ನೈಜ ಪತ್ರಿಕೋದ್ಯಮ ಮತ್ತು ಟಿಆರ್‌ಪಿ ಗೀಳಿನ ಬಕೆಟ್‌ ಮಾಧ್ಯಮಗಳ ನಡುವಿನ ವ್ಯತ್ಯಾಸ!

ಇತ್ತೀಚೆಗಿನ ದಿನಗಳಲ್ಲಿ ಪತ್ರಿಕಾ ರಂಗದೊಳಗೆ ನೈಜ ಪತ್ರಿಕೋದ್ಯಮವನ್ನು ದುರ್ಬೀನು ಹಾಕಿಕೊಂಡು ಹುಡುವಂತಹ ಮಟ್ಟಕ್ಕೆ ಭಾರತೀಯ ಪತ್ರಿಕಾ ಮಾಧ್ಯಮ ತಲುಪಿದೆ. ಇತ್ತೀಚೆಗೆ ಗೋಧಿ ಮೀಡಿಯಾ ಎಂಬ ಹೊಸ ಹಣೆಪಟ್ಟಿಯನ್ನೂ ಮಾಧ್ಯಮಗಳಿಗೆ ಕಟ್ಟಲಾಗಿದೆ.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಾಧ್ಯಮಗಳ ವರಸೆಯೇ ಬದಲಾಗಿದೆ. ಅಧಿಕಾರದಲ್ಲಿರುವ ಪಕ್ಷದ ಸಿದ್ಧಾಂತವನ್ನು ನಿರಂತರವಾಗಿ ಪ್ರಚಾರ ಮಾಡುವ ಮತ್ತು ದಿನಬೆಳ್ಳಗ್ಗೆಯೇ ಪ್ರಧಾನಿ ಮೋದಿಯ ಭಜನೆ ಮಾಡುವುದರಲ್ಲಿ ದೇಶದ ಬಹುತೇಕ ಮಾಧ್ಯಮಗಳು ನಿರತವಾಗಿವೆ.

ಅಲ್ಲದೆ, ಕೊರೊನಾ ನಂತರದಲ್ಲಿ ದೇಶಾದ್ಯಂತ ಹಲವಾರು ರೀತಿಯ ವಿದ್ಯಮಾನಗಳು ನಡೆಯುತ್ತಲೇ ಇವೆ. ಆರ್ಥಿಕತೆ ಕುಸಿದಿದೆ. ಜಿಡಿಪಿ ಪಾತಾಳಕ್ಕೆ ಕಂಡಿದೆ. ಕೊರೊನಾ ಜೊತೆಗೆ ಜನರು ಹೋರಾಟ ನಡೆಸುತ್ತಾ ಬದುಕುತ್ತಿದ್ದಾರೆ. ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಗಡಿಯಲ್ಲಿ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಇದೆ.

ಇಷ್ಟೆಲ್ಲಾ ಸಮಸ್ಯೆಗಳು ದೇಶದ ಮುಂದಿದ್ದರೂ, ಮಾಧ್ಯಮಗಳು ಮಾತ್ರ ಸದ್ಯ ಸಿನಿಮಾ ರಂಗದೊಳಗೇ ಮುಳುಗಿಹೋಗಿವೆ. ಇಂಗ್ಲಿಷ್‌ ಮೀಡಿಯಾಗಳು ಕಂಗನಾ ಸುತ್ತ ಸುತ್ತುತ್ತಿದ್ದರೆ, ಕನ್ನಡ ಮಾಧ್ಯಮಗಳು ರಾಣಿಗಿ, ಸಂಜನಾ, ಸ್ಯಾಂಡಲ್‌ವುಡ್‌ಅನ್ನು ಸುತ್ತುವರೆದಿವೆ.

ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ವೊಂದು ಹರಿದಾಡುತ್ತಿದೆ. ಅದೇನೆಂದರೆ, ND tvಯಲ್ಲಿ ರವೀಶ್‌ ಕುಮಾರ್‌ ಅವರು ನಡೆಸಿಕೊಡುವ ಪ್ರೈಮ್‌ ಟೈನ್‌ ಕಾರ್ಯಕ್ರಮ ಮತ್ತು ಅದೇ ಸಮಯದಲ್ಲಿ ಇತರ ಮಾಧ್ಯಮಗಳ ಪ್ರೈಮ್‌ ಟೈಮ್‌ ಕಾರ್ಯಕ್ರಮಗಳ ಒಂದು ತಿಂಗಳ ವಿಷಯಗಳ ಬಗ್ಗೆ ಹೋಲಿಕೆ ಮಾಡಿ, ಆ ವಿಷಯಗಳ ಪಟ್ಟಿ ಮಾಡಲಾಗಿದೆ.

ಅವುಗಳು ಇಂತಿವೆ, ಎನ್‌ಡಿ ಟಿವಿಯಲ್ಲಿ ಕಳೆದ ಒಂದು ತಿಂಗಳಿನಲ್ಲಿ. ಯೋಜನೆ ರಹಿತ ಲಾಕ್‌ಡೌನ್‌, ವಲಸೆ ಕಾರ್ಮಿಕರು, ಆರೋಗ್ಯ ವ್ಯವಸ್ಥೆ, ನಿರುದ್ಯೋಗ, ಎಂಎಸ್‌ಎಂಇ ಕ್ರೈಸಿಸ್‌, ಪಿಎಂ ಕೇರ್ಸ್‌, ಕೊರೊನಾ ಪ್ರಕರಣಗಳ ಹೆಚ್ಚಳ, ಚೀನಾ ಜೊತೆಗಿನ ಬಿಕ್ಕಟ್ಟು, ಜೆಇಇ, ನೀಟ್‌ ಸೇರಿದಂತೆ ವಿದ್ಯಾರ್ಥಿಗಳ ಪರೀಕ್ಷೆಗಳು, ಉತ್ತರ ಪ್ರದೇಶದಲ್ಲಿನ ಅಪರಾಧ ಪ್ರಕರಣಗಳು, ಜಿಡಿಪಿ ಬಗ್ಗೆ ಚರ್ಚೆಗಳು ನಡೆದರೆ, ಉಳಿದೆಲ್ಲಾ ಮಾಧ್ಯಮಗಳು ಸುಶಾಂತ್‌ ಸಿಂಗ್‌, ರೆಹಾ ಚಕ್ರವರ್ತಿ, ಕಂಗನಾ, ಸಂಜನಾ, ಡ್ರಗ್ಸ್‌ ಸುತ್ತಾ ಗಿರಕಿ ಹೊಡೆಯುತ್ತಿವೆ.

ಸದ್ಯ ದೇಶದ ಅತ್ಯಂತ ಆಘಾತಿಕಾರಿ ವಿದ್ಯಾಮಾನಗಳು, ವಿಷಯಗಳನ್ನು ಗಾಳಿ ತೂರಿರುವ ಮಾಧ್ಯಮಗಳು, ಟಿಆರ್‌ಪಿ ಗಿಟ್ಟಿಸಿಕೊಳ್ಳುವುದರ ಜೊತೆಗೆ ಬಕೆಟ್‌ ಹಿಡಿಯುವುದರಲ್ಲಿ ನಿರತವಾಗಿವೆ.


ಇದನ್ನೂ ಓದಿ: ಕಂಗನಾ, ಮಹಾ ಸರ್ಕಾರದ ಕಿತ್ತಾಟದಲ್ಲಿ ಮರ್ಯಾದೆ ಕಳೆದುಕೊಂಡ ಮಾಧ್ಯಮಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights