‘ನಮ್ಮಲ್ಲೂ ದೊಡ್ಡ ಸಾಕ್ಷಿ ಇದೆ. ತೋರಿಸಿದ್ರೆ ಶಾಕ್ ಆಗ್ತೀರಾ’- ‘ಸಿಡಿ’ದೆದ್ದ ರಮೇಶ್ ಜಾರಕಿಹೊಳಿ!

ಇಂದು ಸಿಡಿ ಲೇಡಿ 1 ನಿಮಿಷ 13 ಸೆಕೆಂಡ್ ನ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದು ಇದಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸಿಡಿ ಯುವತಿ ವಿಡಿಯೋ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ” ಅದು ದೊಡ್ಡ ಕೈಗೊಂಬೆ. ಬಹಳ ಹೈಪ್ರೊಫೆಲ್ ಕೇಸ್ ಇದೆ. ಹೀಗಾಗಿ ನಾನು ಮಾತನಾಡಿಲ್ಲ. ನನ್ನ ವಕೀಲರು ಮಾತನಾಡಬೇಡಿ ಎಂದಿದ್ದಾರೆ. ಹೀಗಾಗಿ ನಾನು ಮಾತನಾಡುತ್ತಿಲ್ಲ. ಮುಂದಿನ ದಿನ ನೋಡಿ. ಅವರು ದೊಡ್ಡ ಪ್ಲ್ಯಾನ್ ಮಾಡಿದ್ದಾರೆ. ಮೊದಲು ಒಂದು ರೀತಿ ಧ್ವನಿ ಇತ್ತು ಯುವತಿದು ಈಗ ಒಂದು ಧ್ವನಿ ಇದೆ” ಎಂದಿದ್ದಾರೆ.

” ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮಾಡಲಾಗಿದೆ. ಇನ್ನೂ ಹತ್ತು ಸಿಡಿ ಬರಲಿ ನಾನು ರೆಡಿಯಿದ್ದೇನೆ. ಅದರ ಬಗ್ಗೆ ನಾವು ವಿವಿಧ ದಾಖಲೆಗಳನ್ನು ರೆಡಿ ಮಾಡಿದ್ದೇವೆ. ಈ ಕೇಸ್ ನಲ್ಲಿ ನಾನು ಗೆಲ್ಲುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೊತೆಗೆ ” ನಾನು ಆರೋಪ ಮುಕ್ತನಾಗುತ್ತೇನೆ. ದೇವರ ಮೇಲೆ ನಂಬಿಕೆ ಇದೆ. ನಮ್ಮಲ್ಲಿ ದೊಡ್ಡ ಸಾಕ್ಷಿ ಇದೆ. ನನ್ನ ಜೇಬಲ್ಲಿ ಸದ್ಯ ಇದೆ. ಅದನ್ನು ನಾನು ತೆಗೆದಿಲ್ಲ. ತೆಗೆದರೆ ನೀವು ಶಾಕ್ ಆಗ್ತೀರಾ. ಸಾಕಷ್ಟು ಪ್ಲ್ಯಾನ್ ಮಾಡಿ ನನ್ನನ್ನು ಸಿಲುಕಿಸಿದ್ದಾರೆ. ಮಹಾನಾಯಕ ಯಾರು ಅನ್ನೋದು ಗೊತ್ತಾಗುತ್ತದೆ. ಹೀಗಾಗಿ ಕಾನೂನಿನ ಮೊರೆ ಹೋಗುತ್ತೇನೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಜೈಲಿಗೆ ಕಳುಹಿಸುವವರೆಗೂ ಬಿಡುವುದಿಲ್ಲ” ಎಂದು ಹೇಳಿದ ರಮೇಶ್ ಮುಖದಲ್ಲಿ ತಾವು ಚದುರಂಗದಾಟದಲ್ಲಿ ಸಿದ್ದರಾದಂತೆ ಕಾಣುತ್ತಿತ್ತು.

ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ತಾವು ಕೂಡ ಚದುರಂಗದಾಟಕ್ಕೆ ಸಿದ್ಧರಾದಂತೆ ಹೇಳಿಕೆ ನೀಡಿದ್ದು ಅದ್ಯಾವ ಸಾಕ್ಷಿಯನ್ನು ಅವರು ಇಟ್ಟುಕೊಂಡಿದ್ದಾರೆ ಅನ್ನೋ ಅನುಮಾನ ಮೂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights