ಕೇಂದ್ರ ಸರ್ಕಾರದಿಂದ ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಕೊರೊನಾ ಭೀತಿ ಯಿಂದ ಒಂದು ಕಡೆ ಜನ ಬದುಕಿನ ಜಟಕಾಬಂಡಿ ಸಾಗಿಸಲಾಗದೆ ಆತಂಕಕ್ಕೆ ಒಳಗಾಗಿದ್ರೆ ಇನ್ನೊಂದೆಡೆ ಕೇಂದ್ರ ಸರ್ಕಾರ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿದೆ.
ಹೌದು… ವಾಹನ ಸವಾರರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ಕೊಟ್ಟಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಿ, ಪೆಟ್ರೊಲ್ ಗಳ ಬೆಲೆ ಇಳಿಕೆಯಾದ ಕೆಲವು ದಿನಗಳಲ್ಲಿ ಕೇಂದ್ರ ಸರ್ಕಾರ ಅವುಗಳ ಮೇಲಿನ ಅಬಕಾರಿ ಸುಂಕವನ್ನು 2 ರೂಪಾಯಿಯಷ್ಟು ಹೆಚ್ಚಿಸಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಅಂದಾಜು 3 ರೂ.ಏರಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಆದ ಬೆಳವಣಿಗೆಗಳಿಂದ ಕಚ್ಚಾತೈಲದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರ ಲಾಭ ದೇಶಿಯ ಗ್ರಾಹಕರಿಗೆ ವರ್ಗಾವಣೆಯಾಗಲಿದ್ದು, ಒಂದು ವಾರದೊಳಗೆ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗಿತ್ತು.
ಕೊರೊನಾ ವೈರಸ್ ಪರಿಣಾಮ ತೈಲದ ಬೇಡಿಕೆ ಕುಸಿದಿದೆ. ಇದರಿಂದಾಗಿ ತೈಲ ಬೆಲೆಯೂ ಇಳಿಕೆಯಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು 2 ರೂಪಾಯಿಷ್ಟು ಹೆಚ್ಚಿಸಿದ್ದು, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 3 ರೂಪಾಯಿ ಏರಿಕೆಯಾಗಿದೆ.
ಮಾರ್ಚ್ 11 ರಂದು ಪೆಟ್ರೋಲ್ ಬೆಲೆ ಲೀಟರ್ ಗೆ 2.69 ರೂ. ಇಳಿಕೆಯಾಗಿ 70.29 ರೂ. ತಲುಪಿತ್ತು. ಡೀಸೆಲ್ ಬೆಲೆ 2.33 ರೂಪಾಯಿ ಕುಸಿದು 63.01 ರೂ. ತಲುಪಿತ್ತು.

