ಇನ್ನೂ ಸಿಕ್ಕಿಲ್ಲ ನೆರೆ ಪರಿಹಾರ : ಮಕ್ಕಳ ಬದುಕಿನ ದಾರಿ ಕಾಣದೇ ನಿರಾಶ್ರಿತರು ಕಂಗಾಲು….!

ಮಕ್ಕಳಿಗಾಗೇ ಬದುಕಿದ್ರು. ಮಕ್ಕಳಿಗಾಗೇ ದುಡಿದ್ರು. ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ್ರು. ಹೊಟ್ಟೆ-ಬಟ್ಟೆ ಕಟ್ಟಿದ್ರು, ಹಗಲಿರುಳೆನ್ನದೆ ದುಡಿದ್ರು. ಹಬ್ಬಹರಿದಿನವನ್ನೂ ಮಾಡ್ಲಿಲ್ಲ, ಆರೋಗ್ಯ ಹದಗೆಟ್ರು ಬಿಡ್ಲಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ಗಾಣದೆತ್ತಿನಂತೆ ದುಡಿದ್ರು. ಹಸುಗೂಸ ಮಕ್ಕಳ ಮೊಗದಲ್ಲಿ ಬದುಕಿನ ಸಾರ್ಥಕತೆ ಕಂಡ್ರು. ಆದ್ರೆ, ಆ ಹತ್ತೇ-ಹತ್ತು ದಿನ. ದಶಕ-ಶತಕಗಳ ಕನಸೆಲ್ಲವೂ ಕಮರಿ ಹೋಯ್ತು. ಮಕ್ಕಳ ಭವಿಷ್ಯದ ಆಶಾಗೋಪುರ ಕಳಚಿ ಬಿತ್ತು. ಬದುಕಿಗೆ ಅಂಧಕಾರ ಕವಿಯಿತು. ಹಾಗಾದ್ರೆ, ಆ ಹತ್ತು ದಿನ ಯಾವ್ದು ಅಂತೀರಾ….. ಈ ಸ್ಟೋರಿ ನೋಡಿ…….

ಅಮ್ಮನ ತೋಳಲ್ಲೇ ಮಲಗಿರೋ ಮಗು. ಅಜ್ಜನ ಜೊತೆ ಬಿಸ್ಕೆಟ್ ತಿಂತಿರೋ ಕಂದಮ್ಮ. ಅಜ್ಜಿಯ ತೊಡೆ ಮೇಲೆ ಆಟವಾಡ್ತಿರೋ ಕಂದ. ಹೌದು ಈ ದೃಶ್ಯ ಕಂಡು ಬಂದಿದ್ದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿದ್ದರಹಳ್ಳಿ ಪರಿಹಾರ ಕೇಂದ್ರದಲ್ಲಿ. ಹೌದು, ನೋಡೋಕೆನೋ ಮುದ್ದಾಗಿರೋ ಮಕ್ಕಳ ಭವಿಷ್ಯ ನೆನೆದ್ರೆ ಹೆತ್ತೊಡಲಿಗೆ ಬೆಂಕಿ ಬಿದ್ದಂತಾಗುತ್ತೆ. ಯಾಕಂದ್ರೆ, ಆರ್ಥಿಕವಾಗಿ ಸಧೃಡವಲ್ಲದಿದ್ರು, ನೆಮ್ಮದಿಯಾಗಿದ್ದ ಇವ್ರೆಲ್ಲಾ ಆಗಸ್ಟ್ ತಿಂಗಳ ಮೊದಲ 10 ದಿನದ ಜಲರಾಕ್ಷಸನ ಅಟ್ಟಹಾಸಕ್ಕೆ ಬೀದಿಗೆ ಬಿದ್ದವರು. ಮನೆ-ಮಠ, ಆಸ್ತಿ-ಪಾಸ್ತಿ, ಬದುಕು ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದವರು. ನೂರಾರು ವರ್ಷಗಳಿಗಳಿಂದ ಬದುಕಿ-ಬಾಳಿದ್ದ ಮನೆಗಳು, ಬದುಕು ಕಟ್ಟಿಕೊಟ್ಟ ಹೊಲ-ಗದ್ದೆ-ತೋಟಗಳು ಸಂಪೂರ್ಣ ಮಣ್ಣು ಪಾಲಾಗಿದ್ವು. ಮಕ್ಕಳಿಗಾಗಿ ಹೊಟ್ಟೆ-ಬಟ್ಟೆ ಕಟ್ಟಿ ಮಣ್ಣಲ್ಲಿ ದುಡಿದದ್ದು ಮಣ್ಣು ಪಾಲೇ ಆಯ್ತು. ಎಲ್ಲಾ ಕಳ್ಕೊಂಡು ನಿರ್ಗತಿಕರಾದೋರು ಅವರನ್ನೆಲ್ಲಾ ಕರ್ಕೊಂಡ್ ಬಂದು ಎರಡು ತಿಂಗಳಿಂದ ನಿರಾಶ್ರಿತ ಕೇಂದ್ರದಲ್ಲಿ ನಿರ್ಗತಿಕರಾಗಿದ್ದಾರೆ. ಇತಿಹಾಸ ನೆನೆದು, ಮಕ್ಕಳ ಮುಖ ನೋಡಿ ಕಣ್ಣೀರಾಕ್ತಾ ನಿರಾಶ್ರಿತ ಕೇಂದ್ರದಲ್ಲಿ ಕಾಲ ಕಳೆಯುತ್ತಿದ್ದಾರೆ.

ಎಲ್ಲವನ್ನೂ ಕಳೆದುಕೊಂಡ ನಿರಾಶ್ರಿತ ಕೇಂದ್ರ ಸೇರಿದೋರು ಇತಿಹಾಸ-ಭವಿಷ್ಯ ಎರಡನ್ನೂ ನೆನೆದು ಕಣ್ಣೀರಿಡ್ತಿದ್ದಾರೆ. ಊರಿಗೆ ಹೋದ್ರೆ ಏನ್ ಮಾಡೋದು ಗೊತ್ತಿಲ್ಲ. ಮನೆ, ಹೊಲ-ಗದ್ದೆ-ತೋಟ ಯಾವ್ದೂ ಇಲ್ಲ. ಮಕ್ಕಳಿಗಾಗೇ ಮಾಡಿದ್ದೆಲ್ಲವೂ ಮಣ್ಣು ಪಾಲಾಗಿದೆ. ಮಕ್ಕಳು ನೆಮ್ಮದಿಯಾಗಿ ಮಲಗೋಕೆ ಒಂದು ಸೂರು ಇಲ್ಲ. ನಿರಾಶ್ರಿತ ಕೇಂದ್ರದಲ್ಲಿ ವಾರಕ್ಕೆರಡು ಬಾರಿ ಮಕ್ಕಳನ್ನ ಆಸ್ಪತ್ರೆ ಕರೆಯೊಯ್ಯುತ್ತಿರೋದ್ರಲ್ಲಿ ದಿನ ದೂಡ್ತಿದ್ದಾರೆ. ಸರ್ಕಾರ ತಾತ್ಕಾಲಿಕ ಪರಿಹಾರ ಅಂತ 10 ಸಾವಿರ ಹಣ ಬಹುತೇಕರು ಆಸ್ಪತ್ರೆಗೆ ಹಾಕಿದ್ದಾರೆ. ಕಾಫಿನಾಡಿನ ಮೂಡಿಗೆರೆ ತಾಲೂಕಿನ ಆಲೇಖಾನ್ ಹೊರಟ್ಟಿ, ಮಧುಗುಂಡಿ, ದುರ್ಗದಹಳ್ಳಿ ಸೇರಿದಂತೆ ಕೆಲ ಗ್ರಾಮಗಳನ್ನ ಸರ್ಕಾರ ಸ್ಥಳಾಂತರವೂ ಮಾಡ್ತಿಲ್ಲ. ಸೂಕ್ತವಾದ ಪರಿಹಾವನ್ನೂ ನೀಡ್ತಿಲ್ಲ. ಬರೀ ಸಚಿವರು, ಅಧಿಕಾರಿಗಳು ಎಡತಾಕೋದೆ ಆಗ್ತಿದೆ. ನಮ್ಮಂತೆ ಆಗೋದು ಬೇಡವೆಂದು ಮಕ್ಕಳಿಗಾಗಿ ದುಡಿದವ್ರು ಮಕ್ಕಳ ಸ್ಥಿತಿ ನಮಗಿಂದ ಹೀನಾಯವಾಗುತ್ತಲ್ಲಾ ಎಂದು ನೆನೆದು ಕುಂತಲ್ಲಿ-ನಿಂತಲ್ಲಿ ಕಣ್ಣೀರಿಡ್ತಿದ್ದಾರೆ.

ಒಟ್ಟಾರೆ, ನಾವು ಬಡವರಾಗಿ ಹುಟ್ಟಿ ಬಡವರಾಗೇ ಸಾಯ್ತಿವಿ. ನಮ್ಮ ಮಕ್ಕಳು ಹಾಗಾಗೋದು ಬೇಡವೆಂದು ಹಗಲಿರುಳು ದುಡಿದ ಮಾತೃ-ಪಿತೃ ವಾತ್ಸಲ್ಯಕ್ಕೆ ವರುಣಾದೇವ ತಣ್ಣೀರೆರಚಿದ್ದಾನೆ. ಮಲೆನಾಡಿಗರಿಗೆ ಒಂದೇ ಜೀವಿತಾವಧಿಯಲ್ಲಿ ಎರಡೆರಡು ಬದುಕು ಕೊಟ್ಟಿಕೊಳ್ಳೋ ದುಸ್ಥಿತಿ ನಿರ್ಮಾಣವಾಗಿದೆ. ಪರಿಹಾರದ ವಿಚಾರದಲ್ಲಿ ಸರ್ಕಾರ ಪ್ರಕೃತಿಗಿಂತ ನಿಷ್ಠೂರವಾಗಿ ನಡೆದುಕೊಳ್ತಿರೋದು ನಿರಾಶ್ರಿತರಿಗೆ ನಮ್ಗೆ ಬದ್ಕೋ ಹಕ್ಕಿಲ್ವಾ ಎಂಬ ಸಂದೇಹ ಮೂಡಿದೆ. ಇನ್ನಾದ್ರು ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಿ, ಮಲೆನಾಡಿಗರ ನೆರವಿಗೆ ಧಾವಿಸಲಿ ಅನ್ನೋದು ನಮ್ಮ ಆಶಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights