ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಹೊಟೇಲ್, ಹೋಂ ಸ್ಟೇ, ರೆಸಾರ್ಟ್ಗಳು

ಹಳೆ ವರ್ಷದ ನೆನಪುಗಳ ಮೆಲುಕು, ಹೊಸತನಗಳೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳೋ ಹರುಷ.. ಇನ್ನೇನು ಇಯರ್ ಎಂಡ್ ಆಗಿ ನ್ಯೂ ಇಯರ್ ವೆಲ್ ಕಮ್ ಮಾಡ್ಕೋಳ್ಳೋಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಅದಕ್ಕೆ ತಕ್ಕಂತೆ ಮಂಜಿನ ನಗರಿ ಮಡಿಕೇರಿ ಸೇರಿದಂತೆ ಕೊಡಗಿನ ವಿವಿಧೆಡೆ ತಯಾರಿ ನಡೆದಿದೆ. ಇಯರ್ ಎಂಡ್  ಮತ್ತು ನ್ಯೂ ಇಯರ್ ಸೆಲೆಬ್ರೇಷನ್ ಗೆ ಪ್ರವಾಸಿಗರ ಸ್ವರ್ಗ, ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದುಬರ್ತಿದ್ದಾರೆ.

ನಗರದ ಪ್ರವಾಸಿ ತಾಣಗಳೆಲ್ಲಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು ಹೋಂ ಸ್ಟೇಗಳು ಭರ್ತಿಯಾಗಿವೆ. ಕೊಡಗಿನ ಹೊಟೇಲ್, ಹೋಂ ಸ್ಟೇ, ರೆಸಾರ್ಟ್ ಗಳು ನ್ಯೂ ಇಯರ್ ವೆಲ್ ಕಮ್ ಮಾಡ್ಕೊಳ್ಳೋಕೆ ಭರ್ಜರಿಯಾಗಿಯೇ ತಯಾರಾಗಿವೆ. ಬಣ್ಣ ಬಣ್ಣದ ವಿದ್ಯುತ್ ಮಧುವಣಗಿತ್ತಿಯಂತೆ ಅಲಂಕಾರಗೊಂಡಿವೆ.

ಸುಂದರ ಪ್ರಕೃತಿಯ ಮಡಿಲಲ್ಲಿ 2019ಕ್ಕೆ ಬೈ ಬೈ ಹೇಳಿ, 2020 ಅನ್ನು ಮೆಮೋರೇಬ್ಲ ಆಗಿ ವೆಲ್ ಕಮ್ ಮಾಡ್ಕೋಳ್ಳೋಕೆ ಜಿಲ್ಲೆಯ ಜನತೆ ಹಾಗೂ ಪ್ರವಾಸಿಗರು ಕಾತುರತೆಯಿಂದ ಕಾಯ್ತಾ ಇದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights