ಚಲಿಸುತ್ತಿದ್ದ ಕಾರಿನಡಿ ಸಿಕ್ಕಿಕೊಂಡ ಬೈಕ್ : ಒಂದೂವರೆ ಕಿಮೀ ಬೈಕ್ ಎಳೆದು ತಂದ ಕಾರು ಚಾಲಕ..!

ಚಲಿಸುತ್ತಿದ್ದ ಕಾರಿನಡಿ ಬೈಕ್ ಸಿಕ್ಕಿಕೊಂಡು ಒಂದೂವರೆ ಕಿಮೀ ಬೈಕ್ ಎಳೆದು ತಂದಿದ್ದಾನೆ ಕಾರು ಚಾಲಕ.

ಹೌದು.. ಕುಡಿದ ಮತ್ತಿನಲ್ಲಿ ಬೈಕ್ ಗೆ ಡಿಕ್ಕಿ ಹೊಡೆದಿರುವ ಕಾರು ಚಾಲಕ, ಒಂದೂವರೆ ಕಿಮೀ ವರೆಗೂ ಬೈಕ್ ಎಳೆದು ತಂದಿದ್ದಾನೆ. ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುತ್ತಿದ್ದ ಕಾರು ಚಾಲಕ ಹಾಸನದ ಡೈರಿ ವೃತ್ತದಲ್ಲಿ ಕಾರಿನಡಿ ಸಿಲುಕಿದ ಬೈಕ್ ನ್ನು ಒಂದೂವರೆ ಕಿಲೋ ಮೀಟರ್ ವರೆಗೂ ಎಳೆದು ತಂದಿದೆ.

ಕಾರಿನಡಿ ಬೆಂಕಿ ಕಾಣಿಸಿಕೊಂಡರೂ ವೇಗವಾಗಿ ಚಲಿಸುತ್ತಿದ್ದ ಕಾರು ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದಾರೆ. ಕಾರು ನಿಲ್ಲುಸುವಂತೆ ಸೂಚನೆ ನೀಡಿದರೂ ಕಾರ್ ನಿಲ್ಲಿಸದೇ ಚಾಲಕ ಬೈಕ್ ನನ್ನು ಎಳೆದು ಹೋಗಿದ್ದಾನೆ. ಡೈರಿ ವೃತ್ತದಿಂದ ಎನ್,ಆರ್ ವೃತ್ತದವರೆಗೆ ಪಲ್ಸರ್ ಬೈಕ್ ಎಳೆದು ತಂದ ಕಾರು ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದಾರೆ.

ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಾಸನದ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮೂವರು ಯುವಕರನ್ನ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights