರುವ 25 ವರ್ಷದ ಯುವತಿ ಆಯೆ ಮಾರ್ ತುನ್ ಎಂದು ಗುರುತಿಸಲಾಗಿದೆ. ಮ್ಯಾನ್ಮಾರ್ ಮಿಲಿಟರಿಗೆ ಬಂಡುಕೋರರಾದ “ಪೀಪಲ್ಸ್‌ ಡಿಫೆನ್ಸ್‌ ಫೋರ್ಸ್‌” ವಿರುದ್ಧ ಮಾಹಿತಿ ನೀಡುತ್ತಿದ್ದಳು ಎಂಬ ಕಾರಣಕ್ಕಾಗಿ ಹತ್ಯ ಮಾಡಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಮ್ಯಾನ್ಮಾರ್‌ನಲ್ಲಿ 2022ರಲ್ಲಿ ನಡೆದ ಘಟನೆಯನ್ನು ಮಣಿಪುರದಲ್ಲಿ ಹಿಂದೂ ಹುಡುಗಿಯನ್ನು ಕೊಂದುಹಾಕಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸುಳ್ಳು ಸಂದೇಶವಾಗಿದ್ದು ಅದನ್ನು ಎಲ್ಲಿಯೂ ಹಂಚಿಕೊಳ್ಳಬಾರೆದೆಂದು ಏನ್‌ಸುದ್ದಿ.ಕಾಂ ವಿನಂತಿಸುತ್ತದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೀರತ್‌ನಲ್ಲಿ ಮುಸ್ಲಿಂ ವ್ಯಕ್ತಿಗೆ ಹಿಂದೂಗಳ ಗುಂಪು ಗುಂಡುಕ್ಕಿ ಹತ್ಯೆ ಮಾಡಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights