Carona app : ಕೊರೋನಾ ಪೀಡಿತ ವ್ಯಕ್ತಿ ಪತ್ತೆಹಚ್ಚಲು ಬಂದಿದೆ ಮೊಬೈಲ್ ಆಪ್, detail ಇಲ್ಲಿದೆ..
ಕೊರೋನಾ ಸಂಕಷ್ಟದ ಈ ಸಮಯದಲ್ಲಿ ಕೇಂದ್ರ ಸರಕಾರ ಜನರ ಕೈಗೆ ಕೊರೋನಾ ಕವಚ ನೀಡಿದೆ. ಹೌದು ಇಂಥದ್ದೊಂದು ಆಪ್ ಸಿದ್ಧವಾಗಿದ್ದು ಜನರಿಗೆ ಲಭ್ಯವಿದೆ.

ಸದ್ಯ ಗೂಗಲ್ ಪ್ಲೇನಲ್ಲಿ ಲಭ್ಯವಿರುವ ಈ ಆಪ್ ಒಂದು ವೇಳೆ ಕೊರೋನಾ ಪೀಡಿತ ವ್ಯಕ್ತಿ ನೀವಿರುವಲ್ಲಿ ಪ್ರಯಾಣಿಸಿದರೆ ಅಥವಾ, ನಿಮ್ಮ ಪಕ್ಕ ಸೋಂಕಿತ ತಂಗಿದ್ದರೆ ನಿಮ್ಮನ್ನು ನೋಟಿಫಿಕೇಶನ್ ಮೂಲಕ ಎಚ್ಚರಿಸುತ್ತದೆ.


ಪ್ರತಿ ಗಂಟೆಗೊಮ್ಮ ಈ ಆಪ್ ಮೂಲಕ ನಮ್ಮ ಸುತ್ತಮುತ್ತ ಕೊರೋನಾ ಸೋಂಕಿತರ ಬಗ್ಗೆ ನೀವು ಮಾಹಿತಿ ಪಡೆಯಬಹುದಾಗಿದೆ. ಇದಿಷ್ಟಲ್ಲದೇ ಈವರೆಗೆ ಎಷ್ಟು ಜನರಿಗೆ ತಪಾಸಣೆ ಮಾಡಲಾಗಿದೆ, ಎಷ್ಟು ಸಾವು ಸಂಭವಿಸಿವೆ, ಸೋಂಕು ದೃಢಪಟ್ಟಿರುವ ಪ್ರಕರಣಗಳೆಷ್ಟು, ಸೋಂಕಿರುವ ಪ್ರಕರಣಗಳೆಷ್ಟು ಎಂಬ ಮಾಹಿತಿಯನ್ನು ಸಹ ಈ ಆ್ಯಪ್ ನೀಡುತ್ತದೆ.


ಈ ಆಪ್ ಪ್ರಸ್ತುತ ಬೀಟಾ ಮಾದರಿಯಲ್ಲಿದ್ದು ಇನ್ನೂ ಪರೀಕ್ಷೆಗಳಿಗೆ ಒಳಪಟ್ಟಿದೆ. ಅಧಿಕೃತವಾಗಿ ಇದು ಸಂಪೂರ್ಣವಾಗಿ ಅಭೀವೃದ್ಧ ಹೊಂದಿದ ನಂತರ ಅದನ್ನು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

