ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ನನ್ನ ದೆಹಲಿ ನಿವಾಸಕ್ಕೆ ಸ್ಥಳಾಂತರಿಸಲು ಸಿದ್ಧ: ಎಎಪಿ ಸಂಸದ ಸಂಜಯ್ ಸಿಂಗ್
ಸಾಮೂಹಿಕ ಅತ್ಯಾಚಾರ ಎಸಗಿ ಸಾವನ್ನಪ್ಪಿದ ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ದೆಹಲಿಯ ನಿವಾಸಕ್ಕೆ ಸ್ಥಳಾಂತರಿಸಲು ಸಿದ್ಧ ಎಂದು ಎಎಪಿ ಮುಖಂಡ ಸಂಜಯ್ ಸಿಂಗ್ ಶನಿವಾರ ಹೇಳಿದ್ದಾರೆ. ಆದಿತ್ಯನಾಥ್ ಸರ್ಕಾರದ ಭಯದಿಂದ ಅವರು ಬದುಕುವ ಅಗತ್ಯವಿಲ್ಲ ಎಂದು ಸಿಂಗ್ ಹೇಳಿದ್ದಾರೆ.
“ನಾನು ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ನನ್ನ ನಿವಾಸಕ್ಕೆ ಕರೆದೊಯ್ಯಲು ಸಿದ್ಧನಿದ್ದೇನೆ. ಅವರು ಆದಿತ್ಯನಾಥ್ ಸರ್ಕಾರದ ಭಯದಿಂದ ಬದುಕುವ ಅಗತ್ಯವಿಲ್ಲ. ನನ್ನ ಭಾವನೆಗಳನ್ನು ಸಂತ್ರಸ್ತೆಯ ಚಿಕ್ಕಪ್ಪನಿಗೆ ತಿಳಿಸಿದ್ದೇನೆ” ಎಂದು ಸಿಂಗ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿಂಗ್ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
मैं हाथरस की गुड़िया के परिवार को दिल्ली स्थित अपने आवास पर साथ रखने को तैयार हूँ उन्हें आदित्यनाथ राज के ख़ौफ़ में रहने की ज़रूरत नही मैंने गुड़िया के चाचा से फ़ोन पर बात करके अनुरोध किया है। https://t.co/K2oqv9cSgz
— Sanjay Singh AAP (@SanjayAzadSln) October 17, 2020
19 ವರ್ಷದ ದಲಿತ ಯುವತಿಯ ಮೇಲೆ ಸೆಪ್ಟೆಂಬರ್ 14 ರಂದು ಹತ್ರಾಸ್ ಗ್ರಾಮದಲ್ಲಿ ನಾಲ್ಕು ಪುರುಷರು ಅತ್ಯಾಚಾರ ಎಸಗಿದ್ದಾರೆ. ಆಕೆಯ ಸ್ಥಿತಿ ಹದಗೆಟ್ಟ ನಂತರ, ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ. ಆಕೆಯ ಶವವನ್ನು ಕುಟುಂಬದ ಇಚ್ಚೆಗೆ ವಿರುದ್ಧವಾಗಿ ರಾತ್ರೋರಾತ್ರಿ ಪೊಲೀಸರು ಸುಟ್ಟು ಕೊನೆಯ ವಿಧಿಗಳನ್ನು ನಡೆಸಲು ಒತ್ತಾಯಿಸಿದರು ಎಂದು ಆಕೆಯ ಕುಟುಂಬ ಆರೋಪಿಸಿದೆ.
ಆದಾಗ್ಯೂ, ಸ್ಥಳೀಯ ಪೊಲೀಸ್ ಅಧಿಕಾರಿಗಳು “ಕುಟುಂಬದ ಇಚ್ಚೆಯಂತೆ” ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಈ ಘಟನೆ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ವಿವಿಧ ಕ್ಷೇತ್ರಗಳ ಜನರು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ.

