ಕೊರೊನ ಫೇಕ್ ಅಲರ್ಟ್: ಜಮಾ ಮಸೀದಿಯಲ್ಲಿ ನಮಾಜ್ ಹಳೆಯ ವಿಡಿಯೋ ಪ್ರಸಾರ ಮಾಡಿದ ನ್ಯೂಸ್ 24

ಏಪ್ರಿಲ್ 17 ಶುಕ್ರವಾರ, ಹಿಂದಿ ಮಾಧ್ಯಮ ಸಂಸ್ಥೆ ನ್ಯೂಸ್ 24 ಫೇಸ್‍ಬುಕ್‍ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ, ಅದರ ಅನುವಾದ – “ಕೊರೊನ ಪೂಜಾ ವಿಧಾನಗಳನ್ನು ಬದಲಾಯಿಸಿದೆ, ದೆಹಲಿಯ ಜಮಾ ಮಸೀದಿಯಲ್ಲಿನ ವಾತಾವರಣ ಏನು?”

ಕರೋನವೈರಸ್ ಹೆದರಿಕೆ ಪ್ರಪಂಚದಾದ್ಯಂತದ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಪ್ರಾರ್ಥನೆ ಸಲ್ಲಿಸುವ ವಿಧಾನಗಳನ್ನು ಬದಲಿಸಲು ಕಾರಣವಾಗಿದೆ ಎಂದು ಆಂಕರ್ ತಿಳಿಸುವುದರೊಂದಿಗೆ ಪ್ರಸಾರ ಪ್ರಾರಂಭವಾಗಿದೆ. “ಜನರಿಗೆ ಮನೆಯಲ್ಲಿ ನಮಾಜ್ ಮಾಡಲು ಸೂಚಿಸಲಾಗುತ್ತಿದೆ. ಆದರೆ ಇಂದು ನಾವು ದೆಹಲಿಯ ಜಮಾ ಮಸೀದಿಯಲ್ಲಿದ್ದೇವೆ ಮತ್ತು ಇಲ್ಲಿ ಶುಕ್ರವಾರ ನಮಾಜ್‍ನ್ನು ಎಂದಿನಂತೆ ಮಾಡಲಾಗುತ್ತಿದೆ” ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಬೀಗ ಹಾಕಿದ ಹೊರತಾಗಿಯೂ ಆರಾಧಕರು ಶುಕ್ರವಾರ ಮಸೀದಿಯಲ್ಲಿ ನೆರೆದಿದ್ದಾರೆ ಎಂಬ ಅಭಿಪ್ರಾಯವನ್ನು ಚಾನೆಲ್ ತನ್ನ ವೀಕ್ಷಕರಿಗೆ ನೀಡಿತು.

ಫ್ಯಾಕ್ಟ್ ಚೆಕ್:

ಇದು ತಿಂಗಳಿಗಿಂತಲೂ ಹಳೆಯದಾದ ನಮಾಜ್ ಎಂದು ಸೂಚಿಸಿದ ನಂತರ ನ್ಯೂಸ್ 24 ವೀಡಿಯೊವನ್ನು ತೆಗೆದಿದೆ. ಈ ಕಾರ್ಯಕ್ರಮ ನಡೆದಿದ್ದು ಮಾರ್ಚ್ 13. ಇದಕ್ಕೆ ಪ್ರತಿಕ್ರಿಯೆಯಾಗಿ ಚಾನೆಲ್, “ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ” ಎಂದು ಹೇಳಿ ಇದು “ಉದ್ದೇಶಪೂರ್ವಕವಲ್ಲ” ಎಂದು ತನ್ನ ವೀಕ್ಷಕರಿಗೆ ತಿಳಿಸಿದೆ.

ಆದರೆ, ಇದು ಇತ್ತೀಚಿನದು ಎಂದು ನಂಬಿ ಹಲವಾರು ಜನರು ವೀಡಿಯೊವನ್ನು ಡೌನ್‍ಲೋಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ತಾನು ತಪ್ಪು ಮಾಡಿದೆ ಎಂದು ಚಾನೆಲ್ ಹೇಳಿಕೊಂಡಿದೆ. ಆದರೆ ಅದು ನಿಜವಾದ ತಪ್ಪೊಪ್ಪಿಗೆಯೇ?

“ಒಮ್ಮೆ ಮಾಡಿದರೆ ಓಕೇ, ಎರಡನೆ ಬಾರಿಗೆ ಕ್ಷಮಿಸೋಣ ಮೂರನೆ ಬಾರಿ ಮತ್ತೆ ಮತ್ತೆ ಅದನ್ನೇ ಮಾಡಿದರೆ. . .  ”

ಒಂದೇ ವಿಡಿಯೋ ಕ್ಲಿಪ್ ಅನ್ನು ಮಾರ್ಚ್ 19 ಮತ್ತು ಏಪ್ರಿಲ್ 1ರಂದು ಪ್ರಸಾರ ಮಾಡಿದೆ. ಕರೋನವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ತಲೆಕೆಡಿಸಿಕೊಳ್ಳದೆ ಆರಾಧಕರು ದೆಹಲಿ ಜಮಾ ಮಸೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ, ತಮ್ಮ ಜೊತೆಗೆ ಇತರರನ್ನೂ ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ನ್ಯೂಸ್ 24 ತನ್ನ ಪ್ರೇಕ್ಷಕರನ್ನು ಅನುಕೂಲಕರವಾಗಿ ಹಿಂದಿನ ವಿಡಿಯೋ ತೋರಿಸಿಕೊಂಡು ದಾರಿ ತಪ್ಪಿಸಿದೆ.

ಅಪ್‍ಲೋಡ್‍ನ ಆರಂಭಿಕ ದಿನಾಂಕ – ಮಾರ್ಚ್ 13 – ಮುಖ್ಯವಾಹಿನಿಗಳ ಮಾಧ್ಯಮ ವರದಿಗಳಲ್ಲಿ ಕೊರೊನಾವೈರಸ್ ಮುಖ್ಯ ಹಂತಕ್ಕೆ ಬಂದಿರಲಿಲ್ಲ. ವಾಸ್ತವವಾಗಿ, ಇದು ಆರೋಗ್ಯ ತುರ್ತು ಪರಿಸ್ಥಿತಿ ಅಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿತ್ತು. ಆದಾಗ್ಯೂ, ಮಾರ್ಚ್ 19ರ ಹೊತ್ತಿಗೆ, ಚಾನೆಲ್ ಮೊದಲ ಬಾರಿಗೆ ಪ್ರಸಾರವನ್ನು ಮರುಲೋಡ್ ಮಾಡಿದಾಗ, ದೆಹಲಿ ಸರ್ಕಾರವು 50ಕ್ಕೂ ಹೆಚ್ಚು ಜನರ ಎಲ್ಲಾ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಸಭೆ, ಕೂಟಗಳನ್ನು ನಿಷೇಧಿಸಿತ್ತು. ಏಪ್ರಿಲ್ 1ರಂದು, ವೀಡಿಯೊವನ್ನು ಎರಡನೇ ಬಾರಿಗೆ ಮರುಹಂಚಿಕೊಂಡಾಗ, ಕರೋನವೈರಸ್‍ನ್ನು ನಿಭಾಯಿಸಲು ಕೇಂದ್ರವು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿತ್ತು. ಏಪ್ರಿಲ್ 17ರಂದು, ಚಾನೆಲ್ ಅದನ್ನು ಮತ್ತೊಮ್ಮೆ ಅಪ್‍ಲೋಡ್ ಮಾಡಿದಾಗ (ನಂತರ ಅದನ್ನು ಕೆಳಗಿಳಿಸಿತು), ನಿಜಾಮುದ್ದೀನ್ ಮರ್ಕಜ್‍ನ್ನು ಹಾಟ್‍ಸ್ಪಾಟ್ ಎಂದು ಗುರುತಿಸಿದ ನಂತರ ಕರೋನವೈರಸ್ ಸುತ್ತಲಿನ ಚರ್ಚೆ ಮುಸ್ಲಿಂ ವಿರೋಧಿ ಆಕಾರವನ್ನು ಪಡೆದುಕೊಂಡಿತ್ತು. ನ್ಯೂಸ್ 24ರ ಪ್ರಸಾರವು 6 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯ ಸಂಖ್ಯೆಯನ್ನು ಹೊಂದಿದೆ.

ನ್ಯೂಸ್ 24 ಏಪ್ರಿಲ್ 17ರ ‘ತಪ್ಪು’ (ಕ್ಷಮೆಯಾಚನೆ) ಕುರಿತು ಸ್ಪಷ್ಟೀಕರಣವನ್ನು ನೀಡಿದೆ. ಆದರೆ ಹಿಂದಿನ ಎರಡು ಸಂದರ್ಭಗಳಲ್ಲಿ ವೀಡಿಯೊವನ್ನು ಮರುಲೋಡ್ ಮಾಡಲು ಅದರ ಸಮರ್ಥನೆ ಏನು?

  • (ಕೃಪೆ) : ಆಲ್ಟ್ ನ್ಯೂಸ್
  • (ಅನುವಾದ) : ದಿವ್ಯ ಶರ್ಮ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights