ಜನರು ಬೀದಿಯಲ್ಲಿರುವಾಗ ‘ಮೋದಿ’ಯವರ ಸ್ವಾವಲಂಭನೆಯ ಭಾಷಣ
ಮೋದಿಯವರು ನಿನ್ನೆ ರಾತ್ರಿ 08 ಗಂಟೆಗೆ ದೇಶವನ್ನುದ್ದೇಶಿಸಿದ ಭಾಷಣದಲ್ಲಿ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಅಲ್ಲದೆ, ಭಾರತವು “ಸ್ವಾವಲಂಬಿಗಳಾಗಿ” ಇರಬೇಕಾಗುತ್ತದೆ ಎಂದು ಮೋದಿ ಒತ್ತಿಹೇಳಿದರು. ಕೊರೊನಾ ಸೋಂಕಿನ ಹರಡುವಿಕೆಯನ್ನು ನಿಧಾನಗೊಳಿಸಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಾಡಿದ ನಂತರ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು ದೇಶಕ್ಕೆ ಸಹಾಯ ಮಾಡಲು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಕೂಡ ಘೋಷಿಸಿದ್ದಾರೆ. ಆದರೆ, ಮೋದಿಯವರು ಸ್ವಾವಲಂಬನೆಯ ಭಾಷಣವನ್ನು ಮಾಡುವ ಸಂದರ್ಭದಲ್ಲಿಯೂ ಲಕ್ಷಾಂತರ ಕಾರ್ಮಿಕರು, ವಲಸಿಗರು ದೇಶದ ಹೆದ್ದಾರಿಗಳಲ್ಲಿ, ರಸ್ತೆಗಳಲ್ಲಿ ಹಸಿದು, ದಣಿದು ನಡೆಯುತ್ತಿದ್ದರು.
ಮೋದಿಯವರ ಸ್ವಾವಲಂಭಿ ಭಾಷಣ ಮತ್ತು 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಪರ-ವಿರೋಧ ಸಮರದಲ್ಲಿ ತೊಡಗಿದ್ದಾರೆ.
ನಿನ್ನೆ ರಾತ್ರಿ ಪ್ರಧಾನಿ ಪ್ಯಾಕೇಜ್ ಅನ್ನು ಘೋಷಿಸುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ ಪರವಿರೋಧದ ಸಮರಗಳು ಪ್ರಾರಂಭವಾಗಿದೆ. ವಿರೋಧಿಸುವವರು ಪ್ರಧಾನಿ ಇದುವರೆಗೂ ಘೋಷಿಸಿದ ಘೋಷಣೆಗಳೇ ಈಡೇರಿಲ್ಲ, ಇದು ಕೂಡಾ ಹಿಂದಿನಂತೆಯೆ ಘೋಷಣೆಯಾಗಿಯೇ ಉಳಿಯಲಿದೆ ಎಂದು ಹೇಳಿದರೆ, ಪರವಿರುವವರು ಪ್ರಧಾನಿ ಮೋದಿಯವರಿಗೆ ಅಭಿನಂಧನೆ ಸಲ್ಲಿಸಿ, ಸ್ವದೇಶಿ ವಸ್ತುಗಳನ್ನು ಬಳಸುವಂತೆ ಅಭಿಯಾನ ನಡೆಸುತ್ತಿದ್ದಾರೆ.
https://twitter.com/gaurav5780/status/1260467788088475649
ಗೌರವ್ ಕಪೂರ್ ಎಂಬವರು ಕಾರ್ಟೂನೊಂದನ್ನು ಹಾಕಿ ಮೋದಿ ಘೋಷಿಸಿದ ಪ್ಯಾಕೇಜ್ ಕೇವಲ ಒಂದು ಹಾಸ್ಯ ಎಂಬಂತೆ ತೋರಿಸಿದ್ದಾರೆ.
Nimmy : Shall I add one more zero to the to 20 lakh crore ji ?
Modi : It's just an announcement. Add as many you want. pic.twitter.com/wlOG8sLi3M
— Savukku_Shankar (@savukku) May 12, 2020
https://twitter.com/GautamTrivedi_/status/1260315397997371395
ಬಿಪುಲ್ ಎನ್ನುವವರು ಕಾಂಗ್ರೇಸಿನ ಉದಿತ್ ರಾಜ್ ಅವರ ದ್ವಂದ್ವತೆಯ ಬಗ್ಗೆ ಗಮನ ಸೆಳೆದಿದ್ದು, ಈ ಹಿಂದೆ ಉದಿತ್ ಅವರು ಈ ಹಿಂದೆ ಹಾಗೂ ಈಗಿನ ಹೇಳಿಕೆಯನ್ನು ಹಾಕಿ, ವಿರೋಧಿಗಳು ಹೀಗಿರುತ್ತಾರೆ ಎಂದು ಹೇಳಿದ್ದಾರೆ.
Haters be like :-#AatmanirbharBharat #20lakhcrores #CKMKB pic.twitter.com/zHU7bEb563
— बिपुल पाण्डेय (@Bipul8987) May 13, 2020
ಪುಷ್ಪೇಂದ್ರ ಎಂಬವರು, ಇತಿಹಾಸದಲ್ಲೇ ಅತೀ ದೊಡ್ಡ ಪ್ಯಾಕೇಜನ್ನು ನರೇಂದ್ರ ಮೋದಿ ಘೋಷಿಸಿದ್ದಾರೆ, ಇದು ಭಾರತದ ಜಿಡಿಪಿಯ 10% ಆಗಿದೆ. ಮೋದಿ ಉತ್ತಮ ಪ್ರಧಾನ ಮಂತ್ರಿ ಎಂದು ನಾವು ಒಪ್ಪಿಕೊಳ್ಳುತ್ತೇವೆ ಬರೆದುಕೊಂಡಿದ್ದಾರೆ.
https://twitter.com/iArmySupporter/status/1260255887202988032

