ಮನೆಯಲ್ಲಿಯೇ ಈದ್‌ ಆಚರಣೆ; ವಲಸೆ ಕಾರ್ಮಿಕರಿಗೂ ಹಬ್ಬದ ಊಟ

ಕರಾವಳಿ ಕರ್ನಾಟಕ ಭಾಗದಲ್ಲಿ ಇಂದು ಈದ್ ಮುಬಾರಕ್ ಹಬ್ಬದ ಸಂಭ್ರಮ ನಡೆಯುತ್ತಿದೆ. ಆದರೆ, ಇಂದು ಭಾನುವಾರದ ಸಂಪೂರ್ಣ ಲಾಕ್‌ಡೌನ್‌ ಇರುವುದರಿಂದಾಗಿ ಮುಸ್ಲೀಮರೆಲ್ಲರೂ ತಮ್ಮ ಮನೆಗಳಲ್ಲಿಯೇ ಹಬ್ಬವನ್ನು ಆಚರಿಸುತ್ತಿದ್ದು, ಹಬ್ಬದ ವಿಶೇಷ ಪ್ರಾರ್ಥನೆಯನ್ನು ಮನೆಯಲ್ಲೇ ಕುಟುಂಬ ವರ್ಗದ ಜೊತೆಗೆ ನಿರ್ವಹಿಸಿದರು.

ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಈದ್‌ ಹಬ್ಬವನ್ನುಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿ ಸೋಮವಾರ ಈದ್-ಉಲ್‌-ಫಿತರ್ ಹಬ್ಬವನ್ನು ಮುಸ್ಲೀಂ ಸಮುದಾಯ ಆಚರಿಸಲಿದೆ.

ರಂಜಾನ್‌ ತಿಂಗಳಲ್ಲಿ 30 ದಿನಗಳ ಕಾಲ ಮುಸ್ಲಿಮರು ಉಪವಾಸ ವೃತವನ್ನು ಕೈಗೊಳ್ಳುತ್ತಾರೆ. ಚಂದ್ರ ದರ್ಶನದ ಬಳಿಕ ಈದ್-ಉಲ್‌-ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆ ದಿನ ಬಡವರಿಗೆ ದಾನವನ್ನು ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಈದ್ ಹಬ್ಬದ ದಿನ ಬೆಳಗ್ಗೆ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಇರುತ್ತದೆ. ಆದರೆ ಈ ಬಾರಿ ಲಾಕ್‌ಡೌನ್ ಪರಿಣಾಮ ಮನೆಯಲ್ಲೇ ಹಬ್ಬ ಆಚರಣೆಯನ್ನು ಮುಸ್ಲಿಮರು ಮಾಡಿದರು. ಈ ಹಬ್ಬದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ ತರಕಾರಿ, ಮಾಂಸ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ವಲಸೆ ಕಾರ್ಮಿಕರಿಗೆ ಈದ್ ಹಬ್ಬದ ಊಟ

ಕೊರೊನಾ ಲಾಕ್‌ಡೌನ್ ಪರಿಣಾಮ ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದು, ತಮ್ಮೂರುಗಳಿಗೆ ನಡೆದು ಹೋಗುತ್ತಿದ್ದಾರೆ. ಮತ್ತೂ ಕೆಲವರು ಎಲ್ಲಿಯೂ ಹೋಗಲಾರದೆ ಅಸಹಾಯಕರಾಗಿದ್ದಾರೆ. ಅಂತಹ ವಲಸೆ ಕಾರ್ಮಿಕರಿಗೆ ಹಬ್ಬದ ಊಟ ನೀಡುವ ಮೂಲಕ ಮಂಗಳೂರಿನಲ್ಲಿ ಈದ್ ಆಚರಿಸಲಾಯಿತು.

ಮಂಗಳೂರಿನ ಕೈಗಾರಿಕ ವಲಯವಾದ ಜೋಕಟ್ಟೆ ಸುತ್ತುಮುತ್ತಲಿನ ಪ್ರದೇಶದಲ್ಲಿ ಸುಮಾರು 700 ಕ್ಕೂ ಅಧಿಕ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟಲ್ಲಿದ್ದಾರೆ. ಇವರಿಗೆ ಈದ್ ಹಬ್ಬದ ಹಿನ್ನೆಲೆಯಲ್ಲಿ ಡಿವೈಎಫ್‌ಐ ಹಾಗೂ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಹಬ್ಬದೂಟ ನೀಡುವ ಮೂಲಕ ವಿಶಿಷ್ಟವಾಗಿ ಈದ್‌-ಉಲ್‌-ಫಿತರ್ ಆಚರಣೆ ಮಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights