Fact Check: ಬ್ರೆಜಿಲ್‌ನ ಬೀದಿಯಲ್ಲಿ ನಗದು ರಾಶಿಯ ಈ ವೈರಲ್ ವೀಡಿಯೊದ ಹಿಂದಿನ ಸತ್ಯ ತಿಳಿಯಿರಿ..

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಬ್ರೆಜಿಲ್ ಒಂದು ಕಡೆ ಸಂಕಷ್ಟಕ್ಕೆ ಸಿಲುಕಿದೆ. ಮತ್ತೊಂದೆಡೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರನ್ನು ಗುರಿಯಾಗಿಸಿಕೊಂಡು ಅವರ ಪುತ್ರ ಫ್ಲೇವಿಯೊ ಬೋಲ್ಸನಾರೊ ಅವರ ಮೇಲೆ ದುರುಪಯೋಗ ಮತ್ತು ಹಣ ವರ್ಗಾವಣೆಯ ಆರೋಪ ಮಾಡಲಾಗಿದೆ.

ಇದರ ಮಧ್ಯೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವಿಡಿಯೋವೊಂದು ಬ್ರೆಜಿಲಿಯನ್ ಕರೆನ್ಸಿಯ ರಾಶಿಗಳನ್ನು ರಸ್ತೆಯ ಮಧ್ಯದಲ್ಲಿ ಹಾಕಿ ಸಾರ್ವಜನಿಕ ಪ್ರದರ್ಶನದಕ್ಕೆ ಇಡಲಾಗಿದೆ ಎಂದು ತೋರಿಸುತ್ತದೆ. ಇದು ನಿಜಕ್ಕೂ ಬ್ರೆಜಿಲ್‌ನ ಭ್ರಷ್ಟ ರಾಜಕಾರಣಿಗಳು ಮತ್ತು ಸಾರ್ವಜನಿಕ ಸೇವಕರಿಂದ ವಶಪಡಿಸಿಕೊಂಡ ಹಣ ಎಂದು ಹೇಳಲಾಗುತ್ತಿದೆ.

ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾದ ಅಂತಹ ಒಂದು ವೀಡಿಯೊದ ಶೀರ್ಷಿಕೆ ಹೀಗಿದೆ, “ಇದು ಕಟ್ಟಡವಲ್ಲ. ಬ್ರೆಜಿಲ್ ಸರ್ಕಾರ ತನ್ನ ಭ್ರಷ್ಟ ರಾಜಕಾರಣಿಗಳು ಮತ್ತು ಸಾರ್ವಜನಿಕ ಸೇವಕರಿಂದ ವಶಪಡಿಸಿಕೊಂಡ 4 ಬಿಲಿಯನ್ ಡಾಲರ್‌ ಹಣವನ್ನು ಸಾರ್ವಜನಿಕ ವೀಕ್ಷಣೆಗಾಗಿ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ. ಒಂದು ದಿನ ನಮ್ಮ ಭಾರತ ಸರ್ಕಾರದ ಇಂತಹ ಲೂಟಿಯನ್ನು ಪ್ರದರ್ಶಿಸಲಾಗುತ್ತದೆ  ” ಎಂದು ಬರೆಯಲಾಗಿದೆ.

ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಇದು ಸತ್ಯಕ್ಕೆ ದೂರವಾದದ್ದು ಎಂದು ಕಂಡುಹಿಡಿದಿದೆ. 2017 ರ ‘ಫೆಡರಲ್ ಪೋಲಿಸ್: ದಿ ಲಾ ಈಸ್ ಫಾರ್ ಎವರಿಒನ್’ ಚಲನಚಿತ್ರದ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಪ್ರದರ್ಶಿಸಲಾದ ನಕಲಿ ಕರೆನ್ಸಿ ನೋಟುಗಳು ಇವು. ಆದಾಗ್ಯೂ, ಈ ಚಲನಚಿತ್ರವು ಬ್ರೆಜಿಲ್ನಲ್ಲಿ ನಡೆದ ಭ್ರಷ್ಟಾಚಾರದ ಹಗರಣದ ನಿಜವಾದ ಕಥೆಯನ್ನು ಆಧರಿಸಿದೆ.

ಹೀಗಾಗಿ, ವೈರಲ್ ವೀಡಿಯೊದಲ್ಲಿನ ಹಣದ ರಾಶಿಯು ನಕಲಿಯಾಗಿದ್ದು, ಅದು 2017 ರ ಬ್ರೆಜಿಲಿಯನ್ ಚಲನಚಿತ್ರದ ಪ್ರಚಾರದ ಚಟುವಟಿಕೆಯಾಗಿದೆ ಎಂದು ಹೇಳಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights