Fact Check: : ಹೊಸ ಸ್ಟುಡಿಯೊ ಮಾಡಲು ಅಂಬಾನಿ ಕುಟುಂಬದಿಂದ ಕಂಗನಾಗೆ 200 ಕೋಟಿ ರೂ.?
ನಟಿ ಕಂಗನಾ ಮತ್ತು ಆಡಳಿತಾರೂಢ ಶಿವಸೇನೆ ನಡುವಿನ ಜಗಳದ ಮಧ್ಯೆ ಇದೀಗ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪೋಸ್ಟ್ನ ಶೀರ್ಷಿಕೆ ಹೀಗಿದೆ, “ ಹೊಸ ಸ್ಟುಡಿಯೋ ನಿರ್ಮಾಣಕ್ಕಾಗಿ ಕಂಗನಾ ಅವರಿಗೆ ಅಂಬಾನಿ ಕುಟುಂಬವ 200 ಕೋಟಿ ಸಹಾಯ ಮಾಡುತ್ತದೆ” ಎಂದು ಬರೆಯಲಾಗಿದೆ.

ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್ಡಬ್ಲ್ಯೂಎ) ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಕಂಡುಹಿಡಿದಿದೆ. ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಈ ಹಕ್ಕನ್ನು ನಕಲಿ ಎಂದು ನಿರಾಕರಿಸಿದೆ.
ಪೋಸ್ಟ್ಗಳ ಆರ್ಕೈವ್ ಮಾಡಲಾದ ಆವೃತ್ತಿಗಳನ್ನು ಇಲ್ಲಿ ನೋಡಬಹುದು. ಈ ವಿಚಾರವನ್ನು ಫೇಸ್ಬುಕ್ನಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ.
ಈ ಬಗ್ಗೆ ಎಎಫ್ಡಬ್ಲ್ಯೂಎಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಯಿಲ್ಲ. ಇತ್ತೀಚೆಗೆ ನೀತಾ ಅಂಬಾನಿಯವರ ಕುಟಂಬ ಸ್ಟುಡಿಯೋ ಅಥವಾ ಕಚೇರಿ ನಿರ್ಮಿಸಲು ಕಂಗನಾ ಅವರಿಗೆ 200 ಕೋಟಿ ರೂ. ಸಹಾಯ ಮಾಡಿಲ್ಲ ಎನ್ನುವುದು ಖಚಿತವಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ಗೆ ಈ ಬಗ್ಗೆ ಪ್ರಶ್ನೆ ಮಾಡಿದಾಗ ಅದರ ಅಧಿಕಾರಿಗಳು ವೈರಲ್ ಪೋಸ್ಟ್ ನ್ನು ನಿರಾಕರಿಸಿದರು. ಮಾತ್ರವಲ್ಲ ಅದು ನಕಲಿ ಎಂದು ಖಚಿತಪಡಿಸಿದ್ದಾರೆ. ಕಂಗನಾ-ಬಿಎಂಸಿ ವಿವಾದದ ನಂತರ ತಮ್ಮ ಕಡೆಯಿಂದ ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಅಂಬಾನಿ ಕುಟುಂಬ ಸಾಮಾಜಿಕ ಮಾಧ್ಯಮ ವದಂತಿಗಳನ್ನು ಸ್ವೀಕರಿಸುವ ತುದಿಯಲ್ಲಿತ್ತು. ಇದನ್ನು ಹಲವಾರು ಸತ್ಯ-ಪರಿಶೀಲಕರು ಬಹಿರಂಗಪಡಿಸಿದ್ದಾರೆ. ಈ ಕೆಲವು ಲೇಖನಗಳನ್ನು ಇಲ್ಲಿ ಓದಬಹುದು.


