ಸಂಕಷ್ಟಕ್ಕೆ ಸಿಲುಕಿದ ಪ್ರಸಿದ್ಧ ಟಾಲಿವುಡ್ ತಾರೆ : ಅಲ್ಲು ಅರ್ಜುನ್ ವಿರುದ್ಧ ದೂರು..!
ಟಾಲಿವುಡ್ ನಲ್ಲಿ ಕಳೆದ ಬಾರಿ ‘ಅಲಾ ವೈಕುಂಠಪುರಮುಲೋ’ ನಂತಹ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತೊಂದರೆಗೆ ಸಿಲುಕಿದ್ದಾರೆ. ಸದ್ಯ ಷುಷ್ಪಾ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿರುವ ಅಲ್ಲೂ ವಿರುದ್ಧ ಆದಿಲಾಬಾದ್‌ನ ನೆರೆಡಿಗಾಂಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೋವಿಡ್ -19 ನಿಯಮಗಳ ವಿರುದ್ಧ ನಟ ಅಲ್ಲು ಅರ್ಜುನ್ ಮತ್ತು ಅವರ ಮುಂಬರುವ ಚಿತ್ರ ಪುಷ್ಪಾ ಸಿಬ್ಬಂದಿ ಇತ್ತೀಚೆಗೆ ದಿ ಕುಂತಲಾ ಜಲಪಾತಕ್ಕೆ ಭೇಟಿ ನೀಡಿದ್ದು ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನೆರೆಡಿಗಾಂಡಾ ಪೊಲೀಸರಿಗೆ ದೂರು ದೊರೆತಿದ್ದು, ಪ್ರಾಥಮಿಕ ತನಿಖೆಯ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಪ್ರತಿನಿಧಿಗಳಿಗೆ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಸಮಾಚರಾ ಹಕ್ಕು ಸಾಧನಾ ಶ್ರವಂತಿ (ಎಸ್‌ಎಚ್‌ಎಸ್‌ಎಸ್) ನ ಕೆಲವು ಪ್ರತಿನಿಧಿಗಳು ದೂರು ನೀಡಿದ್ದಾರೆ. ಲಾಕ್‌ಡೌನ್ ಮತ್ತು ಕೊರೋನಾ ಪೆಂಡ್‌ಮಿಕ್‌ನಿಂದಾಗಿ ಈ ವಿಷಯವು ಭಾರಿ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತಿದೆ. ಕೋವಿಡ್‌ನಿಂದಾಗಿ ಕುಂತಲಾ ಫಾಲ್ಸ್ ಸರ್ಕಾರವು ಮುಚ್ಚಿದೆ. ಆದರೆ ನಿಯಮ ಮೀರಿ ಪುಷ್ಪ ತಂಡ ಫಾಲ್ಸ್ ಗೆ ತೆರಳಿದೆ ಎಂದು ಆರೋಪಿಸಲಾಗಿದೆ. ಎಸ್‌ಎಚ್‌ಎಸ್‌ಎಸ್ ಪ್ರತಿನಿಧಿಗಳು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಲ್ಲು ಅರ್ಜುನ್ ಮತ್ತು ಟೀಮ್ ಪುಷ್ಪಾ ವಿರುದ್ಧ ಮೊಕದ್ದಮೆ ಹೂಡಬೇಕೆಂದು ಪೊಲೀಸರಿಗೆ ಸೂಚಿಸಿದ್ದಾರೆ.
ದಾಖಲಾದ ಪ್ರಕರಣಕ್ಕೆ ಪ್ರತಿಕ್ರಿಯೆಯಾಗಿ, ಅಲ್ಲು ಅರ್ಜುನ್ ತಂಡದ ಸದಸ್ಯರು ಮತ್ತು ಪುಷ್ಪಾ ತಂಡದವರು ದೂರಿಗೆ ಇನ್ನೂ ಸ್ಪಂದಿಸಿಲ್ಲ. ಅವರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ನೋಡಲು ಜನರು ಕಾಯುತ್ತಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿದರೆ ಪುಷ್ಪಾ ಚಿತ್ರ ತಯಾರಕರೊಂದಿಗೆ ನಟ ಅಲ್ಲು ಅರ್ಜುನ್ ಕಾನೂನು ಹೋರಾಟ ಮಾಡಬೇಕಾಗುತ್ತದೆ.

