ಲಾಕ್‌ಡೌನ್‌ ವೇಳೆ ಕಾಲ್ನಡಿಗೆಯಲ್ಲಿ ಊರು ಸೇರಿದವರ ಸಂಖ್ಯೆ 1 ಕೋಟಿಗೂ ಅಧಿಕ: ಕೇಂದ್ರ ಸರ್ಕಾರ

ಕೊರೊನಾ ನಿಯಂತ್ರಣಕ್ಕಾಗಿ ಯಾವುದೇ ತಯಾರಿ ಇಲ್ಲದೆ ಹೇರಿದ ಲಾಕ್‌ಡೌನ್‌ನಿಂದಾಗಿ ಆ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ಕಾಲ್ನಡಿಯಲ್ಲಿ ತಮ್ಮ ತವರು ರಾಜ್ಯಗಳನ್ನು ಸೇರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಜನರು ಮೂಲಭೂತ ಅಗತ್ಯಗಳನ್ನು ಹೊಂದಿಸಿಕೊಳ್ಳಲು ಹಾಗೂ ಸರ್ಕಾರ ಯಾವುದೇ ರೀತಿಯ ನೆರವು ನೀಡದೆ ಏಕಾಏಕಿ ಮಾರ್ಜ್‌ 24 ರಂದು ಘೋಷಿಸಿದ ಲಾಕ್‌ಡೌನ್‌ನಿಂದಾಗಿ ಕೋಟ್ಯಾಂತರ ವಲಸೆ ಕಾರ್ಮಿಕರು ಉದ್ಯೋಗವನ್ನೂ ಕಳೆದುಕೊಂಡು, ಆಹಾರ ಭದ್ರತೆ ಹಾಗೂ ಉಳಿಯಲು ನೆಲೆಯೂ ಇಲ್ಲದೆ ಕಂಗಾಲಾಗಿ, ಕೊನೆಗೆ ತಮ್ಮ ರಾಜ್ಯಗಳ ಹಾದಿ ಹಿಡಿದಿದ್ದರು. ಸಂಪರ್ಕ ವ್ಯವಸ್ಥೆಯೂ ಸ್ಥಗಿತಗೊಂಡಿದ್ದರಿಂದಾಗಿ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ತಮ್ಮೂರುಗಳನ್ನು ಸೇರಿದ್ದಾರೆ. ನಡೆದು ಊರು ಸೇರಿದವರ ಸಂಖ್ಯೆ 1.06 ಕೋಟಿಗೂ ಹೆಚ್ಚಾಗಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಮಾರ್ಚ್‌ನಿಂದ ಜೂನ್‌ ವರೆಗಿನ ಮೂರು ತಿಂಗಳಲ್ಲಿ 1.06 ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಗಳನ್ನು ತಲುಪಿದ್ದಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ವಿಕೆ ಸಿಂಗ್‌ ಅವರು ಹೇಳಿದ್ದಾರೆ.

ಇದನ್ನೂ ಓದಿ: ವಲಸೆ ಸಾವುಗಳ ಬಗ್ಗೆ ಯಾವುದೇ ಡೇಟಾ ಇಲ್ಲ, ಆದ್ದರಿಂದ ಪರಿಹಾರವಿಲ್ಲ: ಕೇಂದ್ರ ಸರ್ಕಾರ

ತಾತ್ಕಾಲಿಕ ಲಭ್ಯವಿರುವ ಮಾಹಿತಿಯ ಪ್ರಕಾರ, ಲಾಕ್‌ಡೌನ್‌ ಅವಧಿಯಲ್ಲಿ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ 81,385 ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 29,415 ಸಾವು ನೋವುಗಳು ಸಂಭವಿಸಿವೆ ಎಂದು ವಿಕೆ ಸಿಂಗ್‌ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಗೃಹ ಸಚಿವಾಲಯವು(ಎಂಎಚ್‌ಎ) ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತವಾಗಿ ಸಲಹೆಗಳನ್ನು ನೀಡಿದ್ದು, ಆಶ್ರಯ, ಆಹಾರ, ನೀರು, ಆರೋಗ್ಯ ಸೌಲಭ್ಯಗಳು ಮತ್ತು ವಲಸೆ ಕಾರ್ಮಿಕರಿಗೆ ಸರಿಯಾದ ಸಮಾಲೋಚನೆ ಒದಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಲಾಕ್‌ಡೌನ್‌ ವೇಳೆಯಲ್ಲಿ ಸಾವನ್ನಪ್ಪಿದ ವಲಸೆ ಕಾರ್ಮಿಕರ ಅಂಕಿಅಂಶವನ್ನು ಪ್ರತ್ಯೇತಕವಾಗಿ ಸಂಗ್ರಹಿಸಿ ಎಂದೂ ಅವರು ಹೇಳಿದ್ದಾರೆ.


ಇದನ್ನೂ ಓದಿ: ಲಾಕ್‌ಡೌನ್‌: ಶ್ರಮಿಕ್‌ ರೈಲಿನಲ್ಲಿ ಸಾವನ್ನಪ್ಪಿದ ವಲಸೆ ಕಾರ್ಮಿಕರ ಅಂಕಿಅಂಶ ಬಿಡುಗಡೆ ಮಾಡಿದ ಕೇಂದ್ರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights