‘ಸಿನಿಮಾ ಮಾತ್ರವಲ್ಲ ಮನೆಗೆಲಸ ಕೂಡ ಚೆನ್ನಾಗಿ ಮಾಡ್ತಾರೆ ಎಸ್ ಎಸ್ ರಾಜಮೌಳಿ ಸರ್’
ಬಾಹುಬಲಿ ಯಂತಹ ಸೂಪರ್ ಡೂಪರ್ ಸಿನಿಮಾಗಳನ್ನು ನಿರ್ದೇಶಿಸಿದ ಎಸ್. ಎಸ್ ರಾಜಮೌಳಿ ಮನೆ ಗೆಲಸದಲ್ಲೂ ಸೈ ಎನಿಸಿಕೊಂಡಿದ್ದಾರೆ.
ಹೌದು… ಲಾಕ್ ಡೌನ್ ನಿಂದಾಗಿ ಸಿನಿಮಾಕ್ಕೆ ಕೊಂಚ ಬ್ರೇಕ್ ಹಾಕಿದ ರಾಜಮೌಳಿ ಅವರು ಸದ್ಯ ಮನೆಗೆಲೆಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತಾವು ಮನೆ ಕೆಲಸ ಮಾಡುವ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಅವರ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ಕಸ ಗುಡಿಸುತ್ತಾ, ಕಿಟಕಿ ಕ್ಲೀನ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ರಾಜಮೌಳಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಸಿನಿಮಾ ಮಾತ್ರವಲ್ಲ ಮನೆ ಕೆಲಸವನ್ನೂ ಚೆನ್ನಾಗೆ ಮಾಡ್ತೀರಾ ಸಾರ್ ಎಂದು ನೆಟ್ಟಿಗರು ರಾಜಮೌಳಿ ಟ್ವೀಟ್ಗೆ ಕಮೆಂಟ್ ಮಾಡಿದ್ದಾರೆ.
ಈ ಹಿಂದೆ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿರ್ಮಾಪಕ ಸಂದೀಪ್ ವಂಗಾ ತಾಔಉ ಮನೆಗೆಲಸ ಮಾಡುವ ವಿಡಿಯೋವೊಂದನ್ನ ಶೇರ್ ಮಾಡಿ ಸವಾಲು ಹಾಕಿದ್ದರು.ಮನೆ ಕೆಲಸದವರು ಇಲ್ಲದಿದ್ದಾಗ ಮಹಿಳೆಯರಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿ ರಿಯಲ್ ಮ್ಯಾನ್ ಆಗಿ ಎಂದು ಸಂದೀಪ್ ರಾಜಮೌಳಿ ಅವರನ್ನು ಟ್ಯಾಗ್ ಮಾಡಿ, ಚಾಲೆಂಜ್ ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ರಾಜಮೌಳಿ ತಮ್ಮ ಮನೆ ಕೆಲಸ ಮಾಡಿ ರಿಯಲ್ ಮ್ಯಾನ್ ಆಗಿದ್ದಾರೆ. ಅಷ್ಟೇ ಅಲ್ಲದೇ ಮನೆ ಕೆಲಸ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಜೂನಿಯರ್ ಎನ್ಟಿಆರ್, ರಾಮ್ ಚರಣ್ ಹಾಗೂ ಎಂಎಂ ಕೀರವಾಣಿ ಅವರಿಗೂ ಚಾಲೆಂಜ್ ಪಾಸ್ ಮಾಡಿದ್ದಾರೆ.ಲಾಕ್ಡೌನ್ಗೂ ಮುನ್ನ ಟಾಲಿವುಡ್ನ ಬಹುನಿರೀಕ್ಷಿತ ಸಿನಿಮಾ ‘ಆರ್ಆರ್ಆರ್’ ಚಿತ್ರೀಕರಣದಲ್ಲಿ ರಾಜಮೌಳಿ ಅವರು ಬ್ಯುಸಿಯಾಗಿದ್ದರು. ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಜೊತೆಗೆ ಬಾಲಿವುಡ್ ತಾರೆಯರು ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದು, ಲಾಕ್ಡೌನ್ನಿಂದಾಗಿ ಶೂಟಿಂಗ್ ಕೆಲಸ ಸ್ಥಗಿತಗೊಂಡಿದೆ.
https://twitter.com/ssrajamouli/status/1252161318187970560