ನೋಯ್ಡಾದ ಗರ್ಭಿಣಿ ಮಹಿಳೆ ಸಾವು ಪ್ರಕರಣ : ಚಿಕಿತ್ಸೆ ನೀಡದ ಏಳು ಆಸ್ಪತ್ರೆಗಳ ವಿರುದ್ಧ ಕ್ರಮ….!

ನೋಯ್ಡಾದ ಗರ್ಭಿಣಿ ಮಹಿಳೆಯೊಬ್ಬಳು 12 ಗಂಟೆಗಳಲ್ಲಿ 8 ಆಸ್ಪತ್ರೆಗಳನ್ನು ಸುತ್ತಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸಾವಿಗೆ ಏಳು ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಗಾಜಿಯಾಬಾದ್‌ನ ಖೋರಾ ನಿವಾಸಿ ಪತಿ ವಿಜೇಂದರ್ ಜೊತೆಯಲ್ಲಿ, ಎಂಟು ತಿಂಗಳ ಗರ್ಭಿಣಿ ನೀಲಂ (30) ರಕ್ತದೊತ್ತಡ, ಉಸಿರಾಟದ ತೊಂದರೆಯಿಂದ ಸುಮಾರು 12 ಗಂಟೆಗಳ ಅವಧಿಯಲ್ಲಿ ನೋಯ್ಡಾದಾದ್ಯಂತ ಎಂಟು ಆಸ್ಪತ್ರೆಗಳಲ್ಲಿ ಪ್ರವೇಶ ಪಡೆಯಲು ವಿಫಲವಾದ ಕಾರಣ ಕಳೆದ ಶುಕ್ರವಾರ ಸಾವನ್ನಪ್ಪಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಯ್ಡಾದ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ನರ್ಸ್ ಮತ್ತು ವಾರ್ಡ್ ಸಿಬ್ಬಂದಿಯವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ನೋಯ್ಡಾದಲ್ಲಿನ ಇಎಸ್ಐಸಿ ಮತ್ತು ಗ್ರೇಟರ್ ನೋಯ್ಡಾದ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಮತ್ತು ಖಾಸಗಿ ಆಸ್ಪತ್ರೆಗಳಾದ ಶಿವಾಲಿಕ್, ಶಾರದಾ, ಫೋರ್ಟಿಸ್ ಮತ್ತು ಮ್ಯಾಕ್ಸ್ (ಗಾಜಿಯಾಬಾದ್ನಲ್ಲಿ) – ರಾಜ್ಯ ಸರ್ಕಾರಿ ಆಸ್ಪತ್ರೆಗಳ ಎರಡು ಭಾಗಗಳಲ್ಲಿ ಅವವ್ಯವಸ್ಥೆ ಕಂಡುಬಂದಿದ್ದು, ಈ ಆಸ್ಪತ್ರೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಆರೈಕೆಯ ಅಲಭ್ಯತೆಯ ವಿಷಯವನ್ನು ಹೊರತಂದ ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಈ ಘಟನೆಗೆ ರಾಜಕೀಯ ಬಣ್ಣ ಹಚ್ಚಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ದೂಷಿಸಲು ರಾಜಕಾರಣಿಗಳು ಮುಂದಾಗಿದ್ದರು.

ಗರ್ಭಿಣಿ ಮಹಿಳೆಗೆ ವೈದ್ಯಕೀಯ ನಿರಾಸಕ್ತಿ ಇದೆ ಎಂಬ ಮಾಧ್ಯಮ ವರದಿಗಳ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೋಮವಾರ ಯುಪಿ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಬಳಿಕ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights