ಮೋದಿ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ಪಂಜಾಬ್‌ನಿಂದ ಕಾಂಗ್ರೆಸ್‌ ಕಿಸಾನ್‌ ಯಾತ್ರಾ!

ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ ರೈತರ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಪಂಜಾಬ್‌ನಿಂದ ದೆಹಲಿಯವರೆಗೆ ‘ಕಿಸಾನ್‌ ಯಾತ್ರಾ’ ಪ್ರತಿಭಟನಾ ಜಾಥಾವನ್ನು ಕಾಂಗ್ರೆಸ್ ಆಯೋಜಿಸಿದೆ.

ರೈತ ವಿರೋಧಿ ಕೃಷಿ ನೀತಿಗಳನ್ನು ವಿರೋಧಿಸಿರುವ ಕಾಂಗ್ರೆಸ್‌, ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್‌ ಬಂದ್‌ಗೆ ಬೆಂಬಲ ನೀಡಿತ್ತು. ಅಲ್ಲದೆ, ಈಗ ಕೇಂದ್ರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಕಿಸಾನ್‌ ಯಾತ್ರಾವನ್ನು ನಡೆಸುತ್ತಿದೆ.

ಅಕ್ಟೋಬರ್ 03 (ಶನಿವಾರ) ಪಂಜಾಬ್‌ನ ಸಾಂಗ್ರೂರ್‌ನಿಂದ ಕಿಸಾನ್ ಯಾತ್ರಾ ಆರಂಭಗೊಳ್ಳಲಿದ್ದು, ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಸಾಗಿ ದೆಹಲಿಯಲ್ಲಿ ಯಾತ್ರಾ ಅಂತ್ಯಗೊಳ್ಳಲಿದೆ ಎಂದು ಹರಿಯಾಣ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಶೆಲ್ಜಾ ತಿಳಿಸಿದ್ದಾರೆ.

ಶನಿವಾರ ಪಂಜಾಬ್‌ನ ಸಾಂಗ್ರೂರ್‌ನಲ್ಲಿ ಕಿಸಾನ್‌ಯಾತ್ರೆಗೆ ರಾಹುಲ್‌ಗಾಂಧಿ ಚಾಲನೆ ನೀಡಲಿದ್ಧಾರೆ. ಸಾಂಗ್ರೂರ್‌ನಿಂದ ಪಾಟಿಯಾಲಕ್ಕೆ ರೋಡ್‌ ಶೋ ಮೂಲಕ ಸಾಗಲಿದೆ. ವಿವಿಧ ಜಿಲ್ಲೆಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿದ್ದು, ಮೋದಿ ಸರ್ಕಾರದ ಕೃಷಿ ನೀತಿಗಳು ರೈತರಿಗೆ ಹೇಗೆ ಮಾರಕ ಎಂದು ವಿವರಿಸುವ ಮೂಲಕ ರೈತರನ್ನು ಒಳಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ರೈತರು, ಹಿಂದುಳಿದವರು, ಬಡವರು, ದಲಿತ-ಕಾರ್ಮಿಕರಿಗೆ ಮೋದಿ ಸರ್ಕಾರದ ನೀತಿಗಳು ಎಷ್ಟು ಮಾರಕವಾಗಿವೆ. ಮೋದಿ ಸರ್ಕಾರ ಹೇಗೆ ಜನವಿರೋಧಿಯಾಗಿದೆ ಎಂದು ಜನರಿಗೆ ತಿಳಿಸುವುದು ಯಾತ್ರಾದ ಉದ್ದೇಶವಾಗಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ರೈತರನ್ನು ಭಯೋತ್ಪಾದಕರು ಎಂದ ಕಂಗನಾ ಕಣಾವತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights