ಕೊರೊನಾ ತಡೆಗೆ ಕಠಿಣ ನಿಯಮ ಜಾರಿ : ಮಾಸ್ಕ್ ಹಾಕದಿದ್ರೆ ದುಬಾರಿ ದಂಡ!

ರಾಜ್ಯದಲ್ಲಿ ಮತ್ತೆ ಕೊರೊನಾ ರುದ್ರನರ್ತನ ಹೆಚ್ಚಾಹುತ್ತಿದ್ದು ಜನ ಮಾರ್ಕೇಟ್, ಬಸ್, ರೈಲು ಸೇರಿದಂತೆ ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರವನ್ನು ಮರೆತಿದ್ದಾರೆ. ಹೀಗಾಗಿ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.

ಹೌದು… ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಸ್ವಲ್ಪ ಮೈಮರೆತ್ರು ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಸರ್ಕಾರ ಕೊರೊನಾ ಖಡಕ್ ರೂಲ್ಸ್ ಜಾರಿಗೆ ತಂದಿದೆ. ನಗರದಲ್ಲಿ ಕೊರೊನಾ ನಿಯಮಗಳನ್ನು ಪಾಲಿಸದೇ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜನ ಮಾಸ್ಕ್ ಕಡ್ಡಾಯವಾಗಿ ಧರಿಸಲು ಸರ್ಕಾರ ಆದೇಶಿಸಿದೆ. ಒಂದು ವೇಳೆ ಮಾಸ್ಕ್ ಹಾಕದೇ ಹೋದಲ್ಲಿ ತಲಾ 250 ರೂಪಾಯಿ ದಂಡ , ನಗರ ಹೊರತುಪಡಿಸಿ ಇತರೆಡೆ 100 ದಂಡ ವಿಧಿಸಿದೆ.

ಜೊತೆಗೆ ಜನ ಸಂದಣಿ ಇರುವ ಪಾರ್ಕ್, ಸಭೆ, ಸಮಾರಂಭ ಸ್ಥಳಗಳಲ್ಲಿ ಜನ ಸೇರುವುದನ್ನ ಮಿತಿಗೊಳಿಸಲಾಗಿದೆ. ಒಳಾಂಗಣ ಮದುವೆ ಸಮಾರಂಭಕ್ಕೆ 200 ಜನ ಹಾಗೂ ಹೊರಾಂಗಣಕ್ಕೆ 500 ಜನರಿಗೆ ಮಾತ್ರ ಭಾಗವಹಿಸಲು ಸೂಚಿಸಲಾಗಿದೆ. ಒಳಾಂಗಣ ಪಾರ್ಟಿಗಳಿಗೆ 50 ಜನ ಹಾಗೂ ಹೊರಾಂಗಣಕ್ಕೆ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇತರೆ ಸಮಾರಂಭಕ್ಕೆ 100 ಜನ ಮಾತ್ರ ಭಾಗಿಯಾಗಬೇಕು.

ಒಂದು ವೇಳೆ ನಿಯಮ ಪಾಲಿಸದೇ ಹೋದಲ್ಲಿ ಹೊಟೆಲ್, ಕಲ್ಯಾಣ ಮಂಟಪ ಎಸಿ ಹಾಲ್ ಗೆ 10000ರೂ. ಹಾಗೂ ನಾನ್ ಎಸಿಗೆ 5000 ದಂಡ ವಿಧಿಸಲಾಗುವುದು. ಈ ದಂಡವನ್ನು ಸಭೆ ಸಮಾರಂಭ ಆಯೋಜಕರೇ ಕಟ್ಟಬೇಕು.

ಹೊಟೆಲ್, ಅಂಗಡಿ ಯಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಹೀಗಾಗಿ ನಿರ್ಲಕ್ಷ್ಯ ತೋರುವಂತಿಲ್ಲ. ಕೋವಿಡ್ ನಿಯಮ ಮೀರಿದ್ರೆ ಭಾರೀ ದಂಡ ಕಟ್ಟಬೇಕು.

ಬೆಂಗಳೂರಿನಲ್ಲಿ ಕೊರೊನಾ ಕೇಸ್ ಸಾವಿರ ಗಡಿ ದಾಟಿದೆ. 24 ಗಂಟೆಯಲ್ಲಿ 1492 ಪ್ರಕರಣ ದಾಖಲಾಗಿವೆ. ಹೀಗಾಗಿ ಜನ ಸಂದಣಿ ಇರುವ ರೈಲ್ವೆ ನಿಲ್ದಾಣದಲ್ಲಿ 5 ಕ್ಕೂ ಹೆಚ್ಚು ಟೆಸ್ಟ್ ಕೌಂಟರ್, ಗಡಿ ಭಾಗದಲ್ಲಿ ಮಾರ್ಷಲ್ ಗಳನ್ನು ನಿಯೋಜನೆ ಮಾಡಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights