FACT CHECK | ಬಾರ್ಮರ್‌ನಲ್ಲಿ ನಡೆದ ರೈಲು ಅಪಘಾತದ ಅಣಕು ಕಾರ್ಯಾಚರಣೆಯನ್ನು ನಿಜವಾದ ರೈಲು ಅಪಘಾತ ಎಂದು ತಪ್ಪಾಗಿ ಹಂಚಿಕೆ

ರೈಲು ಅಪಘಾತವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಎನ್‌ಡಿಆರ್‌ಎಫ್ ತಂಡವು ಗಾಯಾಳುಗಳನ್ನು ಸುರಕ್ಷತಾ ಕ್ರಮಗಳೊಂದಿಗೆ ರೈಲು ಕೋಚ್‌ನಿಂದ ರಕ್ಷಿಸುವುದನ್ನು ತೋರಿಸಲಾಗಿದೆ. ಬಾರ್ಮರ್‌ನಲ್ಲಿ ರೈಲು ಅಪಘಾತ ಸಂಭವಿಸಿದೆ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಕೆಲವು ಬಳಕೆದಾರರು ರೆದುಕೊಂಡು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂದು? ಫೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರು ರೈಲು ಅಪಘಾತದ ಪೋಸ್ಟ್‌ಗಳನ್ನು ಕುರಿತಾಗಿ  ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  22,ಅಕ್ಟೋಬರ್ 2024 ರಂದು ETV ಭಾರತ್‌ನ ಪ್ರಕಟಿಸಿದ ಲೇಖನವೊಂದು ಲಭ್ಯವಾಗಿದೆ.

ಲೇಖನದ ಪ್ರಕಾರ, 22,ಅಕ್ಟೋಬರ್ 2024 ರಂದು ಬಾರ್ಮರ್ ರೈಲ್ವೇಯಿಂದ ರೈಲು ಅಪಘಾತವನ್ನು ಅನುಕರಿಸುವ ಅಣಕು ಕಾರ್ಯಾಚರಣೆಯನ್ನು ಆಯೋಜಿಸಲಾಗಿದೆ ಎಂದು ವರದಿ ಮಾಡಿದೆ. ಈ ಪ್ರದರ್ಶನದ ಸಮಯದಲ್ಲಿ, ವಿಪತ್ತು ನಿರ್ವಹಣಾ ತಂಡಗಳು ರೈಲು ಬೋಗಿಗಳಲ್ಲಿ ಸಿಕ್ಕಿಬಿದ್ದ ಡಮ್ಮಿ ಪ್ರಯಾಣಿಕರನ್ನು ರಕ್ಷಿಸಲು ಅಭ್ಯಾಸ ಮಾಡಿದರು. ಈ ಅಣಕು ಕಾರ್ಯಾಚರಣೆಗೆ ಸಂಬಂಧಿಸಿದ ಫೋಟೋಗಳನ್ನು ಲೇಖನದಲ್ಲಿ ಸೇರಿಸಲಾಗಿದೆ.

NDTV  ಮತ್ತು MPCG ವೆಬ್‌ಸೈಟ್‌ನಲ್ಲಿ ಈ ಅಣಕು ಡ್ರಿಲ್‌ನ ಹೆಚ್ಚುವರಿ ಮಾಹಿತಿ ಲಭ್ಯವಿದೆ.

ಈ ಕಾರ್ಯಾಚರಣೆಗಾಗಿ ರೈಲ್ವೆ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ ಎಂದು ಪತ್ರಿಕಾ ವೆಬ್‌ಸೈಟ್ ಅಕ್ಟೋಬರ್ 22 ರಂದು ವರದಿ ಮಾಡಿದೆ. ಬಾರ್ಮರ್-ಮುನಾಬಾವೊ ಪ್ಯಾಸೆಂಜರ್ ರೈಲು ಒಳಗೊಂಡ ಅಪಘಾತದ ಅಣಕು ಎಚ್ಚರಿಕೆಯನ್ನು ಸ್ವೀಕರಿಸಿದ ನಂತರ, ರಕ್ಷಣಾ ತಂಡವು ಪರಿಹಾರ ರೈಲು ಮೂಲಕ ಘಟನಾ ಸ್ಥಳಕ್ಕೆ ಆಗಮಿಸಿತು. NDRF, SDRF ಮತ್ತು ಇತರ ರಕ್ಷಣಾ ಘಟಕಗಳ ತಂಡಗಳು ನಂತರ ರೈಲಿನಲ್ಲಿ ಇರಿಸಲಾದ ಡಮ್ಮಿ ಗಾಯಾಳುಗಳನ್ನು “ಪಾರುಮಾಡಲು” ಕಾರ್ಯಾಚರಣೆಯನ್ನು ನಡೆಸಿದವು. ಬಾರ್ಮರ್‌ನಿಂದ ಸುಮಾರು 500 ಮೀಟರ್‌ಗಳಷ್ಟು ಸಿದ್ಧಪಡಿಸಲಾದ ಈ ಸೆಟ್‌ಅಪ್, ನೈಜ ಅಪಘಾತದ ದೃಶ್ಯವನ್ನು ಅನುಕರಿಸಲು ಕ್ರೇನ್‌ನ ಸಹಾಯದಿಂದ ಒಂದು ಕೋಚ್ ಅನ್ನು ಇನ್ನೊಂದರ ಮೇಲೆ ಜೋಡಿಸಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ರೈಲು ಅಪಘಾತದ ಸಂದರ್ಭದಲ್ಲಿ ನಡೆಸುವ ತುರ್ತು ಕಾರ್ಯಾಚರಣೆಯ ಅಣಕು ಪ್ರದರ್ಶನದ ದೃಶ್ಯಗಳನ್ನು ನಿಜವಾದ ರೈಲು ಅಪಘಾತ ಸಂಭವಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 40 ಮುಸ್ಲಿಂ ಡಾಭಾಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights