ಸಂಸದ ಪ್ರಜ್ವಲ್ ರೇವಣ್ಣ – ಬಿಜೆಪಿ ಶಾಸಕ ಪ್ರೀತಮ್ ಗೌಡ ನಡುವೆ ಫೋಟೋ ವಾರ್…
ಸಂಸದ ಪ್ರಜ್ವಲ್ ರೇವಣ್ಣ ಮತ್ತು ಬಿಜೆಪಿ ಶಾಸಕ ಪ್ರೀತಮ್ ಗೌಡ ನಡುವೆ ಫೋಟೋ ವಾರ್ ಶುರುವಾಗಿದೆ. ಹಾಸನದ ಹೇಮಾವತಿ ಪ್ರತಿಮೆ ಬಳಿಯ ಒಂದೇ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಇಬ್ಬರು ನಾಯಕರ ಫೋಟೋಗಳನ್ನ ಹಾಕಲಾಗಿದ್ದು, ಈ ಹಿಂದೆ ಶಾಸಕ ಪ್ರೀತಮ್ ಗೌಡ ಫೋಟೋ ಹಾಕಲಾಗಿತ್ತು. ಆದ್ರೆ ರಾತ್ರೋರಾತ್ರಿ ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡರ ಫೋಟೋ ಹಾಕಲಾಗಿದ್ದು, ಟ್ಯಾಕ್ಸಿ ಸ್ಟ್ಯಾಂಡ್ ಗೆ ಒಂದೆಡೆ ಬಿಜೆಪಿ ಶಾಸಕರ ಫೋಟೋ ಮತ್ತೊಂದೆಡೆ ಮಾಜಿ ಪ್ರಧಾನಿ ಫೋಟೋ ಹಾಕಲಾಗಿದೆ.
ಬಿಜೆಪಿ ಶಾಸಕ ಪ್ರೀತಮ್ ಗೌಡ ನೀಡಿದ ಅನುದಾನದಲ್ಲಿ 14 ಲಕ್ಷ ವೆಚ್ಚದಲ್ಲಿ ಟ್ಯಾಕ್ಸಿ ಸ್ಟ್ಯಾಂಡ್ ನಿರ್ಮಾಣ ಮಾಡಲಾಗಿದೆ. ಆದ್ರೆ ಮತ್ತೆ ಇದೇ ಟ್ಯಾಕ್ಸಿ ಸ್ಟ್ಯಾಂಡ್ ನ ಪುನರ್ ನಿರ್ಮಾಣಕ್ಕೆ ಮತ್ತೆ ಸಂಸದರ ಅನುದಾನ ನೀಡುವಂತೆ ಪ್ರಜ್ವಲ್ ರೇವಣ್ಣ ಡಿಸಿಗೆ ಪತ್ರ ಬರೆದಿದ್ದರು. ಈ ವಿಚಾರ ಜಿಲ್ಲೆಯಾದ್ಯಂತ ಬಾರೀ ಚರ್ಚೆಗೆ ಗ್ರಾಸವಾಗಿತ್ತು,
ಜೆಡಿಎಸ್ ಮತ್ತು ಬಿಜೆಪಿ ನಡುವೆ ಶುರುವಾಯಿತು ಬಹಿರಂಗ ಗುದ್ದಾಟ ನಡೆಯುತ್ತಿದ್ದು, ನಿರ್ಮಾಣವಾದ ಸ್ಟ್ಯಾಂಡ್ ಗೆ ಪ್ರಜ್ವಲ್ ಮತ್ತೆ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಿದ್ದರು. ಆದ್ರೆ ಕಾರಣಾಂತರಗಳಿಂದ ಮತ್ತೆ ಕಾರ್ಯಕ್ರಮ ಮುಂದೂಡಿದ್ದಾರೆ.


