ಪ್ರಧಾನಿ ಮೋದಿ ಭೇಟಿಗಾಗಿ ಅಭಿಮಾನಿಯಿಂದ 815 ಕಿಮೀ ಕಾಲ್ನಡಿಗೆ..!

28 ವರ್ಷದ ಪ್ರಧಾನಿ ಮೋದಿ ಅವರ ಅಭಿಮಾನಿಯೊಬ್ಬರು ಶ್ರೀನಗರದಿಂದ ದೆಹಲಿಗೆ 815 ಕಿಮೀ ಕಾಲ್ನಡಿಗೆಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅರೆಕಾಲಿಕ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಶ್ರೀನಗರದ ಶಾಲಿಮಾರ್ ಪ್ರದೇಶದ ನಿವಾಸಿ ಫಾಹೀಮ್ ನಜೀರ್ ಷಾ ಶ್ರೀನಗರದಿಂದ ದೆಹಲಿಗೆ ಸುಮಾರು 815 ಕಿಮೀ ನಡೆದಿದ್ದು ಪ್ರಧಾನಿ ನರೇಂದ್ರ ಮೋದಿಯವರ ಗಮನವನ್ನು ಸೆಳೆದಿದ್ದಾನೆ. ಜೊತೆಗೆ ನಜೀರ್ ಷಾಗೆ ಮೋದಿ ಅವರನ್ನು ಭೇಟಿಯಾಗುವ ಅವಕಾಶ ಕೂಡ ಸಿಕ್ಕಿದೆ.

‘ನಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ. ಎರಡು ದಿನಗಳ ಹಿಂದೆ ಆರಂಭವಾದ ನನ್ನ ಪ್ರಯಾಣದಲ್ಲಿ ಸಣ್ಣ ವಿರಾಮಗಳನ್ನು ತೆಗೆದುಕೊಂಡೆ. ಈ ಕಷ್ಟಕರ ಪ್ರಯಾಣದ ಕೊನೆಯಲ್ಲಿ ಪ್ರಧಾನಿಯನ್ನು ಭೇಟಿ ಮಾಡುವ ಕನಸು ಈಡೇರಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ತಾನು ಪ್ರಧಾನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಿಸುತ್ತಿದ್ದೇನೆ. ಅವರ ಮಾತು ಮತ್ತು ಕಾರ್ಯಗಳು ನನ್ನ ಹೃದಯವನ್ನು ಸ್ಪರ್ಶಿಸಿವೆ ಎಂದು ಷಾ ಹೇಳುತ್ತಾರೆ.

ಒಂದು ಸಮಯದಲ್ಲಿ, ಅವರು ಒಂದು ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದಾಗ, ‘ಅಜಾನ್’ (ಪ್ರಾರ್ಥನೆಗಾಗಿ ಮುಸ್ಲಿಂ ಕರೆ) ಕೇಳಿದಾಗ ಅವರು ಇದ್ದಕ್ಕಿದ್ದಂತೆಮಾತನಾಡುವುದನ್ನ ನಿಲ್ಲಿಸಿ ಸಾರ್ವಜನಿಕರನ್ನು ಆಶ್ಚರ್ಯಚಕಿತರನ್ನಾಗಿಸಿದರು. ನಮ್ಮ ಪ್ರಧಾನಿಯ ಆ ಕಾರ್ಯ ನನ್ನ ಹೃದಯವನ್ನು ಮುಟ್ಟಿದೆ. ನಾನು ಅವರ ಕಟ್ಟಾ ಅಭಿಮಾನಿಯಾಗಿದ್ದೇನೆ “ಅವರು ಹೇಳಿದರು.

ಕಳೆದ ಎರಡೂವರೆ ವರ್ಷಗಳಲ್ಲಿ ಅವರು ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ. ಪ್ರಧಾನಿಯವರ ಕೊನೆಯ ಕಾಶ್ಮೀರ ಭೇಟಿಯ ಸಮಯದಲ್ಲಿ, ಭದ್ರತಾ ಸಿಬ್ಬಂದಿ ನನ್ನನ್ನು ಭೇಟಿಯಾಗಲು ಅನುಮತಿಸಲಿಲ್ಲ. ಈ ಬಾರಿ ನನಗೆ ಪ್ರಧಾನಿಯನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ ಎಂದು ನನಗೆ ಖಾತ್ರಿಯಿತ್ತು. ಮೋದಿಯವರೊಂದಿಗೆ ನಾನು ವಿದ್ಯಾವಂತ ಮತ್ತು ನಿರುದ್ಯೋಗಿ ಯುವಕರ ಸಮಸ್ಯೆಗಳ ಕುರಿತು ಮೋದಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗಾರಿಕಾ ವಲಯವನ್ನು ಅಭಿವೃದ್ಧಿಪಡಿಸಲು ಚರ್ಚಿಸಿದ್ದೇನೆ ಎಂದು ಷಾ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights