ಭಾರತದಲ್ಲಿ ಮುಂದುವರೆದ ಕೊರೊನಾ ಹಾವಳಿ : ಒಂದೇ ದಿನಕ್ಕೆ 67,151 ಹೊಸ ಕೇಸ್!
ದಿನದಿಂದ ದಿನಕ್ಕೆ ಭಾರತದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 67,151 ಹೊಸ ಪ್ರಕರಣಗಳು ದಾಖಲಾಗಿವೆ. ಈವರೆಗೆ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 32 ಲಕ್ಷಗಳನ್ನು ದಾಟಿದೆ.
ದೇಶದ ಒಟ್ಟು 32,34,475 ಕೊರೊನಾ ಸೋಂಕಿತರ ಪೈಕಿ 7,07,267 ಸಕ್ರಿಯ ಪ್ರಕರಣಗಳು ಇದ್ದು, ಇವರಲ್ಲಿ 24,67,759 ಸೋಂಕಿತರು ಗುಣಮುಖರಾಗಿದ್ದಾರೆ. 59,449 ಜನ ಮಹಾಮಾರಿ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಆರೋಗ್ಯ ಸಚಿವಾಲಯ ಆಗಸ್ಟ್ನಲ್ಲಿ ಕೊರೊನಾ ಪರೀಕ್ಷೆ ದಿನಕ್ಕೆ 10 ಲಕ್ಷಕ್ಕೆ ಹೆಚ್ಚಿಸಿದ್ದು ಪರೀಕ್ಷೆ ಹೆಚ್ಚಾದಂತೆ, ಭಾರತದಲ್ಲಿ ಸಕಾರಾತ್ಮಕ ದರದಲ್ಲಿ ಸ್ಥಿರ ಕುಸಿತ ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.