FACT CHECK | ಮುಸ್ಲಿಂ ವ್ಯಕ್ತಿಗೆ ಸಾರ್ವಜನಿಕವಾಗಿ ಕಪಾಳಕ್ಕೆ ಹೊಡೆದ ಹಿಂದೂ ಯುವತಿ ಎಂದು ಸ್ಕ್ರಿಪ್ಟ್‌ ವಿಡಿಯೋ ಹಂಚಿಕೆ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ ಮತ್ತು ಯುವತಿಯನ್ನು ಕೆಣಕುವಂತೆ, ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ದೇಹವನ್ನು ಪ್ರದರ್ಶಿಸಲು ಸಾರ್ವಜನಿಕವಾಗಿ ಶರ್ಟ್ ತೆಗೆದಾಗ ಹಿಂದೂ ಮಹಿಳೆಯೊಬ್ಬರು ಸರಿಯಾಗಿ ಪಾಠ ಕಲಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ 22 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡು, ‘‘ಹಿಂದೂ ಮಹಿಳೆಗೆ ತನ್ನ ದೇಹವನ್ನು ತೋರಿಸಲು ಛಪ್ರಿ ಅಬ್ದುಲ್ ತನ್ನ ಶರ್ಟ್ ಅನ್ನು ತೆಗೆದುಹಾಕುತ್ತಾನೆ ಮತ್ತು ಧೈರ್ಯಶಾಲಿ ಹಿಂದೂ ಮಹಿಳೆಯಿಂದ ಚೆನ್ನಾಗಿ ಚಿಕಿತ್ಸೆ ಪಡೆಯುತ್ತಾನೆ. ಅಧರ್ಮವನ್ನು ವಿರೋಧಿಸಿ. ನಿಮಗೂ ಎಲ್ಲಾದರೂ ಈ ದುಷ್ಠ ರೀತಿಯ ಅನುಭವವಾದರೆ ಚಪ್ಲಿ ಹರಿಯೋ ಹಾಗೆ ಹೊಡೀರಿ,’’ ಎಂದು ಬರೆದುಕೊಂಡಿದ್ದಾರೆ.

ವೈರಲ್ ವೀಡಿಯೊದಲ್ಲಿ ಪುರುಷನೊಬ್ಬ ಬೀದಿಯಲ್ಲಿ ಇನ್ನೊಬ್ಬ ಪುರುಷನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮುಂದೆ ಶರ್ಟ್ ತೆಗೆದು ಬಾಡಿ ಶೋ ಮಾಡಿದಾಗ ಮಹಿಳೆ ಅವನಿಗೆ ಕಪಾಳಮೋಕ್ಷ ಮಾಡುವುದನ್ನು ನೋಡಬಹುದು.
ಲೀರ್ ಬೈಸೆಪ್ಸ್

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾದ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, “ತಮ್ಮನಾ ಕೊಹ್ಲಿ  786787” ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡುರುವುದು ಕಂಡುಬಂದಿದೆ.

ಈ ವಿಡಿಯೋವನ್ನು “ಮನರಂಜನೆ ಮತ್ತು ಜಾಗೃತಿ” ಉದ್ದೇಶಗಳಿಗಾಗಿ ರಚಿಸಲಾಗಿದೆ ಎಂದು ಡಿಸ್‌ಕ್ಲೈಮ್ ಮಾಡಿಕೊಳ್ಳಲಾಗಿದೆ.

 

ವಿಡಿಯೊದಲ್ಲಿರುವ ಮಹಿಳೆ ತಮನ್ನಾ ಕೊಹ್ಲಿ, ಎಂಟು ಸಾವಿರಕ್ಕೂ ಹೆಚ್ಚು ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದು, ಈಕೆ ಕಂಟೆಂಟ್ ಕ್ರಿಯೇಟರ್‌ಆಗಿ ಗುರುತಿಸಿಕೊಂಡಿದ್ದಾರೆ. ಅವರ ಇನ್‌ಸ್ಟಾ ವಿಡಿಯೋಗಳಲ್ಲಿ  ಪುರುಷರು ತಮ್ಮ ಶರ್ಟ್‌ಗಳನ್ನು ತೆಗೆದಾಗ ಸಾರ್ವಜನಿಕರು ಬೈಯುತ್ತಿರುವ ಅನೇಕ ವಿಡಿಯೋಗಳು ಲಭ್ಯವಾಗಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇದಲ್ಲದೆ, ವೈರಲ್ ವೀಡಿಯೊದಲ್ಲಿರುವ ಇಬ್ಬರು ಪುರುಷರು ಖಾತೆ ಹಂಚಿಕೊಂಡ ಇತರ ವೀಡಿಯೊಗಳಲ್ಲಿಯೂ ನಟಿಸುವುದನ್ನು ಕಾಣಬಹುದು

 

ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಪುರುಷರು ಆಕೆಯ ಖಾತೆಯಲ್ಲಿ ಹಂಚಿಕೊಂಡ ಇತರ ವೀಡಿಯೊಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ತನ್ನ ದೇಹವನ್ನು ತೋರಿಸುತ್ತಿರುವ ವ್ಯಕ್ತಿಯನ್ನು ಈ ವೀಡಿಯೊದಲ್ಲಿ ನೋಡಬಹುದು ಮತ್ತು ವೈರಲ್ ವೀಡಿಯೊದಲ್ಲಿ ಆಕೆಯ ಜೊತೆಗಿರುವ ವ್ಯಕ್ತಿಯನ್ನು ಇಲ್ಲಿ ಕಾಣಬಹುದು.

ಲೀರ್ ಬೈಸೆಪ್ಸ್

ಒಟ್ಟಾರೆಯಾಗಿ ಹೇಳುವುದಾದರೆ, ಮನರಂಜನೆ ಮತ್ತು ಜಾಗೃತಿ ಉದ್ದೇಶಗಳಿಗೆ ರಚಿಸಿದ ಸ್ಕ್ರಿಪ್ಟ್‌ ವಿಡಿಯೋಗಳನ್ನು, ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ದೇಹವನ್ನು ಪ್ರದರ್ಶಿಸಲು ಸಾರ್ವಜನಿಕವಾಗಿ ಶರ್ಟ್ ತೆಗೆದಾಗ ಹಿಂದೂ ಮಹಿಳೆಯೊಬ್ಬರು ಕೆನ್ನಗೆ ಬಾರಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಆಹಾರದಲ್ಲಿ ಮೂತ್ರ ಬೆರಸಿ ಸಿಕ್ಕಿಬಿದ್ದ ಮಹಿಳೆ ಮುಸ್ಲಿಮಳಲ್ಲ! ಹಾಗಿದ್ರೆ ಮತ್ತ್ಯಾರು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights