ಯುಎಸ್ ಪಡೆಗಳಿಗೆ ಆ.31 ರೊಳಗೆ ಆಫ್ಘಾನ್ ತೊರೆಯುವಂತೆ ಗಡುವು ನೀಡಿದ ತಾಲಿಬಾನಿಗಳು!

ಯುಎಸ್ ಪಡೆಗಳಿಗೆ ಆ.31 ರೊಳಗೆ ಆಫ್ಘಾನ್ ತೊರೆಯುವಂತೆ ತಾಲಿಬಾನಿಗಳು ಗಡುವು ನೀಡಿದ್ದಾರೆ.

ಹೌದು… ಆಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡ ನಂತರ ಆಫ್ಘಾನಿಸ್ತಾನ್ ತೊರೆಯಲು ಬಯಸುವ ಯುಎಸ್ ಪ್ರಜೆಗಳನ್ನು ಸ್ಥಳಾಂತರಿಸಲು ಸುಮಾರು 8000 ಯುಎಸ್ ಸೈನಿಕರು ಕಾಬೂಲ್ ನಲ್ಲಿ ನೆಲೆಯೂರಿದ್ದಾರೆ. ಸ್ಥಳಾಂತರಿಸುವ ಕಾರ್ಯ ಮುಂದುವರೆದಿರುವಾಗಲೇ ತಾಲಿಬಾನ್ ಉಗ್ರರು ಯುಎಸ್ ಪಡೆಗೆ ಆಗಸ್ಟ್ 31ರೊಳಗೆ ಆಫ್ಘಾನ್ ತೊರೆಯುವಂತೆ ಗಡುವು ನೀಡಿದೆ. ಒಂದು ವೇಳೆ ತೊರೆಯದೇ ಹೋದಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ ಉಗ್ರರು ಎಚ್ಚರಿಸಿದ್ದಾರೆ.

“ಇದು ರೆಡ್ ಲೈನ್ ಎಂದು ನೀವು ಹೇಳಬಹುದು” ಎಂದು ವಕ್ತಾರ ಸುಹೈಲ್ ಶಾಹೀನ್ ಸಂದರ್ಶನವೊಂದರಲ್ಲಿ ಹೇಳಿದರು. “ಯುಎಸ್ ಅಥವಾ ಯುಕೆ ಸ್ಥಳಾಂತರಿಸುವಿಕೆಯನ್ನು ಮುಂದುವರಿಸಲು ಹೆಚ್ಚುವರಿ ಸಮಯವನ್ನು ಬಯಸಿದರೆ. ತಾಲಿಬಾನಿಗಳ ಉತ್ತರ ಹೀಗಿತ್ತು. ಸ್ಥಳಾಂತರಿಸುವಿಕೆ ತಡವಾದರೆ ಇದರ ಪರಿಣಾಮಗಳು ಉಂಟಾಗಬಹುದು” ಎಂದಿದ್ದಾರೆ.

ಇನ್ನೂ ಅಫ್ಘಾನಿಸ್ತಾನದಲ್ಲಿ ಸುಮಾರು 200ಕ್ಕೂ ಹೆಚ್ಚು ಅಫಘಾನ್ ಸಿಖ್ಖರು ಮತ್ತು ಹಿಂದುಗಳು ಇನ್ನೂ ಸಿಲುಕಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ವಾಯುಪಡೆ(ಐಎಎಫ್) ಯೊಂದಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿರುವ ಭಾರತೀಯ ವಿಶ್ವ ವೇದಿಕೆಯ ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ಅವರು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights