ಮನೆ ಬಾಗಿಲಿಗೆ ಆಹಾರ ಧಾನ್ಯ ತಲುಪಿಸಲು ಕೇಜ್ರಿವಾಲ್‌ ಸರ್ಕಾರ ನಿರ್ಧಾರ

ಲಾಕ್ ಡೌನ್‌ನಿಂದಾಗಿ ಎಲ್ಲಾ ರೀತಿಯ ಅಂಗಡಿಗಳು ಮುಚ್ಚಿದ್ದು, ಎಲ್ಲೆಡೆ ಅಗತ್ಯ ವಸ್ತುಗಳು ದೊರೆಯುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಮನೆ ಬಾಗಿಲಿಗೆ ರೇಷನ್ ಡೆಲಿವರಿ ಸೇವೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಲಾಕ್ ಡೌನ್ ಮಧ್ಯೆ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಹತ್ತಿರದ ಪಡಿತರ ಅಂಗಡಿಗಳಿಗೆ ಜನರು ಧಾವಿಸುವುದರ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ ಬರುವ ಒಂದು ಭಾಗದ ಫಲಾನುಭವಿಗಳಿಗೆ ಮನೆ-ಮನೆಗೆ ಪಡಿತರ ವಿತರಣಾ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

ಹಿರಿಯ ನಾಗರಿಕರು, ವಿಧವೆಯರು, ವಿಭಿನ್ನ ಸಾಮರ್ಥ್ಯದ ಮತ್ತು ದುರ್ಬಲ ವರ್ಗದವರಿಗೆ ತಮ್ಮ ಮನೆ ಬಾಗಿಲಿಗೆ ಗೋಧಿ, ಅಕ್ಕಿ ಮತ್ತು ಸಕ್ಕರೆಯಂತಹ ಪಡಿತರವನ್ನು ಕಳುಹಿಸುವ ಯೋಜನೆಯ ಬಗ್ಗೆ ಆಹಾರ ಮತ್ತು ಸರಬರಾಜು ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲಾಕ್ ಡೌನ್ ಮಧ್ಯೆ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಹತ್ತಿರದ ಪಡಿತರ ಅಂಗಡಿಗಳಿಗೆ ಜನರು ಧಾವಿಸುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ, ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ದೇಶದಲ್ಲಿ ಮತ್ತಷ್ಟು ಕೊರೋನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಿಸಿರುವ ಸಮಯದಲ್ಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬರುವ 70 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಏಪ್ರಿಲ್ ತಿಂಗಳಿಗೆ ಸರ್ಕಾರವು ಪಡಿತರದ 1.5 ಪಟ್ಟು ಉಚಿತವಾಗಿ ನೀಡಲು ಪ್ರಾರಂಭಿಸಿದೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.

ಫಲಾನುಭವಿಗಳಿಗೆ ಪಡಿತರವನ್ನು ವಿತರಿಸಲು ದೆಹಲಿ ಸರ್ಕಾರವು ಆಹಾರ ಧಾನ್ಯಗಳನ್ನು ಎಲ್ಲಿಂದ ಸಂಗ್ರಹಿಸಬಹುದು ಎಂದು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಕೇಜ್ರಿವಾಲ್ ನಿನ್ನೆ ಘೋಷಿಸಿದ್ದರು.

ಆಹಾರ ಮತ್ತು ಸರಬರಾಜು ವಿಭಾಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 17 ಲಕ್ಷಕ್ಕೂ ಹೆಚ್ಚು ಕುಟುಂಬಗಳ 71,08,074 ಸದಸ್ಯರು ಆಹಾರ ಭದ್ರತಾ ಕಾಯ್ದೆಯಡಿ ಬರುತ್ತಾರೆ. ರಾಷ್ಟ್ರ ರಾಜಧಾನಿಯಲ್ಲಿ 2011 ನ್ಯಾಯಯುತ ಬೆಲೆ ಅಂಗಡಿಗಳಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights