ಮುಂದಿನ ಸಿಎಂ ಯಾರು..? ಸಿಎಂ ಕನಸು ಕಂಡ ಡಿಕೆಶಿ, ಹೆಚ್ಡಿಕೆಗೆ ಗುಮ್ಮುತ್ತಾ ಟಗರು…?
ಎದುರಾಳಿಗಳಿಗೆ ಎಗರೆಗರಿ ಗುಮ್ಮಿದ ಟಗರು ಸಿದ್ದರಾಮಯ್ಯ ಸಿಎಂ ಆಸೆ ಬಿಚ್ಚಿಟ್ಟು ಡಿಕೆಶಿಗೂ ಡಿಚ್ಚಿ ಹೊಡೆದಿದ್ದಾರೆ. ಕಾಂಗ್ರೆಸ್ ನ ಟಗರು ಕಾಲು ಕೆರೆದು ಎದುರಾಳಿಗಳನ್ನು ಹಿಗ್ಗಾಮುಗ್ಗಾ ಗುಮ್ಮುತ್ತಿದೆ. ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅನ್ನುತ್ತಿರುವ ಸಿದ್ದರಾಮಯ್ಯ ಹಳೆ ಚಾರ್ಮಗೆ ಬಂದಿದ್ದಾರೆ. ಹೀಗಾಗಿ ಇನ್ನೇನಿದ್ರು ಸಿದ್ದನೇ ಡಿ ಬಾಸ್. ತಾನೇನಾದ್ರಿ ಸಿಎಂ ಆದ್ರೆ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿ ತಮ್ಮ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ.
ಹಾಗಾದ್ರೆ ಸಿದ್ದು ಮತ್ತೆ ಸಿಎಂ ಆಗ್ತಾರಾ. ಇದೇ ಇದೊಂದು ಪ್ರಶ್ನೆಯೇ ರಾಜ್ಯ ರಾಜಕೀಯದಲ್ಲಿ ಸಂಚಲನ ಹುಟ್ಟಿಸುತ್ತಿರೋದು. ಇಷ್ಟು ದಿನ ಸಿಎಂ ಆಸೆಯನ್ನು ಅದಮಿಟ್ಟುಕೊಮಡಿದ್ದ ಸಿದ್ದು, ತಮ್ಮ ಸ್ವಕ್ಷೇತ್ರ ಮಾದಾಮಿಗೆ ಹೋದ ಮೇಲೆ ಹೊರಗೆಡವಿದ್ದಾರೆ. ಸಿದ್ದರಾಮಯ್ಯ ನವರ ಸಿಎಂ ಆಸೆ ನೋಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಯಾಕೆಂದ್ರ 2024ರಲ್ಲಿ ನಾನೇ ಸಿಎಂ ಎಂದು ಕನಸು ಕಾಣುತ್ತಿದ್ದಾರೆ ಡಿಕೆಶಿ. ಆ ಕನಸಿಗೆ ಸಿದ್ದರಾಮಯ್ಯ ನವರ ಹೇಳಿಕೆ ತಣ್ಣೀರೆರೆಚಿದೆ.
ಅಷ್ಟೇ ಅಲ್ಲ ಸಿದ್ದು ಸಿಎಂ ಆಗೋ ಆಸೆಯನ್ನು ಬಿಚ್ಚಿಡುತ್ತಿದ್ದಂತೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಶಾಕ್ ಆಗಿರಬಹುದು. ಹೆಚ್. ಡಿಕೆ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗಲೇ ಸಿದ್ದು ತಮ್ಮ ಆಪ್ತರ ಮೂಲಕ ಸಿದ್ದನೇ ಸಿಎಂ ಎಂಬ ಹೇಳಿಕೆಯನ್ನು ಹರಿಬಿಟ್ಟು ಹೆಚ್ ಡಿಕೆ ನಿದ್ದೆಗೆಡೆಸಿದ್ರು. ಇದರಿಂದ ಹೆಚ್. ಡಿಕೆ ತಮಗೆ ಸಿಎಂ ಹುದ್ದೆಯೇ ಬೇಡ ಎಂದು ಬೇಕಾದ್ರೆ ರಾಜೀನಾಮೆ ಕೊಡ್ತೀನಿ ಅಂತ ಹೇಳೋ ಮೂಲಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ರು.
ಈ ಮಧ್ಯೆ ನನ್ನ ಬೆಂಬಲಿಗ ಶಾಸಕರು ನನ್ನ ಸಿಎಂ ಎಂದ್ರೆ ಅದ್ಕೆ ನಾನೇನ ಮಾಡ್ಲಿ ಅಂತ ಸಿದ್ದು ತಾಪೇ ಹಚ್ಚಿದ್ರು. ಆದ್ರೀಗ ನಾನು ಸಿಎಂ ಆದ್ರೆ 10 ಕೆಜಿ ಅಕ್ಕಿ ಕೊಡ್ತೀನಿ ಅಂತ ಹೇಳೋ ಮೂಲಕ ಸಿದ್ದು ಮತ್ತೆ ತಮ್ಮ ಸಿಎಂ ಆಸೆಯನ್ನು ಹೊರಹಾಕಿದ್ದಾರೆ. ಒಂದು ಕಾಲದಲ್ಲಿ ಡಿಕೆಶಿ ಹಾಗೂ ಹೆಚ್. ಡಿಕೆ ಅನ್ನು ಹೊಡಿಯೋ ಯತ್ನ ನಡೆಸಿದ್ದಾರೆ.
ಇತ್ತ ಬಿಜೆಪಿಯಲ್ಲಿ ಯಡಿಯೂರಪ್ಪ ಮುಂದಿನ ಸಿಎಂ ಆಗೋದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪಕ್ಷದಲ್ಲಿ ಒಳಜಗಳ ಬಗ್ಗೆ ಬಹಿರಂಗವಾಗುತ್ತಿದ್ದಂತೆ ಪ್ರತಿಪಕ್ಷದಲ್ಲಿ ಹೊಸ ಉತ್ಸಾಹ ಮೂಡಿದೆ. ಹೀಗಾಗಿ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಬಿಸಿ ಬಿಸಿ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ.

