ಶಾಸಕನ ಮಗನನ್ನು ಬಂಧಿಸಿದ್ದ ಮಹಿಳಾ ಪೊಲೀಸ್‌ ರಾಜೀನಾಮೆ!

ಗುಜರಾತ್‌ನಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದ್ದ ಸಚಿವರ ಮಗನನ್ನು ಬಂಧಿಸಿ ಬೆವರಿಳಿಸಿದ್ದ ಗುಜರಾತ್ ಮಹಿಳಾ ಪೊಲೀಸ್ ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದಾರೆ.

ಗುಜರಾತ್‌ನ ಆರೋಗ್ಯ ಸಚಿವ ಕುಮಾರ್ ಕನಾನಿ ಅವರ ಪುತ್ರ ಪ್ರಕಾಶ್‌ ಕನಾನಿ ಮತ್ತು ಆತನ ಇಬ್ಬರು ಸ್ನೇಹಿತರು ಲಾಕ್‌ಡೌನ್‌ ನಿಯಮವನ್ನು ಉಲ್ಲಂಘಿಸಿ ಜಾಲಿ ಟ್ರಿಪ್‌ ಹೋಗಿದ್ದ ಸಂದರ್ಭದಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸೂರತ್‌ನ ಮಹಿಳಾ ಪೊಲೀಸ್‌ ಪೇದೆ ಸುನೀತಾ ಯಾದವ್‌ ಅವರನ್ನು ಬಂಧಿಸಿದ್ದರು.

ಸಚಿವರ ಮಗ ಎಂಬ ಕಾರಣಕ್ಕೆ ಪೊಲೀಸ್‌ ಪೇದೆಗೆ ಬೆದರಿಕೆ ಹಾಕಿದ್ದ ಪ್ರಕಾಶ್‌, “ನಾನು ಎಂಎಲ್‌ಎ ಮಗ, ನಾನು ಮನಸ್ಸು ಮಾಡಿದರೆ, ನಿನ್ನನ್ನು ಇದೇ ಜಾಗದಲ್ಲಿ 365 ದಿನವೂ ನಿಲ್ಲುವಂತೆ ಮಾಡಬಲ್ಲೆ’ ಎಂದು ಅವಾಜ್‌ ಹಾಕಿದ್ದ.

ಅತನ ಹಾರಾಟಕ್ಕೆ ತಿರುಗೇಟು ನೀಡಿದ್ದ ಸುನೀತಾ ಯಾದವ್‌, “365 ದಿನವೂ ನಾನು ಇಲ್ಲಿ ನಿಲ್ಲುವಂತೆ ಮಾಡಲು, ನಾನು ನಿಮ್ಮಪ್ಪನ ಸೇವಕಿಯಲ್ಲ” ಎಂದು ಹೇಳಿದ್ದರು.

ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಸಚಿವರ ಮಗನನ್ನು ಬಂಧಿಸಿದ್ದ ಸುನಿತಾ ಯಾದವ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಇದಾದ ಕೆಲವೇ ದಿನಗಳಲ್ಲಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ, ಆದರೆ ನನ್ನ ಹಿರಿಯ ಅಧಿಕಾರಿಗಳಿಂದ ನನಗೆ ಬೆಂಬಲ ಸಿಗಲಿಲ್ಲ. ಈ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುನಿತಾ ಯಾದವ್ ತಿಳಿಸಿದ್ದಾರೆ.

ಸುನಿತಾ ಯಾದವ್ ರಾಜೀನಾಮೆ ನೀಡಿಲ್ಲ. ಈ ಹಂತದಲ್ಲಿ ಆಕೆ ರಾಜೀನಾಮೆ ನೀಡುವುದು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಸೂರತ್ ಪೊಲೀಸ್ ಆಯುಕ್ತರಾದ ಆರ್ ಬಿ ಬ್ರಹ್ಮಭಟ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights