ಮಾಲಿಯನ್ನಲ್ಲಿ ಮಿಲಿಟರಿ ದಂಗೆ; ಸರ್ಕಾರ ವಿಸರ್ಜಿಸಿದ ಅಧ್ಯಕ್ಷ ಬೌಬಾಕರ್ ಕಿಟಾ
ಮಾಲಿಯನ್ ದೇಶಾದ್ಯಂತ ರಾಜಕೀಯ ಬಿಕ್ಕಟ್ಟಿ ಎದುರಾಗಿದ್ದು, ಮಿಲಿಟರಿ ನಡೆಸಿದ ದಂಗೆಯ ನಂತರ, ನನಗೆ ದೇಶದಲ್ಲಿ ‘ರಕ್ತ ಚೆಲ್ಲುವ ಬಯಕೆ ಇಲ್ಲ’ ಎಂದು ಮಾಲಿಯನ್ ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ಕಿಟಾ ಅವರು ರಾಜೀನಾಮೆ ನೀಡಿದ್ದಾರೆ.
ಮಂಗಳವಾರ ಮಧ್ಯರಾತ್ರಿ ತಮ್ಮ ಸರ್ಕಾರಿ ಟೆಲಿವಿಷನ್ ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಇಬ್ರಾಹಿಂ ಬೌಬಾಕರ್ ಕಿಟಾ ಅವರು ಸರ್ಕಾರ ಹಾಗೂ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಲಾಗುವುದು ಎಂದು ಪ್ರಕಟಿಸಿದ್ದರು. ಅದರಂತೆ ಇಂದು ರಾಜೀನಾಮೆ ನೀಡಿದ್ದಾರೆ.
ಮಾಲಿಯಲ್ಲಿ ಆಡಳಿತಾರೂಢ ಸರ್ಕಾರದ ವಿರುದ್ಧ ಜನರ ಪ್ರತಿಭಟನೆ ಭುಗಿಲೆದ್ದ ಹಿನ್ನಲೆಯಲ್ಲಿ ಕಿಟಾ ಅವರ ಸರ್ಕಾರದ ತಲೆದಂಡವಾಗಿದೆ.
ಕಳೆದ ಜುಲೈ ತಿಂಗಳಿನಿಂದ ಮಾಲಿಯನ್ನಲ್ಲಿ ಸರ್ಕಾರದ ವಿರುದ್ಧ ಜನರು ಪ್ರತಿಭಟನೆ ಮಾಡುತ್ತಿದ್ದರು. ರಾಜಧಾನಿ ಬಮಾಕೊನಲ್ಲಿ ಹಲವು ಬಾರಿ ನಡೆದ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದುಕೊಂಡಿತ್ತು. ತಿಂಗಳುಗಳು ಕಳೆದರೂ ಆಡಳಿತ ಸುಧಾರಣೆ ತರಲಾಗದ ಪರಿಸ್ಥಿತಿಯಿಂದಾಗಿ ಸರ್ಕಾರವನ್ನು ತ್ಯಜಿಸಲು ವಿರೋಧ ಪಕ್ಷಗಳು ಆಗ್ರಹಿಸಿದ್ದವು.
ಈ ನಡುವೆ, ಸೈನಿಕರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಬಮಾಕೊಗೆ ಹತ್ತಿರವಿರುವ ಪಟ್ಟಣವಾದ ಕಾಟಿಯ ಪ್ರಮುಖ ನೆಲೆಯಲ್ಲಿ ದಂಗೆಯನ್ನು ನಡೆಸಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಅಧ್ಯಕ್ಷ ಕಿಟಾ ಅವರು ಸರ್ಕಾರವನ್ನು ತ್ಯಜಿಸಿದ್ದಾರೆ.
Read Also: ಒಂದೇ ದಿನದಲ್ಲಿ 26 ದಶಲಕ್ಷ ಡಾಲರ್ ದೇಣಿಗೆ ಸಂಗ್ರಹಿಸಿದ ಕಮಲಾ ಹ್ಯಾರಿಸ್

