ಟೆಲಿಗ್ರಾಂನಲ್ಲಿ ನಿಮ್ಮ ನಂಬರ್‌ ಇತರರಿಗೆ ಕಾಣದಂತೆ ಹೈಡ್‌ ಮಾಡುವುದು ಹೇಗೆ? ಇಲ್ಲಿದೆ ವಿಧಾನ

ವಾಟ್ಸಾಪ್‌ ಬಳಕೆದಾರರ ಪ್ರೈವೆಸಿಗೆ ಗ್ಯಾರಂಟಿ ಇಲ್ಲವೆಂಬ ಅಂಶಗಳು ತಿಳಿದು ಬಂದ ನಂತರ, ಜನರು ಟೆಲಿಗ್ರಾಂ ಕಡೆಗೆ ವಾಲುತ್ತಿದ್ದಾರೆ. ಟೆಲಿಗ್ರಾಂನಲ್ಲಿ ಸಿನಿಮಾಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು, ಸ್ನೇಹಿತರೊಂದಿಗೆ ಚಾಟ್‌ ಮಾಡಲು ಟೆಲಿಗ್ರಾಂ ಬಳಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟೆಲಿಗ್ರಾಂ ಹೊಸ ಅವಕಾಶವನ್ನೂ ನೀಡಿದ್ದು, ತಮ್ಮ ಫೋನ್‌ ನಂಬರ್‌ಅನ್ನು ಮತ್ತೊಬ್ಬರು ಪಡೆದುಕೊಳ್ಳದಂತೆ ಹೈಡ್‌ ಮಾಡುವ ಅವಕಾಶ ನೀಡಿದೆ.

ಪರಿಚಿತರು, ಅಪರಿಚಿತರು ಇರುವ ಟೆಲಿಗ್ರಾಂನ ಗುಂಪುಗಳಲ್ಲಿ ತಮ್ಮ ನಂಬರ್‌ಗಳನ್ನು ಇತರರು ಪಡೆದುಕೊಂಡು ಅನವಶ್ಯಕ ಕರೆ, ಮೆಸೇಜ್‌ಗಳನ್ನು ಕಳಿಸಬಹುದು. ಇದರಿಂದಾಗಿ ಸಾಕಷ್ಟು ಕಿರಿಕಿರಿ – ತೊಂದರೆ ಅನುಭವಿಸಹುದು. ಹೀಗಾಗಿ ಇಂತಹ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು, ತಮ್ಮ ನಂಬರ್‌ ಗುಂಪುಗಳಲ್ಲಿ ಮತ್ತೊಬ್ಬರಿಗೆ ಕಾಣದಂತೆ ಕಡೆಯಲು ಟೆಲಿಗ್ರಾಂ ಅವಕಾಶ ಕೊಟ್ಟಿದೆ.

ಟೆಲಿಗ್ರಾಂನ ಗುಂಪುಗಳಲ್ಲಿ ತಮ್ಮ ನಂಬರ್ ಕಾಣಿಸದಂತೆ ಹೈಡ್‌ ಮಾಡುವುದು ಹೇಗೆ? 

ನಿಮ್ಮ ಟೆಲಿಗ್ರಾಂ ಪರದೆ ತೆರೆದುಕೊಳ್ಳಿ.

ಸೆಟ್ಟಿಂಗ್‍ ಆಯ್ಕೆ ಕ್ಲಿಕ್ ಮಾಡಿ.

‘ಪ್ರೈವಸಿ ಅಂಡ್ ಸೆಕ್ಯೂರಿಟಿ’ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಫೋನ್ ನಂಬರ್ ಎನ್ನುವ ಆಯ್ಕೆ ಕಾಣಿಸಿಕೊಳ್ಳುತ್ತದೆ.

ಇದರ ಒಳಗೆ ಎವ್ರಿಬಡಿ ( ಎಲ್ಲರಿಗೂ), ಮೈ ಕಾಂಟಾಕ್ಟ್ಸ್ ( ನಿಮ್ಮ ಫೋನ್ ಬುಕ್‍ ನಲ್ಲಿರುವ ನಂಬರ್ ಗಳಿಗೆ ಮಾತ್ರ) ಹಾಗೂ ಕೊನೆಯದಾಗಿ ನೋಬಡಿ( ಯಾರಿಗೂ ಬೇಡ) ಎನ್ನುವ ಮೂರು ಆಯ್ಕೆಗಳಿವೆ.

ನಂತರ, ನೋಬಡಿ ಮೇಲೆ ಕ್ಲಿಕ್ ಮಾಡಿ.

ಈ ಮೇಲಿನ ವಿಧಾನದ ಮೂಲಕ ನಿಮ್ಮ ಫೋನ್‍ ನಂಬರ್‍ ನ್ನು ಯಾರಿಗೂ ಕಾಣದಂತೆ ಹೈಡ್ ಮಾಡಬಹುದು.

ಇದನ್ನೂ ಓದಿ: ಬಂಗಾಳ ಚುನಾವಣೆಯಲ್ಲಿ ಜಾರ್‌ಗ್ರಾಮ ವಿಶೇಷ: ನಾವೆಲ್ಲರೂ ಒಂದೇ-ಪರಸ್ಪರ ಜೊತೆಗಿದ್ದೇವೆ ಎಂದ 3 ಪಕ್ಷಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights