ಕೊರೊನಾ ಸಂದರ್ಭದಲ್ಲಿ ನಂದಿನಿ ಹಾಲು ಸುರಕ್ಷಿತವಾಗಿದೆಯೇ? ಅಧ್ಯಕ್ಷರು ಹೇಳಿದ್ದೇನು?

ರಾಜ್ಯ ಸರ್ಕಾರವು ಸ್ಲಂ ನಿವಾಸಿಗಳಿಗೆ ಉಚಿತವಾಗಿ ಹಾಲು ನೀಡುವ ಯೋಜನೆ ಜಾರಿಗೆ ತಂದ ದಿನದಿಂದ ಈವರೆಗೂ ಪ್ರತಿ ದಿನ 30 ಸಾವಿರ ಲೀ ಹಾಲನ್ನು ನೀಡಲಾಗಿದೆ ಎಂದು ಮೈಮೂಲ್‌ ಅಧ್ಯಕ್ಷ ಸಿದ್ದೇಗೌಡರು ತಿಳಿಸಿದ್ದಾರೆ.

ಮಾಹಾಮಾರಿ ಕೊರೊನಾ ಎಲ್ಲೆಡೆ ಆಕ್ರಮಿಸುತ್ತಿದೆ. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ 30ಸಾವಿರ ಲೀಟರ್ ಹಾಲನ್ನು ಸ್ಲಂಲ್ಲಿರುವ ಗ್ರಾಹಕರಿಗೆ ಉಚಿತವಾಗಿ ನೀಡುವಂತೆ ಆದೇಶಿಸಿತ್ತು. ಕಾರ್ಪೋರೇಶನ್ ಅಧಿಕಾರಿಗಳು ಗುರುತಿಸಿಕೊಟ್ಟ ರೀತಿಯಲ್ಲಿ ಮೈಮುಲ್ ಅಧಿಕಾರಿಗಳು, ಆಡಳಿತ ಮಂಡಳಿ ಹಾಲನ್ನು ಬಡವರಿಗೆ ಸರಬರಾಜು ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೈಮುಲ್‌ ಹಾಲಿನ ಡೈರಿಗೆ ಬರುವ ವಾಹನ, ಸಿಬ್ಬಂದಿ, ಟ್ಯಾಂಕರ್ ಗಳನ್ನು 3 ಬಾರಿ ರಾಸಾಯನಿಕ ಸ್ಪ್ರೇ ಮಾಡಲಾಗುತ್ತದೆ. ನಮ್ಮ ಅಧಿಕಾರಿಗಳು, ಪೇಡ, ಹಾಲು, ಮೊಸರು ಪ್ಯಾಕೇಟ್ ತಯಾರಿಸುವ ಕಾರ್ಮಿಕರು ಅವರಿಗೆಲ್ಲ ಮಾಸ್ಕ್ ಹಾಕಿ ಅವರೆಲ್ಲ ಎಲ್ಲೆಲ್ಲಿ ಕೆಲಸ ಮಾಡುತ್ತಾರೆ. ಅಲ್ಲಲ್ಲೇ ಕೆಲಸ ಮಾಡಬೇಕು. ಎಲ್ಲಿಯೂ ಓಡಾಡಬಾರದು ಎಂದು ಸೂಚಿಸಲಾಗಿದೆ. ಹಾಲಿನ ಸೊಸೈಟಿಗಳಲ್ಲಿಯೂ ಸಹ ರಾಸಾಯನಿಕ ಸಿಂಪಡಣೆ ಮಾಡಬೇಕು ಎಂದು ತಿಳಿಸಿದ್ದೆವು ಎಂದರು.

ಮೈಮುಲ್‌ ನಲ್ಲಿ ಕಾರ್ಯ ನಿರ್ವಹಿಸುವ ಎಲ್ಲರ ಕಾರ್ಯಕ್ಷಮತೆ ನಮ್ಮ ಸಿಬ್ಬಂದಿಗೆ ಏಳೂವರೆ ಸಾವಿರ ರೂ.ಉಚಿತವಾಗಿ ನೀಡಲು ಬೋರ್ಡ್ ನಲ್ಲಿ ತೀರ್ಮಾನ ಮಾಡಲಾಗಿದೆ. ಯಾವುದೇ ಕಳಂಕ ಬರದಂತೆ ಕೆಲಸ ಮಾಡಿದ್ದಕ್ಕೆ ಗೌರವ ಪೂರ್ವಕವಾಗಿ ನೀಡಲು ನಿರ್ಧರಿಸಿದ್ದೇವೆ ಎಂದರು.

ಇನ್ನು ನಂದಿನಿ ಹಾಲಿಗೆ ಭಾರೀ ಬೇಡಿಕೆ ಇದೆ. ಹೋಟೆಲ್ ಗಳು ಈಗ ಮುಚ್ಚಿವೆ. ಹಾಗಾಗಿ ಸಿಬ್ಬಂದಿಗೆ ನಮ್ಮ ಕ್ಯಾಂಟೀನ್ ನಲ್ಲಿಯೇ ಅಲ್ಲದೇ ಬರುವ ಎಲ್ಲ ವಾಹನಗಳ ಚಾಲಕರಿಗೆ ಉಚಿತ ಊಟ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಹೊರಗಡೆ ಹೋಗುವುದಿದ್ದಲ್ಲಿ ಪಾರ್ಸೆಲ್ ಕೂಡ ನೀಡುತ್ತಿದ್ದೇವೆ. ಪ್ರತಿನಿತ್ಯ 5 ಲಕ್ಷದ 50 ಸಾವಿರ ಒಳಗೆ ಉತ್ಪಾದಕರಿಂದ ಹಾಲು ಬರುತ್ತಿದೆ. 2 ಲಕ್ಷದ 10 ಸಾವಿರ ಹೋಗುತ್ತಿದೆ. 45ರಿಂದ 50ಸಾವಿರ ಮೊಸರು ಹೋಗುತ್ತಿದೆ. ಉಳಿದಿದ್ದೆಲ್ಲ ಬೆಣ್ಣೆ ತೆಗೆದು ಪೌಡರ್ ಗೆ ಕಳುಹಿಸಲಾಗುತ್ತಿದೆ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights