ವಿಶ್ವದಾದ್ಯಂತ ಕಿಲ್ಲರ್ ಕೊರೊನಾಗೆ 95,699 ಮಂದಿ ಬಲಿ – ಸೋಂಕಿತ ಸಂಖ್ಯೆ 16 ಲಕ್ಷಕ್ಕೇರಿಕೆ!

ಮಹಾಮಾರಿ ಕೊರೊನಾಗೇ ಇಡೀ ಜಗತ್ತೇ ನಲುಗಿ ಹೋಗಿದೆ. ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಇರುವ ರಾಷ್ಟ್ರಗಳೇ ಕೊರೊನಾ ಹೊಡೆತದಿಂದ ಮೇಲೇಳಲು ಸಾಧ್ಯವಾಗುತ್ತಿಲ್ಲ.

ಇಟಲಿ, ಅಮೆರಿಕ, ಸ್ಪೇನ್ ದೇಶಗಳು ಕೊರೊನಾ ಅಟ್ಟಹಾಸದ ಮುಂದೆ ಮಂಡಿ ಊರಿವೆ. ಲಾಕ್ ಡೌನ್ ನಡುವೆಯೂ ದಿನದಿಂದ ದಿನಕ್ಕೆ ಕೊರೊನಾ ಪೀಡತರ ಸಂಖ್ಯೆ ಅಧಿಕವಾಗುತ್ತಿದಿಯೇ ಹೊರತು ಕಡಿಮೆಯಾಗುವ ಲಕ್ಷಣವೇ ಗೋಚರಿಸುತ್ತಿಲ್ಲ. ವಿಶ್ವದಾದ್ಯಂತ  16,00,427 ಜನರಿಗೆ ಕೋವಿಡ್-19  ವೈರಸ್ ಹರಡಿದ್ದು, ಒಟ್ಟಾರೆ 95,699 ಮಂದಿ  ಕಿಲ್ಲರ್ ಕೊರೊನಾದಿಂದ ಪ್ರಾಣಬಿಟ್ಟಿದ್ದು 3,54,464 ಜನ ಗುಣಮುಖರಾಗಿದ್ದಾರೆ.

ಮತ್ತೊಂದು ಆತಂಕಕಾರಿ ವಿಚಾರ ಎಂದರೆ ಜಗತ್ತಿನಲ್ಲಿ ಅತೀ ಹೆಚ್ಚು ಕೊರಾನಾ ಸಂಖಿತರನ್ನು ಹೊಂದಿರುವ ರಾಷ್ಟ್ರ ಇಟಲಿ. 2ನೇ ಸ್ಥಾನದಲ್ಲಿರುವ ಅಮೆರಿಕದಲ್ಲಿ ಕೇವಲ 24 ಗಂಟೆಯಲ್ಲಿ 1783 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಜಾನ್​ ಹಾಪ್ಕಿನ್ಸ್​ ಯುನಿವರ್ಸಿಟಿ ತಿಳಿಸಿದೆ.  ಆ ಮೂಲಕ ಸಾವಿನ ಸಂಖ್ಯೆ 16,478ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಅಮೆರಿಕಾದಲ್ಲಿ ಸಾವು ನೋವು ಅಧಿಕವಾಗಿ ಸಂಭವಿಸುವ ಸಾಧ್ಯತೆ ಅಧಿಕವಾಗಿದೆ.

ಇನ್ನೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 33 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, 6.412 ಜನಕ್ಕೆ ಈ ಸೋಂಕು ತಗುಲಿರುವುದು ದೃಢವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights