Lock down : ಯಾವ ರಾಜ್ಯದಿಂದ ರಾಜ್ಯಕ್ಕೆ ಬರಬಹುದು, ಯಾರು ಇಲ್ಲ- details ಇಲ್ಲಿದೆ..

ಮಹಾರಾಷ್ಟ್ರ, ಗಜರಾತ್, ತಮಿಳುನಾಡು, ಕೇರಳಿಗರಿಗೆ ರಾಜ್ಯದಲ್ಲಿ ’ನೋ ಎಂಟ್ರಿ’ ಸೊಂಕು ಹೆಚ್ಚಿರುವ ರಾಜ್ಯಗಳ ಜನರ ಪ್ರವೇಶ ನಿರ್ಬಂಧಿಸಿದ ರಾಜ್ಯ ಸರಕಾರ, ಆದರೆ ಕೊರೋನದಿಂದ ಮುಕ್ತವಾಗುವತ್ತ ಹೆಜ್ಜೆ ಇಟ್ಟಿರುವ  ಕೇರಳ ದಿಂದ ಬರುವವರನ್ನು ಯಾಕೆ ನಿರ್ಬಂಧಿಸಿದ್ದಾರೆ ಎನ್ನುವುದು ಆಶ್ಚರ್ಯ ಮುಡಿಸುತ್ತಿದೆ..

ಲಾಕ್‌ಡೌನ್ ನಿಯಮಗಳನ್ನು ಕೇಂದ್ರದ ಮಾರ್ಗಸೂಚಿಯಂತೆ ಸಡಿಲಿಸಿರುವ ಕರ್ನಾಟಕವು ನಾಲ್ಕು ರಾಜ್ಯಗಳ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಅಲ್ಲಿರುವ ಕರ್ನಾಟಕ್ಕೆ ಬರುವವರು ಗೊಂದಲದಲ್ಲಿದ್ದಾರೆ.. ಮಹಾರಾಷ್ಟ್ರ, ಗಜರಾತ್, ತಮಿಳುನಾಡು, ಕೇರಳಿಗರಿಗೆ ರಾಝ್ಯಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಕೇರಳ ಕೊರೋನದಿಂದ ಮುಕ್ತವಾಗುವತ್ತ ಹೆಜ್ಜೆ ಇಟ್ಟಿದೆ. ಆದರೆ ಉಳಿದ ಮೂರೂ ರಾಜ್ಯಗಳು ಈಗಲೂ ಕೊರೋನಾ ಕೆಂದ್ರಗಳಾಗಿವೆ.

ಮಂಗಳವಾರದಿಂದ ಜಾರಿಗೆ ಬರುವಂತೆ ಕರ್ನಾಟಕ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಿದೆ. ಬಸ್‌ಗಳ ಸಂಚಾರಕ್ಕೂ ಅನುವು ಮಾಡಿಕೊಟ್ಟಿದೆ. ಅಂತಾರಾಜ್ಯ ಸಂಚಾರಕ್ಕೂ ಸರಕಾರ ಸನುಮತಿ ನೀಡಿದ್ದು ಈ ನಾಲ್ಕು ರಾಜ್ಯಗಳಿಗೆ ಮಾತ್ರ ತನ್ನ ಗಡಿ ಮುಚ್ಚಿಕೊಂಡಿದೆ.

ಹೊರ ರಾಜ್ಯಗಳಿಂದ ಬರೋರಿಗೆ ಹಂತ ಹಂತವಾಗಿ ಬಸ್ ವ್ಯವಸ್ಥೆ ಮಾಡುವುದರ ಜೊತೆಗೆ ಅವರಿಗೆ ಸಾಮೂಹಿಕ ಕ್ವಾರಂಟೈನ್ ಮಾಡಲು ತೀರ್ಮಾನ ಮಾಡಲಾಗಿದೆ.ಬೇರೆ ರಾಜ್ಯಗಳಿಂದ ಜನ ಬರೋದಕ್ಕೆ ಅವಕಾಶ ನೀಡಲಾಗಿದೆಯಾದರೂ ಅನಿವಾರ್ಯ ಕಾರಣಗಳಿದ್ರೆ ಮಾತ್ರ ಅವಕಾಶ ಕಲ್ಪಸಲು ನಿರ್ಧರಿಸಿದೆ.

ಕಳೆದ ಒಂದೂವರೆ ತಿಂಗಳಿನಿಂದ ಓಡಾಟವಿಲ್ಲದೇ ಸ್ಥಗಿತಗೊಂಡಿದ್ದ ಬಸ್, ಆಟೊ, ಟ್ಯಾಕ್ಸಿಗಳು ಮಂಗಳವಾರ ರಸ್ತೆಗಿಳಿಯಲಿವೆ. ಕೇಂದ್ರ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ  ಬಸ್ಸುಗಳನ್ನು ಒಡಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಇದೇ ರೀತಿ ಕ್ಷೌರದ ಅಂಗಡಿಗಳು ಸಹ ನಾಳೆಯಿಂದ ಬಾಗಿಲು ತೆರೆದಿವೆ..

ರೆಡ್ ಜೋನ್ ಹಾಗೂ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ.. ಬಸ್ ಗಳಲ್ಲಿ ಕೇವಲ ೩೦ ಪ್ರಯಾಣಿಕರಿಗೆ ಮಾತ್ರ ಅವಕಾಶ. ಖಾಸಗಿ ಬಸ್ ಸಂಚಾರಕ್ಕೆ ಅನುಮತಿ. ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ನಿಯಮ ವಿಧಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights