FACT CHECK | ಪ್ರಿಯಾಂಕ ಗಾಂಧಿ ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವಾಗ ಪಾಕ್ ಧ್ವಜಗಳನ್ನು ಪ್ರದರ್ಶಿಸಲಾಗಿದೆಯೇ?

2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡ್ ಮತ್ತು ರಾಯ್ ಬರೇಲಿ ಎರಡರಿಂದಲೂ ಸ್ಪರ್ಧಿಸಿ ಗೆದ್ದಿದ್ದರು. ನಂತರ ಅವರು ಜೂನ್ 2024 ರಲ್ಲಿ ವಯನಾಡ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಇದರಿಂದಾಗಿ ವಯನಾಡ್ ಸ್ಥಾನವು ತೆರವಾಯಿತು. ಇತ್ತೀಚೆಗೆ, 15 ಅಕ್ಟೋಬರ್ 2024 ರಂದು, ಭಾರತದ ಚುನಾವಣಾ ಆಯೋಗವು (ಇಸಿಐ) ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿತು, ಇದರ ಜೊತೆಗೆ 48 ವಿಧಾನಸಭಾ ಕ್ಷೇತ್ರಗಳು ಮತ್ತು 2 ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಯನಾಡ್ ಸಂಸತ್ ಸ್ಥಾನಕ್ಕೆ 23 ಅಕ್ಟೋಬರ್ 2024 ರಂದು, ಪ್ರಿಯಾಂಕಾ ಗಾಂಧಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಯನಾಡಿನಲ್ಲಿ ಬೃಹತ್ ರ‍್ಯಾಲಿ ಮತ್ತು ರೋಡ್ ಶೋ ಆಯೋಜಿಸಿದ್ದವು. ಈ ಸಂದರ್ಭದಲ್ಲಿ, ವಯನಾಡಿನಲ್ಲಿ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಪ್ರಿಯಾಂಕಾ ಗಾಂಧಿಯವರ ನಾಮಪತ್ರ ಸಲ್ಲಿಕೆ ವೇಳೆ ನಡೆದ ರ‍್ಯಾಲಿಯಲ್ಲಿ ಇಸ್ಲಾಮಿಕ್/ಪಾಕಿಸ್ತಾನದ ಧ್ವಜಗಳನ್ನು ಪ್ರದರ್ಶೀಸಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಇದರಿಂದ ಈ ವಿಡಿಯೋ ಪ್ರಿಯಾಂಕಾ ಗಾಂಧಿಯವರ ವಯನಾಡ್ ರ‍್ಯಾಲಿಯದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಇದರ ನಂತರ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ ಜೂನ್ 10, 2019 ರಂದು ವೈರಲ್‌ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.  ಅಂದರೆ ಈ ವಿಡಿಯೋ ಸುಮಾರು ಐದು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವುದು ಸ್ಪಷ್ಟವಾಗಿದೆ. ಇನ್ನು ಈ ವಿಡಿಯೋ 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೇರಳದ ಕಾಸರಗೋಡಿನಿಂದ ಬಂದಿದೆ. ವಿಡಿಯೋದಲ್ಲಿ ಸಿಪಿಎಂ ಅಭ್ಯರ್ಥಿ ಸತೀಶ್ ಚಂದ್ರನ್ ವಿರುದ್ಧ ಘೋಷಣೆಗಳು ಕೇಳಿ ಬರುತ್ತಿವೆ. ವೀಡಿಯೊದಲ್ಲಿ ಕಂಡುಬರುವ ಹಸಿರು ಬಾವುಟಗಳು ರಾಜಕೀಯ ಪಕ್ಷವಾದ IUML ಗೆ ಸೇರಿದ್ದು, ಇದು ಕೇರಳದ ಪ್ರಸಿದ್ಧ ರಾಜಕೀಯ ಪಕ್ಷವಾಗಿದೆ. ಕಾಸರಗೋಡಿನಲ್ಲಿ ಅವರ ಪಕ್ಷದ ಇಬ್ಬರು ಶಾಸಕರಿದ್ದಾರೆ ಎಂಬುದು ತಿಳಿದು ಬಂದಿದೆ.

Old and unrelated video is being shared as evidence of Islamic/Pakistani  flags waved at Priyanka Gandhi's nomination rally in Wayanad - FACTLY

ಇನ್ನು ವಿಡಿಯೋದಲ್ಲಿ ಕಾಣುವ ಹಸಿರು ಬಾವುಟ ಹಾಗೂ ಪಾಕಿಸ್ತಾನದ ಧ್ವಜವನ್ನು ಹೋಲಿಕೆ ಮಾಡಿದ್ದೇವೆ. ವಿಡಿಯೋದಲ್ಲಿ ಕಂಡುಬರುವ ಹಸಿರು ಧ್ವಜವು ಬಿಳಿ ಪಟ್ಟಿಯನ್ನು ಹೊಂದಿಲ್ಲ, ಆದರೆ ಪಾಕಿಸ್ತಾನದ ಧ್ವಜವು ಬಿಳಿ ಪಟ್ಟಿಯನ್ನು ಹೊಂದಿರುತ್ತದೆ. ಹಾಗಾಗಿ ವೈರಲ್‌ ವಿಡಿಯೋದಲ್ಲಿರುವುದು ಪಾಕಿಸ್ತಾನದ ಧ್ವಜವಲ್ಲ ಎಂಬುದು ಸ್ಪಷ್ಟವಾಗಿದೆ. ಇದಾದ ನಂತರ ನಾವು ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಯವರ ರ್ಯಾಲಿಯ ಲೈವ್ ವೀಡಿಯೊವನ್ನು ಪರಿಶೀಲಿಸಿದ್ದೇವೆ. ಕೇರಳ ಕಾಂಗ್ರೆಸ್‌ನ ಫೇಸ್‌ಬುಕ್ ಪುಟದಲ್ಲಿ ರ್ಯಾಲಿಯನ್ನು ಲೈವ್ ಮಾಡಲಾಗಿದೆ. ಇದರಲ್ಲಿ, ರ‍್ಯಾಲಿಯಲ್ಲಿ ಐಯುಎಂಎಲ್ ಮತ್ತು ಕಾಂಗ್ರೆಸ್ ಧ್ವಜಗಳು ಗೋಚರಿಸುತ್ತವೆ.

ಅಕ್ಟೋಬರ್ 23 ರಂದು ಎನ್‌ಡಿಟಿವಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯಲ್ಲಿ , ಪ್ರಿಯಾಂಕಾ ಗಾಂಧಿ ಕಲ್ಪೆಟ್ಟಾದಲ್ಲಿ ರೋಡ್ ಶೋ ಮೂಲಕ ಚುನಾವಣಾ ಯಾತ್ರೆಯನ್ನು ಪ್ರಾರಂಭಿಸಿದರು ಮತ್ತು ವಯನಾಡ್ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದರು ಎಂದು ಬರೆಯಲಾಗಿದೆ. ರೋಡ್ ಶೋನಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷ ಐಯುಎಂಎಲ್ ಧ್ವಜಗಳು ಕಂಡುಬಂದವು. ನವೆಂಬರ್ 13 ರಂದು ವಯನಾಡಿನಲ್ಲಿ ಮತದಾನ ನಡೆಯಲಿದೆ.

 

 

 

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಿಯಾಂಕಾ ಗಾಂಧಿ ಅವರು ವಯನಾಡ್ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ನಡೆದ  ರ‍್ಯಾಲಿಯಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷ ಐಯುಎಂಎಲ್ ಧ್ವಜಗಳನ್ನು ಪ್ರದರ್ಶಿಸಲಾಗಿದೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು 5 ವರ್ಷದ ಹಳೆಯ ಮತ್ತು ಐಯುಎಂಎಲ್ ಗೆ ಸೇರಿದ ಧ್ವಜಗಳ ವಿಡಿಯೋವನ್ನು ಸುಳ್ಳು ಮತ್ತು ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚರಂಡಿ ನೀರನ್ನು ಬಳಸಿ ಬಿರಿಯಾನಿ ತಯಾರಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights